Karnataka budget-‌2023: ಸಿಎಂ ಬೊಮ್ಮಾಯಿ ಹೊಸ ಕೃಷಿ ನೀತಿ ಘೋಷಣೆ ಸಾಧ್ಯತೆ

ಬೆಂಗಳೂರು: (Karnataka budget-‌2023) ರಾಜ್ಯ ಬಜೆಟ್‌ ಗೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ(ಫೆ.17) ಬಜೆಟ್‌ ಮಂಡಿಸಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಜ್ಯ ಬಜೆಟ್ ನಲ್ಲಿ ರಾಜ್ಯದ ಜನತೆ ಹಲವು ನಿರೀಕ್ಷೆಗಳನ್ನಿಟ್ಟಿದ್ದು, ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ಅವರು ಕಳೆದ ವರ್ಷ ಚೊಚ್ಚಲ ಬಜೆಟ್‌ ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ ಮೀಸಲಿಟ್ಟಿದ್ದರು. ರೈತ ಶಕ್ತಿ ಸೇರಿದಂತೆ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ಗರಿಷ್ಟ 5 ಎಕರೆಗೆ ಒಳಪಟ್ಟು ಎಕರೆಗೆ 250 ರೂಪಾಯಿ ಡೀಸೆಲ್‌ ಸಬ್ಸಿಡಿಯನ್ನು ಸಹ ಘೋಷಿಸಿದ್ದರು.

ಈ ಬಾರಿಯೂ ಕೂಡ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬೊಮ್ಮಾಯಿ ಅವರು ಇತ್ತೀಚೆಗೆ ಘೋಷಿಸಿದ್ದರು. ಹೀಗಾಗಿ ಈ ಬಾರಿ ರಾಜ್ಯ ಬಜೆಟ್‌ ನಲ್ಲಿ ಕೃಷಿ ಕ್ಷೇತ್ರದಲ್ಲಿ ಹಲವು ನಿರೀಕ್ಷೆಗಳನ್ನಿಟ್ಟಿದ್ದು, ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆಗಳಿದ್ದು, ಈ ನೀತಿಯು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಸುಧಾರಿಸಲು ಹಾಗೂ ರಾಗಿ ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ.

ಮಣ್ಣಿನ ಗುಣಮಟ್ಟಕ್ಕೆ ಒತ್ತು ನೀಡುವ ಕರ್ನಾಟಕದ ಕೃಷಿ ನೀತಿಯನ್ನು ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ರಾಸಾಯನಿಕಗಳ ಮಿತಿಮೀರಿದ ಬಳಕೆಯಿಂದ ಮಣ್ಣಿನ ಗುಣಮಟ್ಟದಲ್ಲಿ ಕುಸಿತವಾಗಿದೆ. ಇದೀಗ ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು, ನೈಸರ್ಗಿಕ ಕೃಷಿಯನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ ಮಂಡನೆಯಲ್ಲಿ ಮುಖ್ಯಮಂತ್ರಿಗಳು ಹೊದ ಕೃಷಿ ನೀತಿಯನ್ನು ಘೋಷಿಸುವ ಭರವಸೆ ಇದೆ ಎಂದು ಮೂಲಗಳು ತಿಳಿಸಿವೆ.

ಕೃಷಿ ಪ್ರವಾಸೋದ್ಯಮದಲ್ಲಿ ಜನರು ರೈತರೊಂದಿಗೆ ಹೊಲಗಳಲ್ಲಿ ಸಮಯ ಕಳೆಯಲು ಅವಕಾಶ ಮಾಡಿಕೊಡಲಿದ್ದು, ಈ ಮೂಲಕ ಜನರು ಹಾಗೂ ರೈತರ ನಡುವಿನ ಅಂತರ ಕಡಿಮೆಯಾಗಲಿದೆ. ಅಲ್ಲದೇ ಕೃಷಿ ಹೊಂಡ ಯೋಜನೆಯಂತೆ ಇಲಾಖೆ ಜಲನಿಧಿ ಯೋಜನೆಗೂ ಮುಂದಾಗಿದ್ದು, ಈ ಯೋಜನೆಯು ಅಂತರ್ಜಲವನ್ನು ಮರುಪೂರಣಗೊಳಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : JP Nadda : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಡುಪಿಗೆ ಆಗಮನ

ಇದನ್ನೂ ಓದಿ : KEA conducts KCET exam: ಕೆ-ಸೆಟ್‌ ಪರೀಕ್ಷೆಗಳನ್ನ ವಿಶ್ವವಿದ್ಯಾಲಯಗಳು ಮಾಡುವ ನಿರ್ಧಾರವನ್ನು ಕೈಬಿಟ್ಟ ಸರಕಾರ

ಇತ್ತೀಚೆಗೆ ಕೇಂದ್ರ ಬಜೆಟ್‌ ಕೂಡ ಮುಗಿದಿದ್ದು, ರೈತರಿಗೆ 1.25 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಅಲ್ಲದೇ ಮಧ್ಯ ಕರ್ನಾಟಕದ ಭೂಮಿಗೆ ನೀರಾವರಿಗೆ ಸಹಾಯ ಮಾಡುವ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

Karnataka budget-2023: CM Bommai likely to announce new agriculture policy

Comments are closed.