Dekho Apna Desh App: ಪ್ರವಾಸೋದ್ಯಮ ಅಭಿವೃದ್ದಿಗೆ ದೇಖೋ ಅಪ್ನಾ ದೇಶ್‌ ಆಪ್‌

ನವದೆಹಲಿ: (Dekho Apna Desh App) ಭಾರತದಲ್ಲಿನ ಪವಾಸಿ ತಾಣಗಳ ಅಭಿವೃದ್ದಿಗೆ ಕೇಂದ್ರ ಸರಕಾರ ಮಹತ್ವದ ಯೋಜನೆಯನ್ನು ಘೋಷಿಸಿದೆ. ಕೇಂದ್ರ ಬಜೆಟ್ ನಲ್ಲಿ ಈ ಬಾರಿ ದೇಖೋ ಅಪ್ನಾ ದೇಶ್‌ ಯೋಜನೆಯಡಿಯಲ್ಲಿ ಆಪ್ ಜಾರಿಗೆ ತರಲಾಗುತ್ತಿದೆ. ಈ ಮೂಲಕ ದೇಶದ ಐವತ್ತು ಪ್ರಮುಖ ಪ್ರವಾಸಿತಾಣಗಳನ್ನು ಅಭಿವೃದ್ದಿ ಮಾಡಲಾಗುತ್ತದೆ.

ಕೊರೊನಾ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ತೀವ್ರ ತೊಂದರೆ ಅನುಭವಿಸಿದ್ದು, ನಂತರದಲ್ಲಿ ಪ್ರವಾಸೋದ್ಯಮ ಉದ್ಯಮವು ಸ್ವಲ್ಪ ಚೇತರಿಕೆ ಕಂಡಿದೆ. ಪ್ರವಾಸೋದ್ಯಮ ಕ್ಷೇತ್ರವು ಆರ್ಥಿಕತೆಗೆ ಕೊಡುಗೆ ನೀಡುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಜೀವನೋಪಾಯಕ್ಕಾಗಿ ಹಲವಾರು ಮಂದಿ ಪ್ರವಾಸೋದ್ಯಮವನ್ನು ಅವಲಂಭಿಸಿದ್ದಾರೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ರಚಿಸಿದ ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್‌ಇಜಿಡಿ) ಸಂಸ್ಥೆಯು ತನ್ನ ವೃತ್ತಿಪರ ತಂಡದೊಂದಿಗೆ ನಾಗರಿಕರ ಪಾಲ್ಗೊಳ್ಳುವಿಕೆ ನೋದಾವಣೆ ಮತ್ತು ಡಿಜಿಟಲ್ ಸಂವಹನ ವೇದಿಕೆಯನ್ನು ಬಳಸಿಕೊಂಡು ನೇರವಾಗಿ ತಾಂತ್ರಿಕ ನೆರವು ನೀಡುವ ಮೂಲಕ ದೇಖೋ ಅಪ್ನಾ ದೇಶ್‌ ಎಂಬ ವೆಬ್ನಾರ್ ಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತದ ವಿವಿಧ ತಾಣಗಳ ಬಗ್ಗೆ ಹೊಸ ಮತ್ತು ಕೇಳದ ಅನುಭವಗಳೊಂದಿಗೆ ಪ್ರೇಕ್ಷಕರನ್ನು ಶ್ರೀಮಂತಗೊಳಿಸಲು ಪ್ರಸ್ತುತಿ ಪಡಿಸುತ್ತಿರುವ ದೇಖೋ ಅಪ್ನಾ ದೇಶ್‌ ಎಂಬ ವೆಬ್ನಾರ್ ಸರಣಿಯ ಮೂಲಕ ಅತ್ಯುತ್ತಮ ಪ್ರವಾಸೋದ್ಯಮ ತಜ್ಞರು, ನಗರ ಮತ್ತು ಪರಂಪರೆಯ ನಡಿಗೆ ಅಭ್ಯಾಸಕಾರರು, ಕಥೆ ಹೇಳುವವರನ್ನು ಪಡೆಯಲು ಸಾಧ್ಯವಾಗಿದೆ. ದೇಖೋ ಅಪ್ನಾ ದೇಶ್‌ ಆಪ್‌ ಮೂಲಕ ಪ್ರವಾಸಿ ತಾಣಗಳ ಕುರಿತಾದಂತಹ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಈ ಮೂಲಕ ಪ್ರವಾಸಿ ತಾಣಗಳ ಅಭಿವೃದ್ದಿಯಾಗಲಿದೆ .

ಇದನ್ನೂ ಓದಿ : ಆಭರಣ ಪ್ರಿಯರಿಗೆ ಮೋದಿ ಶಾಕ್ : ದುಬಾರಿಯಾಲಿದೆ ಚಿನ್ನ, ಬೆಳ್ಳಿ, ವಜ್ರ

ಇದನ್ನೂ ಓದಿ : Free ration extension: ಬಡವರಿಗೆ ಉಚಿತ ಪಡಿತರ ವಿಸ್ತರಣೆ : ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ

ಈ ಹಿನ್ನಲೆಯಲ್ಲಿ ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರು ಪ್ರವಾಸೋದ್ಯಮದ ಅಭಿವೃದ್ದಿಗೆ ದೇಖೋ ಅಪ್ನಾ ದೇಶ್‌ ಆಪ್‌ ಯೋಜನೆಯನ್ನು ಘೋಷಿಸಿದ್ದು, ಇದರಿಂದಾಗಿ ಪ್ರವಾಸೋದ್ಯಮ ಉದ್ಯಮಿಗಳ ಜೀವನೋಪಾಯಕ್ಕೆ ದಾರಿಯಾಗಿಸಿದ್ದಾರೆ.

Dekho Apna Desh App: Dekho Apna Desh App for tourism development

Comments are closed.