ದುಡಿಮೆಯ ಹಣದಲ್ಲಿ ಸ್ವಲ್ಪವನ್ನಾದ್ರೂ ಹೂಡಿಕೆ ಮಾಡಬೇಕು ಅನ್ನೋದು ಎಲ್ಲರ ಕನಸು. ಆದರೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಬರುತ್ತೆ ಅನ್ನೋ ಲೆಕ್ಕಾಚಾರ ಮುಖ್ಯ. ಹೀಗಾಗಿ ಅತ್ಯಂತ ಕಡಿಮೆ ಹಣವನ್ನು ಹೂಡಿಕೆ ಮಾಡಿ, ಅತ್ಯಧಿಕ ಲಾಭ ಸಿಗುವ ಯೋಜನೆಗಳ ಕಡೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಅದ್ರಲ್ಲೂ ಕೇವಲ 50 ರೂಪಾಯಿ ಹೂಡಿಕೆ ಮಾಡಿ, 35 ಲಕ್ಷ ರೂಪಾಯಿ ಪಡೆಯುವ ಯೋಜನೆಯೊಂದನ್ನು ಅಂಚೆ ಇಲಾಖೆ ಪರಿಚಯಿಸಿದೆ.
ಅಂಚೆ ಇಲಾಖೆ ಗ್ರಾಮ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕನಿಷ್ಠ ಮೊತ್ತದಿಂದ ಹಿಡಿದು ಗರಿಷ್ಠ ಹಣವನ್ನು ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದೆ. 19 ವರ್ಷ ವಯಸ್ಸಿನಿಂದ ಹಿಡಿದು 55 ವರ್ಷ ವಯಸ್ಸಿನ ವರೆಗಿನ ಎಲ್ಲರೂ ಕೂಡ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲಾ ಮಾಸಿಕ, ತ್ರೈ ಮಾಸಿಕ, ವಾರ್ಷಿಕ, ಅರ್ಧ ವಾರ್ಷಿಕ ಕಂತುಗಳ ಮೂಲಕವೂ ಹಣವನ್ನು ಪಾವತಿ ಮಾಡಲು ಅವಕಾಶವಿದೆ.

ದಿನಕ್ಕೆ 50 ರೂಪಾಯಿಯಿಂದ ಹಿಡಿದು 11 ಸಾವಿರ ರೂಪಾಯಿಯ ವರೆಗೂ ಈ ಯೋಜನೆ ಮೂಲಕ ಹೂಡಿಕೆಯನ್ನು ಮಾಡಬಹುದಾಗಿದೆ. ಪ್ರೀಮಿಯಂ ಪಾವತಿಯ ವರ್ಷವನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. 80ವರ್ಷ ವಯಸ್ಸಿನಲ್ಲಿ ದೊಡ್ಡ ಮೊತ್ತದ ಬೋನಸ್ ಹಣ ದೊರೆಯಲಿದೆ. ಒಂದೊಮ್ಮೆ 80 ವರ್ಷಕ್ಕೂ ಮೊದಲೇ ಮೃತಪಟ್ಟರೆ, ನಾಮಿನಿಗೆ ಹಣ ದೊರೆಯಲಿದೆ.
ಇದನ್ನೂ ಓದಿ : ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ, ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ, ಚೆಕ್ ಮಾಡೋದು ಹೇಗೆ ?
19 ವರ್ಷದವರು ಈ ಯೋಜನೆಗೆ ಮಾಸಿಕ 1515 ರೂಪಾಯಿ ಹೂಡಿಕೆಯನ್ನು ಮಾಡಿದ್ರೆ 10 ಲಕ್ಷ ರೂಪಾಯಿಯ ಹಣವನ್ನು ಪಡೆಯಲು ಅವಕಾಶವಿದೆ. ದಿನಕ್ಕೆ 50 ರೂಪಾಯಿಯಂತೆ 55 ವರ್ಷಗಳ ಕಾಲ ಹೂಡಿಕೆ ಮಾಡಿದ್ರೆ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ನೀವು 35 ಲಕ್ಷ ರೂಪಾಯಿ ಹಣವನ್ನು ಪಡೆಯಲು ಅವಕಾಶವಿದೆ. ವಾರ್ಷಿಕವಾಗಿ ಎಷ್ಟು ಹಣವನ್ನು ಎಷ್ಟು ವರ್ಷಕ್ಕೆ ಹೂಡಿಕೆ ಮಾಡುತ್ತೀರಿ ಅನ್ನುವ ಆಧಾರದ ಮೇಲೆ ನಿಮ್ಮ ಲಾಭದ ಪ್ರಮಾಣ ನಿರ್ಧಾರವಾಗಲಿದೆ.

ಅಂಚೆ ಇಲಾಖೆಯು ಹಲವು ಉಳಿತಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ ಹೆಚ್ಚು ಲಾಭವನ್ನು ನೀಡಲಿದೆ. ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಮತ್ತೊಂದು ಲಾಭವಿದೆ. ಈ ಯೋಜನೆಗೆ ಸೇರ್ಪಡೆ ಆಗಿ ನಾಲ್ಕು ವರ್ಷಗಳ ಕಾಲ ಪ್ರೀಮಿಯಂ ಮೊತ್ತವನ್ನು ಪಾವತಿಸಿದ ನಂತರದಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶವಿದೆ.
ಇದನ್ನೂ ಓದಿ : ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 300 ಯೂನಿಟ್ ವಿದ್ಯುತ್ ಉಚಿತ : ಕೇಂದ್ರ ಸರಕಾರದಿಂದ ಹೊಸ ಯೋಜನೆ
ಅಷ್ಟೇ ಅಲ್ಲದೇ ಐದು ವರ್ಷದ ಬಳಿಕ ಹೂಡಿಕೆಯ ಮೇಲೆ ಬೋನಸ್ ಕ್ಲೈಂ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಈ ಯೋಜನೆಯನ್ನು ಆರಂಭಿಸಿ ಮೂರು ವರ್ಷ ಕಳೆದ ನಂತರದಲ್ಲಿ ಯೋಜನೆ ಬೇಡ ಎನಿಸಿದೆ ಪಾಲಿಸಿಯನ್ನು ಸೆರೆಂಡರ್ ಮಾಡುವ ಮೂಲಕ ಪಾವತಿಸಿದ ಹಣವನ್ನು ವಾಪಾಸ್ ಪಡೆಯಲು ಅವಕಾಶವಿದೆ.
ಇದನ್ನೂ ಓದಿ : ಬ್ಯಾಂಕ್ ಗ್ರಾಹರಿಕೆ ಎಚ್ಚರಿಕೆಕೊಟ್ಟ RBI : ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ತಪ್ಪದೇ ಓದಿ
35 lakhs if you invest only Rs.50. Available: Post Office Gram Suraksha Scheme