Defense sector: ರಕ್ಷಣಾ ಕ್ಷೇತ್ರಕ್ಕೆ 5.93 ಲಕ್ಷ ಕೋಟಿ ರೂ ಘೋಷಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ: (Defense sector) 2023-24 ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯನ್ನು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರು ಮಂಡಿಸಿದರು. ಈ ವೇಳೆ ಹಲವು ಯೋಜನೆಗಳಿಗೆ ಅನುದಾನಗಳನ್ನು ನೀಡಿದ್ದು, ಕೆಲವು ಕ್ಷೇತ್ರಗಳಿಗೆ ಅನುದಾನವನ್ನು ಮೀಸಲಿಟ್ಟಿದ್ದಾರೆ. 2023-24 ನೇ ಸಾಲಿನ ಬಜೆಟ್‌ ಮಂಡನೆಯಲ್ಲಿ ರಕ್ಷಣಾ ವಲಯದ ಮೇಲೆ ಹೆಚ್ಚು ಗಮನ ಹರಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ. ಗಳನ್ನು ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.

ಕೇಂದ್ರವು ಈ ಬಾರಿ ರಕ್ಷಣಾ ಬಜೆಟ್‌ ಮೇಲೆ ಹೆಚ್ಚಿನ ಆದ್ಯತೆ ನೀಡಿದ್ದು, ನಿರೀಕ್ಷೆಯಂತೆ ಈ ಬಾರಿ ರಕ್ಷಣಾ ವಲಯದ ಮೇಲೆ ಬಜೆಟ್‌ ಹೆಚ್ಚಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. 13.32 ರಷ್ಟು ಹೆಚ್ಚಿಗೆ ಬಜೆಟ್‌ ನೀಡಿದೆ. 2022-23 ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.25 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಇದರಲ್ಲಿ ರಕ್ಷಣಾ ಪಿಂಚಣಿಗಾಗಿ 1.19 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

2017-18 ರಲ್ಲಿ ರಕ್ಷಣಾ ಬಜೆಟ್‌ 2.74 ಕೋಟಿ, 2019-20 ರಲ್ಲಿ 3.05 ಲಕ್ಷ ಕೋಟಿ, 2020-21 ರಲ್ಲಿ 4.7 ಲಕ್ಷ ಕೋಟಿ ರೂಪಾಯಿ ನೀಡಲಾಗಿತ್ತು. ಕಳೆದ ಕೆಲವು ವರ್ಷಗಳ ಬಜೆಟ್‌ ಗಳಿಗೆ ಹೋಲಿಸಿದರೆ ಪ್ರತಿ ಬಾರಿಯಂತೆ ಈ ಕ್ಷೇತ್ರಕ್ಕೆ ಹೆಚ್ಚು ಬಜೆಟ್‌ ಬಂದಿದೆ.

ಈ ಬಾರಿಯ ಬಜೆಟ್‌ ನಲ್ಲಿ ರಕ್ಷಣಾ ಉಪಕರಣಗಳು, ಶಸ್ತ್ರಾಸ್ತ್ರ, ವಿಮಾನಗಳು, ಯುದ್ದ ನೌಕೆಗಳು ಹಾಗೂ ಇತರೆ ಮಿಲಿಟರಿ ಉಪಕರಣಗಳನ್ನು ಖರೀದಿಗೆ 1.52 ಲಕ್ಷ ಕೋಟಿ ರೂ. ಒಳಗೊಂಡಿದೆ. ಇನ್ನೂ ಭಾರತೀಯ ಸೇನೆಗೆ 32,015 ಕೋಟಿ ರೂ. ಭಾರತೀಯ ನೌಕಾಪಡೆಗೆ 47, 590 ಕೋಟಿ ರೂ. ಹಾಗೂ ಭಾರತೀಯ ವಾಯುಪಡೆಗೆ 55, 586 ಕೋಟಿ ರೂ ಮೀಸಲಿಡಲಾಗಿದೆ.

ಇದನ್ನೂ ಓದಿ : ಹೊಸ ಆದಾಯ ತೆರಿಗೆ : 7 ಲಕ್ಷದವರೆಗೆ ತೆರಿಗೆ ವಿನಾಯಿತಿ, ಸರ್ಚಾರ್ಜ್ ದರ ಶೇ. 37 ರಿಂದ ಶೇ. 25ಕ್ಕೆ ಇಳಿಕೆ

ಇದನ್ನೂ ಓದಿ : Union budget 2023: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ?

ಇದನ್ನೂ ಓದಿ : Railway Department : ಮೋದಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.4 ಕೋಟಿ ರೂ.ಮೀಸಲು

Defense sector: Nirmala Sitharaman announced Rs 5.93 lakh crore for the defense sector

Comments are closed.