Bommai budget 2023: ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣ ಸ್ಥಾಪನೆ

ಉಡುಪಿ: (Bommai budget 2023) 2023 ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ‌ ಮಂಡನೆಯಾಗಿರುವ ಬಜೆಟ್ ಕೆಲ ವರ್ಗಕ್ಕೆ ಕಹಿಯಾದರೇ ಹಲವು ವರ್ಗಕ್ಕೆ ಸಿಹಿಹಂಚಿದೆ.ಕಲಾ ಕ್ಷೇತ್ರದಲ್ಲಿ ಬೊಮ್ಮಾಯಿ ಅವರ ಬಜೆಟ್‌ ಹೆಚ್ಚು ನಿರೀಕ್ಷೆಗಳನ್ನಿಟ್ಟಿದ್ದು, ನಮ್ಮ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಹಾಗೂ ಸಾಂಸ್ಕ್ಋತಿಕ ಹಿರಿಮೆಗೆ ಪ್ರಸಿದ್ದವಾಗಿದ್ದು, ಇದೀಗ ಉಡುಪಿಯಲ್ಲಿ ಯಕ್ಷರಂಗಾಯಣವನ್ನು ಸ್ಥಾಪನೆ ಮಾಡುವಂತೆ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶ್ರೀ ಶಿವರಾಮ ಕಾರಂತರ ಯಕ್ಷಗಾನ ಹಾಗೂ ಶ್ರೀ ಬಿವಿ ಕಾರಂತರ ರಂಗಭೂಮಿ , ಈ ಇಬ್ಬರು ಮಹಾನ್‌ ಸಾಧಕರ ರಂಗಕೃಷಿತಯ ಕೆಲಸಗಳನ್ನು ಮಾದರಿಯಾಗಿಟ್ಟುಕೊಂಡು, ಈ ರಂಗಾಯಣವು ರಂಗಭೂಮಿ ಮತ್ತು ಯಕ್ಷಗಾನ ಕಲೆಯ ಕೊಂಡಿಯಾಗಿ ಕೆಲಸ ಮಾಡಲಿದೆ. ಈ ಇಬ್ಬರು ಯಕ್ಷ ರಂಗ ಭೀಷ್ಮರು ರೂಪಿಸಿದ ಅಂಶಗಳನ್ನು ಕರಾವಳಿ ಭಾಗದ ಸಾಂಸ್ಕೃತಿಕ ಸೊಗಡನ್ನು ಅಳವಡಿಸಿಕೊಂಡು ಆರಂಭಿಸಿದ ರಂಗಚಟುವಿಕೆಯೇ ಈ ಯಕ್ಷರಂಗಾಯಣ.

ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನಲೆಯಲ್ಲಿನ ನಾಟಕಗಳ ರಂಗಪ್ರಯೋಗ ಹಾಗೂ ಪ್ರದರ್ಶನ ಹಾಗೂ ತೆಂಕು, ಬಡಗು ತಿಟ್ಟಿನ ಯಕ್ಷಗಾನ ಆಧಾರಿತ ನಾಟಕಗಳ ರಂಗಶಾಲೆ ರೂಪುಗೊಳ್ಳಲಿದೆ. ಇಲ್ಲಿ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಯಕ್ಷಗಾನ ತರಭೇತಿ, ರಂಗ ಶಿಬಿರಗಳು, ಕರಾವಳಿ/ಮಲೆನಾಡಿನ ಪ್ರಾದೇಶಿಕ ಸೊಗಡನ್ನು ಪರಿಚಯಿಸುವ ನಾನಾ ರಂಗ ಚಟುವಟಿಕೆಗಳು ಈ ಮೂಲಕ ಆರಂಭವಾಗಲಿದೆ.

ಯಕ್ಷಗಾನ ಕಲೆಯ ಸರ್ವಾಂಗೀಣ ಅಧ್ಯಯನಕ್ಕಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿದಿ ಅಕಾಡೆಮಿಯನ್ನು ಒಳಗೊಂಡ ಒಂದು ರಂಗಾಯಣ ಮಾದರಿಯ ರೆಪರ್ಟರಿ ಸಂಸ್ಥೆಯನ್ನು ಸರಕಾರದ ವತಿಯಿಂದ ನಡೆಸುವ ಅಗತ್ಯವಿತ್ತು. ಈ ಕಾರಣದಿಂದ ಬೊಮ್ಮಾಯಿ ಅವರು ಬಜೆಟ್‌ ನಲ್ಲಿ ಉಡುಪಿಯಲ್ಲಿ ಯಕ್ಷರಂಗಾಯಣ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : Education budget 2023: ಶಿಕ್ಷಣ ಕ್ಷೇತ್ರಕ್ಕೆ ಬೊಮ್ಮಾಯಿ ಭರ್ಜರಿ ಗಿಫ್ಟ್:‌ ಉಚಿತ ಶಿಕ್ಷಣ, ಉಚಿತ ಬಸ್‌ಪಾಸ್‌, ಸಹಾಯಧನ ಹೆಚ್ಚಳ

ಇದನ್ನೂ ಓದಿ : Sports budget 2023: ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಜ್ಯ ಕ್ರೀಡಾ ಬಜೆಟ್‌

ಇದನ್ನೂ ಓದಿ : Bengaluru Metro budget: ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ 16,328 ಕೋಟಿ ಘೋಷಣೆ

Bommai budget 2023: Establishment of Yaksharangayana in Udupi district

Comments are closed.