ಸೋಮವಾರ, ಏಪ್ರಿಲ್ 28, 2025
HomeBUDGETPrice of electronic goods: ಕೇಂದ್ರ ಬಜೆಟ್‌ : ಮೊಬೈಲ್‌ , ಇಲೆಕ್ಟ್ರಾನಿಕ್‌ ವಸ್ತುಗಳ ಬೆಲೆ...

Price of electronic goods: ಕೇಂದ್ರ ಬಜೆಟ್‌ : ಮೊಬೈಲ್‌ , ಇಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಇಳಿಕೆ

- Advertisement -

ನವದೆಹಲಿ: (Price of electronic goods) ಇಂದು ಕೇಂದ್ರ ಬಜೆಟ್‌ ಮಂಡನೆಯಾಗಿದ್ದು, ನಿರ್ಮಲಾ ಸೀತರಾಮನ್‌ ಅವರು ಕೆಲ ತೆರಿಗೆಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ಪರಿಣಾಮ ಒಂದಷ್ಟು ವಸ್ತುಗಳ ಬೆಲೆಯಲ್ಲಿ ಏರಿಳಿತಗಳಾಗಲಿವೆ. ಆದರೆ ಬಜೆಟ್‌ ಮಂಡನೆಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡದಿರುವುದು ಗಮನಾರ್ಹವಾಗಿದೆ.

ಚಿನ್ನ ಬೆಳ್ಳಿ ಇತ್ಯಾದಿ ವಸ್ತುಗಳ ಬೆಲೆ ಏರಿಕೆಯಾಗಿದ್ದು, ನಿರೀಕ್ಷೆಯಂತೆ ಸಿಗರೇಟುಗಳ ಬೆಲೆ ಏರಿಸಿ ಸುಂಕ ಹೆಚ್ಚಿಸಲಾಗಿದೆ. ಸಿಗರೇಟು ಬೆಲೆ ಶೇಕಡಾ ಹತ್ತರಷ್ಟು ಏರುವ ಸಾಧ್ಯತೆಯಿದ್ದು, ಗೋಲ್ಡ್‌ ಬಾರ್ಗಳಿಂದ ಮಾಡಿದ ಆರ್ಟಕಲ್ಗಳ ಮೇಲಿನ ಬೇಸಿಕ್‌ ಕಸ್ಟಮ್‌ ಡ್ಯೂಟಿಯನ್ನು ಹೆಚ್ಚಿಸಲಾಗಿದೆ. ಮುಖ್ಯವಾಗಿ ಮೊಬೈಲ್‌, ಟಿವಿ, ಕ್ಯಾಮೆರಾ ಲೆನ್ಸ್‌ ಸೇರಿದಂತೆ ಎಲೆಕ್ಟ್ರಾನಿಕ್‌ ವಸ್ತುಗಳ ಬೆಲೆ ಇಳಿಕೆ ಮಾಡಿ ನಿರ್ಮಲಾ ಸೀತರಾಮನ್‌ ಇಂದು ಬಜೆಟ್‌ ಮಂಡನೆಯಲ್ಲಿ ಘೋಷಿಸಿದ್ದಾರೆ.

ಸೈಕಲ್, ಎಲೆಕ್ಟ್ರಿಕ್‌ ವಾಹನ, ಆಟಿಕೆಗಳು, ಆಟೋಮೊಬೈಲ್‌, ಎಲ್‌ ಇಡಿ ಟಿವಿ. ಮೊಬೈಲ್‌ ಫೋನ್‌ , ಕ್ಯಾಮೆರಾ ಲೆನ್ಸ್‌, ಜೈವಿಕ ಅನಿಲ ಆಧಾರಿತ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದ್ದು, ಸಿಗರೇಟು, ಚಿನ್ನ, ಬೆಳ್ಳಿ, ಎಲೆಕ್ಟ್ರಿಕ್‌ ಅಡುಗೆ ಚಿಮಣಿ. ವಜ್ರ, ಬ್ರಾಂಡೆಡ್‌ ಬಟ್ಟೆ, ಪ್ಲಾಟಿನಮ್‌, ಎಕ್ಸ್‌ ರೇ, ಹೆಡ್‌ ಪೋನ್‌, ಇಯರ್‌ ಫೋನ್, ಹಾಗೂ ವೈದ್ಯಕೀಯ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ.

ಕಳೆದ ವರ್ಷ ಲೌಡ್‌ ಸ್ಪೀಕರ್ಸ್‌, ಹೆಡ್‌ ಫೋನ್, ಛತ್ರಿ, ಜ್ಯೂವೆಲರಿ, ಸೋಲಾರ್‌ ಸೆಲ್‌, ಎಕ್ಸ್‌ ರೇ ಮೆಷೀನ್‌ ಸೇರಿದಂತೆ ಕೆಲವು ವಸ್ತುಗಳ ಬೆಲೆಯನ್ನು ಏರಿಸಲಾಗಿತ್ತು. ಅಲ್ಲದೇ ಬಟ್ಟೆ, ಮೊಬೈಲ್‌ ಫೋನ್‌ ಚಾರ್ಜರ್‌, ಹಿಂಗು, ಕೊಕೋವಾ ಬೀಜ, ಮೀಥೈಲ್‌ ಆಲ್ಕೋಹಾಲ್‌, ಪಾಲಿಶ್ಡ್‌ ಡೈಮಂಡ್‌, ಸ್ಮಾರ್ಟ್‌ ಫೋನ್‌ ಕ್ಯಾಮೆರಾ ಲೆನ್ಸ್‌ ಗಳ ಬೆಲೆಯನ್ನು ಇಳಿಕೆ ಮಾಡಲಾಗಿತ್ತು.

ಇದನ್ನೂ ಓದಿ : Dekho Apna Desh App: ಪ್ರವಾಸೋದ್ಯಮ ಅಭಿವೃದ್ದಿಗೆ ದೇಖೋ ಅಪ್ನಾ ದೇಶ್‌ ಆಪ್‌

ಇದನ್ನೂ ಓದಿ : ಆಭರಣ ಪ್ರಿಯರಿಗೆ ಮೋದಿ ಶಾಕ್ : ದುಬಾರಿಯಾಲಿದೆ ಚಿನ್ನ, ಬೆಳ್ಳಿ, ವಜ್ರ

ಇದನ್ನೂ ಓದಿ : Free ration extension: ಬಡವರಿಗೆ ಉಚಿತ ಪಡಿತರ ವಿಸ್ತರಣೆ : ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ

Price of electronic goods: Central Budget: Price reduction of mobile, electronic goods

RELATED ARTICLES

Most Popular