ಹೊಸ ಆದಾಯ ತೆರಿಗೆ : 7 ಲಕ್ಷದವರೆಗೆ ತೆರಿಗೆ ವಿನಾಯಿತಿ, ಸರ್ಚಾರ್ಜ್ ದರ ಶೇ. 37 ರಿಂದ ಶೇ. 25ಕ್ಕೆ ಇಳಿಕೆ

ನವದೆಹಲಿ : ಕೇಂದ್ರ ಸರಕಾರ ಹೊಸ ತೆರಿಗೆ (New Income Tax) ಪದ್ದತಿಯನ್ನು ಜಾರಿಗೆ ತಂದಿದೆ. ಈ ಬಾರಿಯ ಬಜೆಟ್ ನಲ್ಲಿ ತೆರಿಗೆದಾರರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದು, 7 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಹಿಂದೆ 3 ರಿಂದ 5 ಲಕ್ಷ ರೂಪಾಯಿಯ ವರೆಗೆ ಶೇ.5 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಆದ್ರೀಗ 7 ಲಕ್ಷ ರೂಪಾಯಿ ವರೆಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ಹೊಸ ಆದಾಯ ತೆರಿಗೆ ಆಡಳಿತವನ್ನು ಕೂಲಂಕಷವಾಗಿ ಐದು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ಸರಕಾರವು 3 ಲಕ್ಷ ರೂಪಾಯಿಗಳವರೆಗೆ ತೆರಿಗೆ-ವಿನಾಯತಿಯನ್ನು ಮಾಡಿದೆ. 7 ಲಕ್ಷದವರೆಗಿನ ಆದಾಯ ಹೊಂದಿರುವವರು ಈಗ ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಹೊಸ ಆಡಳಿತದ ಅಡಿಯಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಹೊಸ ಆದಾಯ ತೆರಿಗೆ ಆಡಳಿತವು “ಡೀಫಾಲ್ಟ್ ಆಡಳಿತ” ಆಗಿರುತ್ತದೆ ಎಂದು ಸೀತಾರಾಮನ್ ಹೇಳಿದರು.

ಇದೇ ಮೊದಲು, ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ರೂ 2.5 ಲಕ್ಷದವರೆಗಿನ ಒಟ್ಟು ಆದಾಯವನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ವರ್ಷಕ್ಕೆ 7 ಲಕ್ಷದವರೆಗೆ ಆದಾಯ ಪಡೆಯುವ ಜನರಿಗೆ ಈಗ ಲಭ್ಯವಾಗುತ್ತಿರುವ ರಿಯಾಯಿತಿಯು ಈ ಹಿಂದೆ ವರ್ಷಕ್ಕೆ 5 ಲಕ್ಷದವರೆಗೆ ಆದಾಯ ತೆರಿಗೆದಾರರಿಗೆ ಲಭ್ಯವಿತ್ತು. ತೆರಿಗೆ ರಚನೆಯನ್ನು ಐದು ಬ್ರಾಕೆಟ್‌ಗಳಿಗೆ ಇಳಿಸಲಾಗಿದೆ . ತೆರಿಗೆದಾರರು ಈ ಹಿಂದೆ 60,000 ರೂಪಾಯಿಗಳಿಗೆ ಹೋಲಿಸಿದರೆ 9 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ 45,000 ರೂಪಾಯಿಗಳನ್ನು ಪಾವತಿಸುತ್ತಾರೆ ಎಂದು ಸೀತಾರಾಮನ್ ಹೇಳಿದರು.

ಅವರು ಹೊಸ ತೆರಿಗೆ ಪದ್ಧತಿಯಲ್ಲಿ ಅತ್ಯಧಿಕ ಸರ್ಚಾರ್ಜ್ ದರವನ್ನು ಶೇ. 37 ರಿಂದ ಶೇ. 25 ಕ್ಕೆ ಇಳಿಸಿದರು. ಹೊಸ ತೆರಿಗೆ ಪದ್ಧತಿ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು ರೂ.5 ಲಕ್ಷದಿಂದ ರೂ.7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವೆ ನಿರ್ಮಲ ಸೀತಾರಾಮನ್‌ ಭರವಸೆ ನೀಡಿದ್ದರು. ಹಾಗೆ ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ರೂ. 9 ಲಕ್ಷ ವೇತನ ಪಡೆಯುವವರು ರೂ. 45000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು. ಹೊಸ ವರ್ಷದ ತೆರಿಗೆ ದರಗಳು ಈ ಕೆಳಗಿನಂತಿವೆ.

ಇದನ್ನೂ ಓದಿ : Union budget 2023: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ?

ಇದನ್ನೂ ಓದಿ : Railway Department : ಮೋದಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.4 ಕೋಟಿ ರೂ.ಮೀಸಲು

ಇದನ್ನೂ ಓದಿ : ಮೋದಿ ಬಜೆಟ್‌ನಲ್ಲಿ ಹಿರಿಯ ನಾಗರಿಕರ ಉಳಿತಾಯ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳ

2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯದ ಮೇಲೆ ಈ ಹಿಂದೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು ಮತ್ತು ರೂ.5 ಲಕ್ಷದಿಂದ ರೂ.7.5 ಲಕ್ಷದವರೆಗಿನ ಆದಾಯಕ್ಕೆ ಶೇ.10ರಷ್ಟು ತೆರಿಗೆ ಅನ್ವಯವಾಗುತ್ತಿತ್ತು. 7.5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.15ರಷ್ಟು ತೆರಿಗೆ ಮತ್ತು ರೂ.10 ಲಕ್ಷದಿಂದ ರೂ.12.5 ಲಕ್ಷದವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ವಿಧಿಸಲಾಗಿತ್ತು. 12.5 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇಕಡಾ 25 ರ ತೆರಿಗೆ ದರ ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡಾ 30 ರ ತೆರಿಗೆ ದರವನ್ನು ಅನ್ವಯಿಸಲಾಗುತ್ತದೆ.

New Income Tax: New Income Tax: Tax Exemption up to 7 Lakhs, Surcharge Rate Percent. 37 to percent. Decrease to 25

Comments are closed.