Ajinkya Rahane county cricket : ಟೆಸ್ಟ್ ಕಂಬ್ಯಾಕ್‌ಗೆ ಕಸರತ್ತು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಅಜಿಂಕ್ಯ ರಹಾನೆ

ಮುಂಬೈ: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಮುಂಬೈನ ಅನುಭವಿ ಬ್ಯಾಟ್ಸ್’ಮನ್ ಅಜಿಂಕ್ಯ ರಹಾನೆ ಮತ್ತೆ (Ajinkya Rahane county cricket) ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿರುವ ಅಜಿಂಕ್ಯ ರಹಾನೆ ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ. ಪ್ರಸಕ್ತ ಸಾಲಿನ ಒನ್ ಡೇ ಕಪ್ 50 ಓವರ್’ಗಳ (One-Day Cup 50-over competition) ಟೂರ್ನಿಯಲ್ಲಿ ಲೀಸೆಸ್ಟರ್’ಶೈರ್ (Leicestershire) ಕೌಂಟಿ ತಂಡದ ಪರ ರಹಾನೆ 8 ಪಂದ್ಯಗಳನ್ನಾಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

2023ರ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಪರ ಆಡಲಿದ್ದು, ಐಪಿಎಲ್ ಬೆನ್ನಲ್ಲೇ ಕೌಂಟಿ ಕ್ರಿಕೆಟ್ ಆಡಲು ಜೂನ್ ತಿಂಗಳಲ್ಲಿ ಇಂಗ್ಲೆಂಡ್’ಗೆ ಹಾರಲಿದ್ದಾರೆ.ಕೌಂಟಿ ಕ್ರಿಕೆಟ್’ನಲ್ಲಿ ಆಡಲಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಜಿಂಕ್ಯ ರಹಾನೆ ‘’ಮುಂದಿನ ಕ್ರಿಕೆಟ್ ಋತುವಿನಲ್ಲಿ ಲೀಸೆಸ್ಟರ್’ಶೈರ್ ಪರ ಆಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹೊಸ ಆಟಗಾರರು ಮತ್ತು ಹೊಸ ವಾತಾವರಣದಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ’’ ಎಂದಿದ್ದಾರೆ.

2019ರಲ್ಲಿ ಅಜಿಂಕ್ಯ ರಹಾನೆ ಹ್ಯಾಂಪ್’ಶೈರ್ ತಂಡದ ಪರ ಆಡಿದ್ದರು. ನ್ಯಾಟಿಂಗ್’ಹ್ಯಾಮ್’ಶೈರ್ ವಿರುದ್ಧದ ಕೌಂಟಿ ಪದಾರ್ಪಣೆಯ ಪಂದ್ಯದಲ್ಲೇ ರಹಾನೆ ಅಮೋಘ ಶತಕ ಬಾರಿಸಿದ್ದರು.34 ವರ್ಷದ ಬಲಗೈ ಬ್ಯಾಟ್ಸ್’ಮನ್ ರಹಾನೆ ಕಳೆದ ವರ್ಷದ ಜನವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್’ಟೌನ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ನಂತರ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಾಗಿತ್ತು.

ಇದನ್ನೂ ಓದಿ : Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ ಥ್ಯಾಂಕ್ಸ್ ಎಂದ ಗಬ್ಬರ್

ಇದನ್ನೂ ಓದಿ : Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ ಕಲ್ಬುರ್ಗಿ ಕೋಚ್

ಇದನ್ನೂ ಓದಿ : ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭ

ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಗುರಿಯೊಂದಿಗೆ ರಣಜಿ ಟ್ರೋಫಿ ಅಖಾಡಕ್ಕೆ ಧುಮುಕಿರುವ ಅಜಿಂಕ್ಯ ರಹಾನೆ ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ ಒಂದು ದ್ವಿಶತಕ ಸಹಿತ 57.63ರ ಸರಾಸರಿಯಲ್ಲಿ 634 ರನ್ ಕಲೆ ಹಾಕಿದ್ದಾರೆ.ಭಾರತ ಪರ ಒಟ್ಟು 82 ಟೆಸ್ಟ್ ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ 38.52ರ ಸರಾಸರಿಯಲ್ಲಿ 12 ಶತಕ ಹಾಗೂ 25 ಅರ್ಧಶತಕಗಳ ಸಹಿತ 4931 ರನ್ ಗಳಿಸಿದ್ದಾರೆ.

Ajinkya Rahane county cricket : Practice for test comeback, Ajinkya Rahane will play county cricket in England

Comments are closed.