Automobile : ವಾಹನ ಖರೀದಿದಾರರಿಗೆ ಗುಡ್‌ ನ್ಯೂಸ್:‌ ಇವಿ ಕಾರುಗಳಿಗೆ ಬೆಲೆ ಇಳಿಕೆ

ನವದೆಹಲಿ: (Price reduction for EV cars) ಕೆಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರು ಇಂದು 2023 ರ ಕೇಂದ್ರ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ವೇಳೆ ಇವಿ ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಲೀಥಿಯಮ್‌ ಅಯಾನ್‌ ಬ್ಯಾಟರಿ ಶೆಲ್‌ ಗಳ ಉತ್ಪದಾನೆಗೆ ಉತ್ತೇಜನ ನೀಡಿದ್ದಾರೆ. ಈ ಯೋಜನೆಯ ನೇರ ಲಾಭ ಇವಿ ವಾಹನಗಳ ಉತ್ಪಾದನೆಗೆ ದೊರೆಯಲಿದ್ದು, ಬ್ಯಾಟರಿ ಚಾಲಿತ ವಾಹನಗಳ ಬೆಲೆ ಇಳಿಕೆಯಾಗಲಿದೆ.

ಭಾರತದಲ್ಲಿ ತಯಾರಾಗುವ ಇವಿ ಕಾರುಗಳಿಗೆ ಲೀಥಿಯಮ್‌ ಬ್ಯಾಟರಿ ದೊಡಡ್‌ ಹೊರೆಯಾಗಿದ್ದು, ಬ್ಯಾಟರಿಗಳು ಹೆಚ್ಚು ದುಬಾರಿಯಾದ ಕಾರಣ ವಾಹನಗಳ ದರವನ್ನೂ ಅನಿವಾರ್ಯವಾಗಿ ಹೆಚ್ಚಿಸಬೇಕಾಗಿತ್ತು. ಇವಿ ವಾಹನಗಳ ತಯಾರಿಕೆಯಲ್ಲಿ ಬಳಸುವ ಲೀಥಿಯಮ್‌ ಅಯಾನ್‌ ಬ್ಯಾಟರಿ ಶೆಲ್‌ ಗಳ ಉತ್ಪದನೆಗೆ ಬೇಕಾಗುವ ಯಂತ್ರವನ್ನು ವಿದೇಶದಿಂದ ಆಮದು ಮಾಡುವಾಗ ವಿಧಿಸಲಾಗುವ ಅಬಕಾರಿ ಸುಂಕವನ್ನು ಕಡಿತ ಮಾಡಲಾಗುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಒಂದು ವೇಳೆ ಸುಂಕ ನಿವಾರಣೆಯಾದರೆ ಭಾರತದ ಇವಿ ವಾಹನಗಳ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ.

ಇದೇ ವೇಳೆ ನ್ಯಾಷನಲ್‌ ಹೈಡ್ರೋಜನ್‌ ಮಿಷನ್‌ ಗಾಗಿ 19,700 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಈ ಯೋಜನೆ ಮೂಲಕ 2023 ರ ವೇಳೆಗೆ ಐವತ್ತು ಲಕ್ಷ ಟನ್‌ ಹೈಡ್ರೋಜನ್‌ ಇಂಧನ ಉತ್ಪಾದನಾ ಗುರಿಯನ್ನು ಹೊಂದಲಾಗಿದೆ. ಇದು ಕೂಡ ಸಾರಿಗೆ ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದು ಆಟೋಮೊಬೈಲ್‌ ಕ್ಷೇತ್ರದ ಪಾಲುದಾರರಿಗೂ ನೆಮ್ಮದಿಯ ಸಂಗತಿಯಾಗಿದೆ.

ಇದನ್ನೂ ಓದಿ : Price of electronic goods: ಕೇಂದ್ರ ಬಜೆಟ್‌ : ಮೊಬೈಲ್‌ , ಇಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಇಳಿಕೆ

ಇದನ್ನೂ ಓದಿ : Dekho Apna Desh App: ಪ್ರವಾಸೋದ್ಯಮ ಅಭಿವೃದ್ದಿಗೆ ದೇಖೋ ಅಪ್ನಾ ದೇಶ್‌ ಆಪ್‌

ಇದನ್ನೂ ಓದಿ : ಆಭರಣ ಪ್ರಿಯರಿಗೆ ಮೋದಿ ಶಾಕ್ : ದುಬಾರಿಯಾಲಿದೆ ಚಿನ್ನ, ಬೆಳ್ಳಿ, ವಜ್ರ

ಕಳೆದ ಬಾರಿಯ ಬಜೆಟ್ ನಲ್ಲಿ ಬ್ಯಾಟರಿ ಕಾರುಗಳ ಮಾರಾಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಇದೀಗ ಲೀಥಿಯಂ ಬ್ಯಾಟರಿ ತಯಾರಿಕೆಗೆ ಉತ್ತೇಜನ ನೀಡುವುದರಿಂದಾಗಿ ಬ್ಯಾಟರಿ ಕಾರುಗಳ ಬೆಲೆಯಲ್ಲಿಯೂ ಇಳಿಕೆಯಾಗುವ ಸಾಧ್ಯತೆಯಿದೆ.

Automobile: Good news for car buyers: Price reduction for EV cars

Comments are closed.