ಕರ್ನಾಟಕ ರಾಜ್ಯ ಬಜೆಟ್‌ 2023 : ಕರಾವಳಿಗೆ ಈ ಬಾರಿ ಭರ್ಜರಿ ಆಫರ್‌ ನೀಡಿದ ಬೊಮ್ಮಾಯಿ

ಬೆಂಗಳೂರು : ರಾಜ್ಯದ ಬಹು ನಿರೀಕ್ಷಿತ ಜನಪರ ಬಜೆಟ್‌ನ್ನು ಸಿಎಂ ಬಸವರಾಜ್‌ ಬೊಮ್ಮಾಯಿ ಮಂಡಿಸಿದ್ದಾರೆ. ಈ ಬಾರೀ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಹೀಗಾಗಿ ರಾಜ್ಯ ಬಜೆಟ್‌ನಿಂದ ಕರಾವಳಿ (Coastal State Budget 2023) ಜನತೆ ಸಾಕಷ್ಟು ಪ್ರಯೋಜನಗಳು ಸಿಗುವಂತೆ ಆಗಿದೆ.

ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕೆಗೆ ಪ್ರೋತ್ಸಾಹ :
ಭಾರತ ಸರಕಾರದ ಸಾಗರಮಾಲಾ ಯೋಜನೆಯಡಿ 597 ಕೋಟಿ ರೂ ಗಳ 12 ಕಿರು ಬಂದರುಗಳ ಅಭಿವೃದ್ಧಿ ಮಾಡಲಾಗುವುದು. ಹಳೆ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್ ಯಾರ್ಡ್ ಕಾರ್ಯಾಚಾರಣೆ ಪ್ರಾರಂಭಿಸಲಾಗುವುದು. ಪ್ರವಾಸೋದ್ಯಮ ಉತ್ತೇಜನಕ್ಕೆ ಖಾಸಗಿ ಸಹಭಾಗಿತ್ವದೊಂದಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾ ಅಭಿವೃದ್ದಿ. ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಒಳಸಾರಿಗೆ ಸಂಪರ್ಕ ಕಲ್ಪಿಸಲು ಬಾರ್ಜ್ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು. ಮಂಗಳೂರು- ಹಂಗಾರಕಟ್ಟೆಯಲ್ಲಿ ಸಾರ್ವಜನಿಕ- ಖಾಸಗಿ light cargo transport ಬೋಟ್ ಸೇವೆಗಳನ್ನು ಪ್ರಾರಂಭಿಸಲಾಗವುದು. ಮಂಗಳೂರು, ಕಾರವಾರ, ಗೋವಾ, ಮುಂಬಯಿ ಜಲಸಾರಿಗೆ ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾ ವನ್ನು ಅಭಿವೃದ್ಧಿಪಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕಿಸಿ.

ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ :
ಕುಮಟಾದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ. ಕರಾವಳಿ ಮಲೆನಾಡಿಗೆ ‘ಸಹ್ಯಾದ್ರಿ ಸಿರಿ’ ಯೋಜನೆ ಜಾರಿ ಮಾಡಲಾಗುವುದು ಎಂದು ಘೋಷಿಸಿದರು. ಕಳೆದ ಹಲವು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನರು ಪಕ್ಷಾತೀತವಾಗಿ ಜಿಲ್ಲೆಗೊಂದು ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಬೇಕೆಂದು ಕೇಳುತ್ತಲೇ ಬಂದಿದ್ದರು. ಆದರೆ ರಾಜಕೀಯ ಪಕ್ಷಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆಸ್ಪತ್ರೆ ನಿರ್ಮಾಣವಾಗಿರಲಿಲ್ಲ. ಆದರೆ ಈಗ ಬಜೆಟ್ ನಲ್ಲಿ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಘೋಷಿಸಲಾಗಿದೆ.ಆಸ್ಪತ್ರೆ ಅಗತ್ಯವೇಕೆ?! ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೃಷಿ ಯಿಂದಲೇ ಬದುಕು ಕಟ್ಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯನ್ನು ಒಳಗೊಂಡಿದೆ. ಅಲ್ಲದೇ ಒಟ್ಟು 11 ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ರಸ್ತೆ,ಸಾರಿಗೆ ಹಾಗೂ ವಾಹನ ಸೌಲಭ್ಯ ದಲ್ಲಿ ಇಂದಿಗೂ ನೀರಿಕ್ಷಿತ ಪ್ರಮಾಣದ ಅಭಿವೃದ್ಧಿಯಾಗಿಲ್ಲ.

ಪ್ರವಾಸಕ್ಕೆ ಬಂದವರು ಕಡಲಿನ‌ನೀರಿನಲ್ಲಿ ಸಿಲುಕಿ ಅಸ್ವಸ್ಥರಾದರೂ ಅವರನ್ನು ಅಂಬುಲೆನ್ಸ್ ನಲ್ಲಿ ದೂರದ ಮಂಗಳೂರಿಗೆ ಕರೆದುಕೊಂಡು ಹೋಗಬೇಕು. ಈ ವೇಳೆ ರಸ್ತೆಯಲ್ಲೇ ರೋಗಿಗಳು ಸಾಯುವ ಸಂದರ್ಭ ಮರುಕಳಿಸುತ್ತಿದೆ. ಹೀಗಾಗಿ ಜಿಲ್ಲೆಗೊಂದು ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಜಿಲ್ಲೆಯ ಎಲ್ಲ ತಾಲೂಕಿಗೆ ಮಧ್ಯಭಾಗದಲ್ಲಿ ನಿರ್ಮಾಣವಾಗಬೇಕೆಂಬ ಒತ್ತಡ ಕೇಳಿಬಂದಿತ್ತು. ಇದಕ್ಕಾಗಿ ಕುಮಟಾದಲ್ಲಿ ಈಗಾಗಲೇ ಜಾಗ ಪರಿಶೀಲನೆ ಕೂಡ ಮಾಡಲಾಗಿತ್ತು.

ಆದರೆ ಕೊನೆಗೆ ಅರ್ಥಿಕ ಇಲಾಖೆ ಬಜೆಟ್ ಕೊರತೆಯ ಕಾರಣಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಅನುದಾನದ ಕೊರತೆ ಕಾರಣವೊಡ್ಡಿ ಆಸ್ಪತ್ರೆ ನಿರ್ಮಾಣ ಕೈಬಿಟ್ಟಿತ್ತು.ಈಗ ಮತ್ತೊಮ್ಮೆ ಸಿಎಂ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣ ಘೋಷಿಸಿದ್ದಾರೆ. ಆದರೆ ಇದು ಕೇವಲ ಚುನಾವಣೆಯ ಹೊತ್ತಿನಲ್ಲಿ ಜನರ‌ ಮನವೊಲಿಸಲು ಮಾಡಿರೋ ಘೋಷಣೆ ಎಂಬ ಮಾತು ಬಲವಾಗಿ ಕೇಳಿ ಬರ್ತಿದ್ದು, ಚುನಾವಣೆ ಮುಗಿದ ಮೇಲೆ ಮತ್ತೆ ಆಸ್ಪತ್ರೆ ಗಾಗಿ ಜನರು ಬೀದಿಗಿಳಿಯೋ ದಿನ ಬರಲಿದೆ ಎಂದು ಹೇಳಲಾಗ್ತಿದೆ.

ಶ್ರೀ ನಾರಾಯಣ ಗುರು ವಸತಿ ಶಾಲೆಗೆ 18 ಕೋಟಿ ಅನುದಾನ :
ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ಪ್ರತಿ ಶಾಲೆಗೆ ೧೮ ಕೋಟಿ ರೂ. ವೆಚ್ಚದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಎಇಎಂ ಬೊಮ್ಮಾಯಿ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಹಾಗೂ ಮೂಲ ಸೌಕರ್ಯಗಳಿಂದ ಕೂಡಿದ ವಸತಿ ಯೋಜನೆಯನ್ನು ಮಾಡಲಾಗುವುದು. ಹೀಗಾಗಿ ವಿದ್ಯಾರ್ಥಗಳಿಗೆ ವಸತಿ ಉಡುಪಿ, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿನ ವಸತಿ ಶಾಲೆಗಳ ಅಭಿವೃದ್ಧಿ ಮಾಡಲಾಗುವುದು.

ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣ ಸ್ಥಾಪನೆ :
2023 ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ‌ ಮಂಡನೆಯಾಗಿರುವ ಬಜೆಟ್ ಕೆಲ ವರ್ಗಕ್ಕೆ ಕಹಿಯಾದರೇ ಹಲವು ವರ್ಗಕ್ಕೆ ಸಿಹಿಹಂಚಿದೆ.ಕಲಾ ಕ್ಷೇತ್ರದಲ್ಲಿ ಬೊಮ್ಮಾಯಿ ಅವರ ಬಜೆಟ್‌ ಹೆಚ್ಚು ನಿರೀಕ್ಷೆಗಳನ್ನಿಟ್ಟಿದ್ದು, ನಮ್ಮ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಹಾಗೂ ಸಾಂಸ್ಕ್ಋತಿಕ ಹಿರಿಮೆಗೆ ಪ್ರಸಿದ್ದವಾಗಿದ್ದು, ಇದೀಗ ಉಡುಪಿಯಲ್ಲಿ ಯಕ್ಷರಂಗಾಯಣವನ್ನು ಸ್ಥಾಪನೆ ಮಾಡುವಂತೆ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶ್ರೀ ಶಿವರಾಮ ಕಾರಂತರ ಯಕ್ಷಗಾನ ಹಾಗೂ ಶ್ರೀ ಬಿವಿ ಕಾರಂತರ ರಂಗಭೂಮಿ , ಈ ಇಬ್ಬರು ಮಹಾನ್‌ ಸಾಧಕರ ರಂಗಕೃಷಿತಯ ಕೆಲಸಗಳನ್ನು ಮಾದರಿಯಾಗಿಟ್ಟುಕೊಂಡು, ಈ ರಂಗಾಯಣವು ರಂಗಭೂಮಿ ಮತ್ತು ಯಕ್ಷಗಾನ ಕಲೆಯ ಕೊಂಡಿಯಾಗಿ ಕೆಲಸ ಮಾಡಲಿದೆ. ಈ ಇಬ್ಬರು ಯಕ್ಷ ರಂಗ ಭೀಷ್ಮರು ರೂಪಿಸಿದ ಅಂಶಗಳನ್ನು ಕರಾವಳಿ ಭಾಗದ ಸಾಂಸ್ಕೃತಿಕ ಸೊಗಡನ್ನು ಅಳವಡಿಸಿಕೊಂಡು ಆರಂಭಿಸಿದ ರಂಗಚಟುವಿಕೆಯೇ ಈ ಯಕ್ಷರಂಗಾಯಣ.

ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನಲೆಯಲ್ಲಿನ ನಾಟಕಗಳ ರಂಗಪ್ರಯೋಗ ಹಾಗೂ ಪ್ರದರ್ಶನ ಹಾಗೂ ತೆಂಕು, ಬಡಗು ತಿಟ್ಟಿನ ಯಕ್ಷಗಾನ ಆಧಾರಿತ ನಾಟಕಗಳ ರಂಗಶಾಲೆ ರೂಪುಗೊಳ್ಳಲಿದೆ. ಇಲ್ಲಿ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಯಕ್ಷಗಾನ ತರಬೇತಿ, ರಂಗ ಶಿಬಿರಗಳು, ಕರಾವಳಿ/ಮಲೆನಾಡಿನ ಪ್ರಾದೇಶಿಕ ಸೊಗಡನ್ನು ಪರಿಚಯಿಸುವ ನಾನಾ ರಂಗ ಚಟುವಟಿಕೆಗಳು ಈ ಮೂಲಕ ಆರಂಭವಾಗಲಿದೆ.

ಇದನ್ನೂ ಓದಿ : Fishermen Budget 2023 : ಬೈಂದೂರಿನಲ್ಲಿ ಸೀ ಪುಡ್ ಪಾರ್ಕ್ : ಬಜೆಟ್ ನಲ್ಲಿ ಮೀನುಗಾರರಿಗೆ ಸಿಕ್ಕಿದ್ದೇನು ?

ಇದನ್ನೂ ಓದಿ : Education budget 2023: ಶಿಕ್ಷಣ ಕ್ಷೇತ್ರಕ್ಕೆ ಬೊಮ್ಮಾಯಿ ಭರ್ಜರಿ ಗಿಫ್ಟ್:‌ ಉಚಿತ ಶಿಕ್ಷಣ, ಉಚಿತ ಬಸ್‌ಪಾಸ್‌, ಸಹಾಯಧನ ಹೆಚ್ಚಳ

ಇದನ್ನೂ ಓದಿ : Sports budget 2023: ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಜ್ಯ ಕ್ರೀಡಾ ಬಜೆಟ್‌

ಯಕ್ಷಗಾನ ಕಲೆಯ ಸರ್ವಾಂಗೀಣ ಅಧ್ಯಯನಕ್ಕಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿದಿ ಅಕಾಡೆಮಿಯನ್ನು ಒಳಗೊಂಡ ಒಂದು ರಂಗಾಯಣ ಮಾದರಿಯ ರೆಪರ್ಟರಿ ಸಂಸ್ಥೆಯನ್ನು ಸರಕಾರದ ವತಿಯಿಂದ ನಡೆಸುವ ಅಗತ್ಯವಿತ್ತು. ಈ ಕಾರಣದಿಂದ ಬೊಮ್ಮಾಯಿ ಅವರು ಬಜೆಟ್‌ ನಲ್ಲಿ ಉಡುಪಿಯಲ್ಲಿ ಯಕ್ಷರಂಗಾಯಣ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Coastal State Budget 2023: Karnataka State Budget 2023: Bommai has given a huge offer to Coastal this time.

Comments are closed.