ಆಭರಣ ಪ್ರಿಯರಿಗೆ ಮೋದಿ ಶಾಕ್ : ದುಬಾರಿಯಾಲಿದೆ ಚಿನ್ನ, ಬೆಳ್ಳಿ, ವಜ್ರ

ನವದೆಹಲಿ : ಚಿನ್ನ ಬೆಳ್ಳಿ, ವಜ್ರ ಖರೀದಿದಾರರಿಗೆ ಈ ಬಾರಿ ಬಜೆಟ್‌ ಬೇಸರ (Gold jewelry is expensive) ಮೂಡಿಸಿದೆ. ಆಭರಣ ಪ್ರಿಯರಾದ ಮಹಿಳೆಯರಿಗೆ ಈ ಬಾರಿ ಬಜೆಟ್‌ ಮಂಡನೆಯಿಂದಾಗಿ ಬೇಸರ ಮೂಡಿಸಿದೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ದುಬಾರಿ ಆಗಲಿದೆ ಎಂದು ತಿಳಿಸಿದೆ. ಚಿನ್ನಾಭರಣ ವಿಶ್ವದಲ್ಲೇ ಅತೀ ಅಮೂಲ್ಯವಾದ ಲೋಹವಾಗಿದೆ. ಚಿನ್ನಾಭರಣಗಳ ಮೇಲೆ ಮಹಿಳೆಯರಿಗೆ ಹೆಚ್ಚಿನ ಒಲವು ಇರುತ್ತದೆ. ಯಾಕೆಂದರೆ ಹೆಂಗಳೆಯರು ತಮ್ಮ ಅಲಂಕಾರಕ್ಕೆ ಹೆಚ್ಚಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಚಿನ್ನಾಭರಣಗಳ ಬೆಲೆ ಗಗನಕ್ಕೇರುತ್ತಿದ್ದು, ಇದ್ದರಿಂದ ಮಧ್ಯಮ ವರ್ಗದ ಜನರಿಗೆ ಕಷ್ಟದ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಸಾಕಷ್ಟು ಏರಿಕೆ ಕಂಡಿರುವ ಚಿನ್ನಾಭರಣಗಳು, ಈ ಬಾರಿ ಕೇಂದ್ರ ಬಜೆಟ್‌ನಿಂದಾಗಿ ಇನ್ನು ಎಷ್ಟರ ಮಟ್ಟಿಗೆ ಏರಿಕೆ ಕಾಣಲಿದೆ ಎನ್ನುವುದನ್ನು ನೋಡಬೇಕಿದೆ. ಹೀಗಾಗಿ ಜನಸಾಮಾನ್ಯರಿಗೆ ಇನ್ನಷ್ಟು ಕಷ್ಟದ ಪರಿಸ್ಥಿತಿ ಉಂಟಾಗುವುದಂತು ಸತ್ಯ. ಜನ ಸಾಮಾನ್ಯರ ಹೆಣ್ಣು ಮಕ್ಕಳ ಮದುವೆಯಲ್ಲಿ ಚಿನ್ನಾಭರಣ ಖರೀದಿ ಮುಖ್ಯವಾಗಿರುತ್ತದೆ. ಈ ಬಾರಿಯ ಬಜೆಟ್‌ನಿಂದಾಗಿ ಜನ ಸಾಮಾನ್ಯರು ತಮ್ಮ ಹೆಣ್ಣು ಮಕ್ಕಳ ಮದುವೆಗೆ ಮತ್ತಷ್ಟು ಕಷ್ಟ ಪಡುವಂತೆ ಆಗುತ್ತದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಲೋಕಸಭೆ ಚುನಾವಣೆಯ ಮೊದಲು ಮೋದಿ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಮೀನುಗಾರರಿಗೆ, ಮೂಲಸೌಕರ್ಯ, ರಕ್ಷಣೆ ಮತ್ತು ಲಾಜಿಸ್ಟಿಕ್ಸ್‌ಗೆ ಹಣವನ್ನು ಹೆಚ್ಚಿಸುವ ನಿರೀಕ್ಷೆಯಿದ್ದು, ಸಂಬಂಧಿತ ಕಂಪನಿಗಳಿಗೆ ವಿಂಡ್‌ಫಾಲ್‌ಗಳನ್ನು ಒದಗಿಸುತ್ತದೆ.

ಇನ್ನು ಕೃಷಿ ಕ್ರಮಗಳು ತಂತ್ರಜ್ಞಾನ ಮತ್ತು ಡಿಜಿಟಲ್ ಪ್ರಗತಿಯನ್ನು ಹತೋಟಿಗೆ ತರುತ್ತವೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ ಅನ್ನು ಶ್ರೇಷ್ಠತೆಯ ಕೇಂದ್ರವಾಗಿ ಬೆಂಬಲಿಸಲಾಗುತ್ತದೆ. ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಅಂತರ್ಗತ ರೈತ-ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ.

ಇದನ್ನೂ ಓದಿ : ತೆರಿಗೆದಾರರಿಗೆ ಗುಡ್ ನ್ಯೂಸ್ : ಆದಾಯ ತೆರಿಗೆ ಮಿತಿ 7 ಲಕ್ಷ ರೂ.ಏರಿಕೆ

ಇದನ್ನೂ ಓದಿ : Free ration extension: ಬಡವರಿಗೆ ಉಚಿತ ಪಡಿತರ ವಿಸ್ತರಣೆ : ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾ

ಇದನ್ನೂ ಓದಿ : Union Budget 2023 updates: ಕೇಂದ್ರ ಬಜೆಟ್‌ 2023 : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲು

ಕೃಷಿ ಒಳಹರಿವು, ಮಾರುಕಟ್ಟೆ ಇಂಟೆಲ್, ಕೃಷಿ ಉದ್ಯಮಕ್ಕೆ ಬೆಂಬಲ, ಸ್ಟಾರ್ಟ್‌ಅಪ್‌ಗಳಿಗೆ ಸುಧಾರಿತ ಪ್ರವೇಶಕ್ಕೆ ಸಹಾಯ ಮಾಡುತ್ತದೆ. ಕೃಷಿ ವೇಗವರ್ಧಕ ನಿಧಿಯನ್ನು ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಸ್ಥಾಪಿಸಲಾಗುವುದು, ರೈತರ ಸವಾಲುಗಳಿಗೆ ನವೀನ ಮತ್ತು ಕೈಗೆಟುಕುವ ಪರಿಹಾರಗಳನ್ನು ತರುತ್ತದೆ, ಲಾಭದಾಯಕತೆಯನ್ನು ಹೆಚ್ಚಿಸುತ್ತದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ತರುತ್ತದೆ ಎಂದು ತಿಳಿಸಿದ್ದಾರೆ.

Gold jewelry is expensive: Modi shock for jewelry lovers: Gold, silver, diamonds are expensive

Comments are closed.