Bhavani Revanna enters politics: ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ಗೆ ಹೊಸ ಎಂಟ್ರಿ: ಭವಾನಿ ಸ್ಪರ್ಧೆ ಎಚ್ಡಿಕೆ ಗೆ ತಲೆನೋವು

(Bhavani Revanna enters politics) ರಾಜ್ಯದಲ್ಲಿ ಚುನಾವಣೆ ಲೆಕ್ಕಾಚಾರಗಳು ಜೋರಾಗಿದೆ. ಈ ಮಧ್ಯೆ ಕೇವಲ ಕುಟುಂಬ ರಾಜಕಾರಣ ಎಂಬ ಕಾರಣಕ್ಕೆ ಟೀಕೆಗೊಳಗಾಗ್ತಿರೋ ಜೆಡಿಎಸ್ ಗೆ ಮತ್ತೊಮ್ಮೆ ಸಂಕಟ ಎದುರಾಗಿದ್ದು, ಭವಾನಿ ರೇವಣ್ಣ ವಿಧಾನಸಭಾ ಚುನಾವಣೆಗೆ ನಿಲ್ಲೋದಾಗಿ ಪಟ್ಟು ಹಿಡಿದಿದ್ದು ಕುಮಾರಸ್ವಾಮಿ ಫ್ಯಾಮಿಲಿ ಪಾಲಿಟಿಕ್ಸ್ ಸುಧಾರಿಸೋಕೆ ಸಾಧ್ಯವಾಗದೇ ಹಣೆಚಚ್ಚಿಕೊಳ್ತಿದ್ದಾರಂತೆ.

ಜೆಡಿಎಸ್ ಹಿಂದೆಂದಿಗಿಂತಲೂ ಸಮರ್ಥವಾಗಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದೆ. ಇದುವರೆಗೂ ರಾಜ್ಯದಲ್ಲಿ ನಡೆದ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಪಡೆದಿದೆ. ಈ ಮಧ್ಯೆ ಈ ಭಾರಿ ನಮ್ಮ ಕುಟುಂಬದಿಂದ ಮತ್ತೆ ಯಾರೂ ಚುನಾವಣೆಗೆ ಸ್ಪರ್ಧಿಸೋದಿಲ್ಲ. ಕಾರ್ಯಕರ್ತರಿಗೆ ಹೆಚ್ಚಿಗೆ ಅವಕಾಶ ಎಂದು ಎಚ್ಡಿಕೆ, ಎಚ್ಡಿಡಿ ಈಗಾಗಲೇ ಹಲವು ಭಾರಿ ಘೋಷಿಸಿದ್ದಾರೆ.

ಆದರೆ ಈಗ ಎಚ್ಡಿಕೆಗೆ ಮತ್ತೊಮ್ಮೆ ಕುಟುಂಬದ ಕಾರಣಕ್ಕೆ ಮುಜುಗರ ಎದುರಿಸುವ ಸ್ಥಿತಿ ಬಂದಿದೆ. ದೇವೇಗೌಡರ ಕುಟುಂಬದಿಂದ ಮತ್ತೊಬ್ಬರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದರೂ ಈಗ ಮತ್ತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಕೂಡ ಚುನಾವಣೆಗೆ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಈಗಾಗಲೇ ಭವಾನಿ ರೇವಣ್ಣ ಸಕ್ರಿಯ ರಾಜಕಾರಣದಲ್ಲಿದ್ದಾರೆ. ರೇವಣ್ಣ ಶಾಸಕರಾಗಿದ್ದಾರೆ. ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾದರೇ, ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಒಂದೊಮ್ಮೆ ಭವಾನಿ ರೇವಣ್ಣ ಚುನಾವಣೆಗೆ ಸ್ಪರ್ಧಿಸಿ ಗೆದ್ದರೇ ಇಡಿ ಕುಟುಂಬವೇ ರಾಜಕಾರಣದಲ್ಲಿ ತೊಡಗಿಕೊಂಡಂತಾಗುತ್ತದೆ.

ಇದೇ ಕಾರಣಕ್ಕೆ ಎಚ್ಡಿಕೆ , ಪತ್ನಿ ಮನವೊಲಿಸುವಂತೆ ರೇವಣ್ಣನವರ ಜೊತೆ ಮಾತುಕತೆ ನಡೆಸಿದ್ದಾರಂತೆ. ಆದರೇ ಭವಾನಿ ರೇವಣ್ಣ ಮಾತ್ರ ಯಾವ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರಂತೆ. ಎಚ್ಡಿಡಿ ಕುಟುಂಬಕ್ಕಾಗಿ ಪಕ್ಷ ಮಾಡಿದ್ದಾರೆ ಎಂಬ ಟೀಕೆ ಹಿಂದಿನಿಂದಲೂ ಇದೆ. ಈಗಾಗಲೇ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಶಾಸಕರಾಗಿ ಒಂದೇ ಭಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಈ ವೇಳೆಯೂ ಟೀಕೆ ಎದುರಿಸಿದ್ದರು.

ಇದನ್ನೂ ಓದಿ : ಸುಮಲತಾ ಮನವೊಲಿಸಲು ಆರ್.ಅಶೋಕ್ ಕಸರತ್ತು: ಪಕ್ಷ ಕ್ಕೆ ಸೆಳೆಯಲು ಟಿಕೇಟ್ ಆಫರ್

ಇದನ್ನೂ ಓದಿ : Exclusive : ಮೂಡಬಿದಿರೆಗೆ ಮಿಥುನ್ ರೈ, ಬಂಟ್ವಾಳಕ್ಕೆ ಪದ್ಮರಾಜ್ ಫಿಕ್ಸ್

ಹೀಗಾಗಿ ಈ ಭಾರಿ ಎಚ್ಡಿಕೆ ಪತ್ನಿ ಟಿಕೇಟ್ ಪುತ್ರನಿಗೆ ನೀಡಿದ್ದು ಅನಿತಾ ರಾಜಕೀಯದಿಂದ ಹಿಂದೆ ಸರಿಯುವ ಮಾತನ್ನಾಡಿದ್ದರು. ಅಲ್ಲದೇ ಪಂಚರತ್ನ ಯಾತ್ರೆ ಸೇರಿದಂತೆ ವಿವಿಧ ಪಕ್ಷದ ಕಾರ್ಯಕ್ರಮಗಳಿಂದ ಪಕ್ಷದ ಕಾರ್ಯಕರ್ತ ರಲ್ಲಿ ಪಕ್ಷ ಕುಟುಂಬ ಬಿಟ್ಟು ಕಾರ್ಯಕರ್ತರಿಗೂ ಅವಕಾಶ ನೀಡಲಿದೆ ಎಂಬ ಭಾವನೆ ಮೂಡಿಸಿದೆ. ಈಗ ಮತ್ತೊಮ್ಮೆ ಭವಾನಿ ಸ್ಪರ್ಧಿಸಿದಲ್ಲಿ ಈ ವಿಚಾರ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗುತ್ತೆ ಅನ್ನೋ ಆತಂಕವೂ ಎಚ್ಡಿಕೆಗೆ ಕಾಡುತ್ತಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಜೆಡಿಎಸ್ ಕುಟುಂಬ ರಾಜಕಾರಣದ ಕಾರಣಕ್ಕೆ ಸುದ್ದಿಯಾಗೋ ಸಾಧ್ಯತೆ ಇದೆ.

Bhavani Revanna enters politics: Deve Gowda’s new entry to family politics: Bhavani contest gives headache to HDK

Comments are closed.