Budget 2023 expectations: ಬಜೆಟ್‌ 2023: ಈ ಬಾರಿ ಕರ್ನಾಟಕದ ನಿರೀಕ್ಷೆಗಳೇನು?

ಬೆಂಗಳೂರು: (Budget 2023 expectations) ಇನ್ನೇನೂ ಕೇಂದ್ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಜನತೆ ಬಜೆಟ್‌ ಮೇಲೆ ಹಲವು ನಿರೀಕ್ಷೆಗಳನ್ನು ಹೊಂದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್‌ ಮಂಡಿಸಲಿದ್ದು, ಈಗಾಗಲೇ ಹಲವಾರು ವಲಯಗಳು ಕೇಂದ್ರ ಬಜೆಟ್‌ ಮೇಲಿನ ನಿರೀಕ್ಷೆಗಳನ್ನು ತಿಳಿಸಿದ್ದಾರೆ. ಹಾಗೆಯೇ ತಮ್ಮ ಬೇಡಿಕೆಗಳನ್ನು ಕೂಡ ಕೇಂದ್ರ ಸರಕಾರದ ಮುಂದಿಟ್ಟಿದ್ದು, ಕರ್ನಾಟಕವೂ ಹಲವಾರು ನಿರೀಕ್ಷೆಗಳನ್ನು ಹೊಂದಿದೆ.

ಕರ್ನಾಟಕದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ನಿಧಿಯನ್ನು ಹಂಚಿಕೆ ಮಾಡಲು ಕೇಂದ್ರ ಸರಕಾರ ಸಿದ್ದತೆ ನಡೆಸುತ್ತಿದ್ದು, ಪ್ರಮುಖವಾಗಿ ಬೆಂಗಳೂರಿನ ಮೇಲೆ ಹೆಚ್ಚಿನ ಆದ್ಯತೆ ನೀಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಗುಜರಾತ್‌ ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡಿಗೆ ಫಿನ್‌ ಟೆಕ್‌ ಸಿಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೂ ಯೋಜನೆಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

ಇನ್ನೂ ನೆಲಮಂಗಲ, ಹೊಸಕೋಟೆ, ದೊಡ್ಡ‌ ಬಳ್ಳಾಪುರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅಭಿವೃದ್ದಿ ಯೋಜನೆ ಜಾರಿ ಮಾಡುವ ನಿರೀಕ್ಷೆಯಿದೆ. ಅಲ್ಲದೇ ಸ್ಮಾರ್ಟ್‌ ಸಿಟಿ ಯೋಜನೆ ಪಟ್ಟಿಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ರಾಜ್ಯ ಸರಕಾರ ಹೊಂದಿದೆ. ಕರ್ನಾಟಕದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವ ಹಿನ್ನಲೆಯಲ್ಲಿ ಕೃಷಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳ ಮೇಲಿನ ತೆರಿಗೆ ವಿನಾಯಿತಿ ಸಿಗುವ ಸಾಧ್ಯತೆಯನ್ನು ನಿರೀಕ್ಷಿಸಿದೆ. ಇನ್ನೂ ನೀರಿನ ಯೋಜನೆಗಳಿಗೂ ಉತ್ತಮ ಪ್ಯಾಕೇಜ್ ಸಿಗುವ ನಿರೀಕ್ಷೆ ಇದ್ದು, ಜಲ ಯೋಜನೆಗಳು ರಾಜ್ಯ ಸರಕಾರದ ಪಟ್ಟಿಯಲ್ಲಿದೆ.

ಕಾರವಾರ ಸಮುದ್ರ ಬಂದರಿನ ಉನ್ನತೀಕರಣವು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಗತ್ಯ ಮಂಜೂರಾತಿ ಮತ್ತು ಹಣ ಬಿಡುಗಡೆ ಮಾಡುವುದು. ಕಾರವಾರಕ್ಕೆ ರೈಲು ಸಂಪರ್ಕ ಹಾಗೂ ಸಮುದ್ರ ಬಂದರನ್ನು ಮೇಲ್ದರ್ಜೆಗೇರಿಸುವ ನಿರೀಕ್ಷೆಯನ್ನು ಹೊಂದಿದೆ. ಕಳಸ ಬಂಡೂರಿ ಯೋಜನೆ, ಮೇಕೆದಾಟು ಯೋಜನೆ, ಎತ್ತಿನಹೊಳೆ, ಕೃಷ್ಣ ಮೊದಲ ಹಂತ, ಎರಡನೇ ಹಂತದ ಕಾಮಗಾರಿ, ನವಾಲಿಯಲ್ಲಿ ಉಳಿದ ಕಾಮಗಾರಿಗಳಿವೆ. ಒಟ್ಟಾಗಿ ಈ ಯೋಜನೆಗಳಿಗೆ ಅಂದಾಜು 25,000 ರೂಪಾಯಿ ಆಗಿದ್ದು, ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮೇಲೆ ರಾಜ್ಯದ ನಿರೀಕ್ಷೆಗಳಿವೆ.

ಕೇಂದ್ರ ಸರಕಾರವು ಶೇಕಡ 80 ರಷ್ಟು ನಿಧಿ ಹಂಚಿಕೆ ಮಾಡುವ ನಿರೀಕ್ಷೆಯಿದ್ದು, ಇದಕ್ಕಾಗಿ ಕೇಂದ್ರ ಸಚಿವಾಲಯಕ್ಕೆ ಜಲ ಶಕ್ತಿ ಸಚಿವಾಲಯವು ಸುತ್ತೋಲೆ ಕಳುಹಿಸಿದೆ. ಈ ಬಾರಿ ಕರ್ನಾಟಕ ರಾಜ್ಯ ಸರಕಾರವು ಸುಮಾರು 40 ಲಕ್ಷ ಕುಟುಂಬಗಳಿಗೆ ಅಥವಾ ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡುವ ಗುರಿಯನ್ನು ಹೊಂದಿದ್ದು, ಜಲ ಜೀವನ ಮಿಷನ್‌ ಅಡಿಯಲ್ಲಿ ನೀರಿನ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದೆ. ಹಾಗೆಯೇ ಕೇಂದ್ರ ಸರಕಾರವು ಕರ್ನಾಟಕ ರಾಜ್ಯದಲ್ಲಿ ಹೊಸ ರೈಲನ್ನು ಆರಂಭಿಸುವ ನಿರೀಕ್ಷೆಯಿದೆ, ಹುಬ್ಬಳ್ಳಿ ಬೆಂಗಳೂರು ನಡುವೆ ವಂದೇ ಭಾರತ್‌ ರೈಲು, ಬೆಂಗಳೂರು- ತುಮಕೂರು- ಮೈಸೂರು ನಡುವೆ ಅಧಿಕ ವೇಗದ ರೈಲನ್ನು ಆರಂಭಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ಸುಮಲತಾ ಮನವೊಲಿಸಲು ಆರ್.ಅಶೋಕ್ ಕಸರತ್ತು: ಪಕ್ಷ ಕ್ಕೆ ಸೆಳೆಯಲು ಟಿಕೇಟ್ ಆಫರ್

ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಉತ್ತಮ ಕೊಡುಗೆಯನ್ನು ನೀಡುವ ಮೂಲಕ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಸಜ್ಜಾಗಿದೆ. ಬೆಳವಣಿಗೆ ಆಧಾರದಲ್ಲಿ ಕೇಂದ್ರ ಸರಕಾರವು ಕರ್ನಾಟಕ ರಾಜ್ಯವನ್ನು ಅತೀ ಮುಖ್ಯ ರಾಜ್ಯ ಎಂದು ಪರಿಗಣಿಸಿದೆ. ಅದರಿಂದಾಗಿ ಕರ್ನಾಟಕವು ಡಬಲ್‌ ಇಂಜಿನ್‌ ಸರಕಾರದಿಂದ ಪ್ರಯೋಜನವನ್ನು ಪಡೆಯಲಿದೆ ಎಂದು ತಿಳಿಸಿದ್ದಾರೆ.

Budget 2023 expectations: Budget 2023: What are Karnataka’s expectations this time?

Comments are closed.