ಸರಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್ ಗುರುತಿನ ದಾಖಲೆಗೆ ಇನ್ಮುಂದೆ ಪ್ಯಾನ್ ಸಾಕು

ನವದೆಹಲಿ : ಸರಕಾರಿ ಏಜೆನ್ಸಿಗಳಲ್ಲಿ ಡಿಜಿಟಲ್‌ ಗುರುತಿನ ದಾಖಲೆಯಾಗಿ (Digital Identity Document) ಇನ್ನು ಮುಂದೆ ಪ್ಯಾನ್‌ ಕಾರ್ಡ್‌ ಒಂದೇ ಸಾಮಾನ್ಯ ಗುರುತಿಸುವಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು. 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ ನಿರ್ಮಲ್‌ ಸೀತಾರಾಮನ್‌, ಈ ಘೋಷಣೆ ಮಾಡಿದ್ದಾರೆ. ಇದ್ದರಿಂದಾಗಿ ವ್ಯಕ್ತಿಗಳ ಡಿಟಿಜಿಲ್‌ ಗುರುತು ದೃಡೀಕರಣದ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಹಣಕಾಸು ಸಚಿವೆ ಹೇಳಿದರು.

ಹೀಗಾಗಿ ಕ್ಲಿಯರೆನ್ಸ್‌ಗಳು, ನೋಂದಣಿಗಳು ಮತ್ತು ಪರವಾನಗಿಗಳಿಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ರೂಪದಲ್ಲಿ ಒಂದೇ ಸಾಮಾನ್ಯ ಗುರುತಿಸುವಿಕೆ ಹೂಡಿಕೆದಾರರಿಗೆ ಕಾರ್ಯವಿಧಾನಗಳನ್ನು ಸರಳಗೊಳಿಸುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಏಜೆನ್ಸಿಗಳಲ್ಲಿ ಕೆವೈಸಿ ಪ್ರಕ್ರಿಯೆ ಪ್ಯಾನ್‌ ಕಾರ್ಡ್‌ ಹೊಂದಿರುವವರಿಗೆ ಸುಲಭವಾಗಲಿದೆ.ಅಷ್ಟೇ ಅಲ್ಲದೇ ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಬಜೆಟ್‌ ಮೂಲಕ ಕೇಂದ್ರ ಸರಕಾರವು ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ.

ಇದನ್ನೂ ಓದಿ : Automobile: ವಾಹನ ಖರೀದಿದಾರರಿಗೆ ಗುಡ್‌ ನ್ಯೂಸ್:‌ ಇವಿ ಕಾರುಗಳಿಗೆ ಬೆಲೆ ಇಳಿಕೆ

ಇದನ್ನೂ ಓದಿ : Price of electronic goods: ಕೇಂದ್ರ ಬಜೆಟ್‌ : ಮೊಬೈಲ್‌ , ಇಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಇಳಿಕೆ

ಇದನ್ನೂ ಓದಿ : Dekho Apna Desh App: ಪ್ರವಾಸೋದ್ಯಮ ಅಭಿವೃದ್ದಿಗೆ ದೇಖೋ ಅಪ್ನಾ ದೇಶ್‌ ಆಪ್‌

ಉದ್ಯಮಗಳು ಪ್ರತ್ಯೇಕ ಪ್ಯಾನ್‌ ನಂಬರ್‌ ಹೊಂದಬೇಕು. ಈ ನಂಬರ್‌ನ್ನು ಆಧರಿಸಿ ಉದ್ಯಮಿಗಳ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸಲಾಗುತ್ತದೆ. ಇದಕ್ಕಾಗಿ ಹಲವಾರು ನಿಯಮಗಳಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಆಭರಣ ಪ್ರಿಯರಿಗೆ ಮೋದಿ ಶಾಕ್ : ದುಬಾರಿಯಾಲಿದೆ ಚಿನ್ನ, ಬೆಳ್ಳಿ, ವಜ್ರ

ಇದನ್ನೂ ಓದಿ : Free ration extension: ಬಡವರಿಗೆ ಉಚಿತ ಪಡಿತರ ವಿಸ್ತರಣೆ : ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ

PAN is now sufficient for digital identity document in government agencies

Comments are closed.