ಸೋಮವಾರ, ಏಪ್ರಿಲ್ 28, 2025
Homebusiness5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು?...

5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

- Advertisement -

ಕ್ರೆಡಿಟ್ ಕಾರ್ಡ್ ಕೊಡುತ್ತೇವೆಂದು ಬ್ಯಾಂಕ್‌ಗಳು ಆಫರ್ (Bank Offers) ಮೇಲೆ ಮೇಲೆ ಆಫರ್ ತೋರಿಸಿ ಪದೇ ಪದೇ ಫೋನ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿಬಿಟ್ಟಿದೆ. ಆದರೆ ಗ್ರಾಹಕರನ್ನು ನಿಜಕ್ಕೂ ಸೆಳೆಯುತ್ತಿರುವ ಕ್ರೆಡಿಟ್ ಕಾರ್ಡ್‌ಗಳು (Cashback Credit Cards) ಯಾವುವು ಎಂಬ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅಲ್ಲದೇ ಜನಪ್ರಿಯ ಕ್ರೆಡಿಟ್ ಕಾರ್ಡ್‌ಗಳು ( 5 Best Credit Cards) ಒದಗಿಸುವ ಆಫರ್‌ಗಳ ವಿವರವನ್ನೂ ತಿಳಿದುಕೊಳ್ಳಿ.

1) ಅಮೇಜಾನ್ ಪೇ, ಅಮೇಜಾನ್ ಕಾರ್ಡ್

ನೀವು ಅಮೇಜಾನ್ ಕಾರ್ಡ್ ನಲ್ಲಿ ಶಾಪಿಂಗ್ ಮಾಡುವುದಾದರೆ ಯಾವುದೇ ಸರ್ ಚಾರ್ಜ್ ಗಳಿಲ್ಲದೆ ತಿಂಗಳ ವಂತಿಗೆ ಅರ್ಥಾತ್ ಇಎಂಐ ಸೌಲಭ್ಯ ದೊರಕುತ್ತದೆ. ಅಮೇಜಾನ್ ಪ್ರೈಮ್ ಸೌಲಭ್ಯ ಹೊಂದಿರುವ ಗ್ರಾಹಕರಿಗೆ ಶೇ.5ರಷ್ಟು ದೊಡ್ಡ ಕ್ಯಾಷ್ ಬ್ಯಾಕ್ ಉಂಟು. ಅದೇ ರೀತಿ, ಪ್ರೈಮ್ ನಲ್ಲಿ ಇಲ್ಲದವರಿಗೆ ಶೇ.3ರಷ್ಟು, 100 ಅಮೇಜಾನ್ ಪಾರ್ಟರ್ ಮರ್ಚೆಂಟ್ಸ್ ಗಳಿಗೆ ಶೇ.2ರಷ್ಟು ಕ್ಯಾಷ್ ಬ್ಯಾಕ್. ಇತರೆ ವಹಿವಾಟಿಗೆ ಶೇ.1ರಷ್ಟು ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.

2) ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್

ಶಾಪರ್ಸ್ ಸ್ಟಾಪ್ ಫಸ್ಟ್ ಸಿಟಿಜನ್ ಕಾರ್ಡ್ ಹೊಂದಿರುವ ಗ್ರಾಹಕರು ವರ್ಷ ಪೂರ್ತಿ ಸುಮಾರು 5,250ರೂ. ನಷ್ಟು ಲಾಭ ಪಡೆಯಲಿದ್ದಾರೆ. ಹೊಸದಾಗಿ ಕಾರ್ಡ್ ಪಡೆದ 30 ದಿನಗಳಲ್ಲಿ ಶಾಪಿಂಗ್ ಮಾಡಿದರೆ, ಫಸ್ಟ್ ಸಿಟಿಜನ್ ಶಾಪ್ ಪಾಯಿಂಟ್ಸ್ (300ರೂ.) ಪೆಟ್ರೋಲ್ ಹಾಕಿಸಿದರೆ ಶೇ.1ರಷ್ಟು, ಶಾಪರ್ ಸ್ಟಾಪ್ ನಲ್ಲಿ ಶಾಪಿಂಗ್ ಮಾಡಿದರೆ ರಿವಾರ್ಡ್ ಪಾಯಿಂಟ್ ಗಳು ಸಿಗಲಿವೆ. 30ಸಾವಿರಕ್ಕೂ ಅಧಿಕ ವಹಿವಾಟು ಮಾಡಿದರೆ ವಾರ್ಷಿಕ ಫೀ ಇರೋದಿಲ್ಲ.

3) ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್

ಈ ಕಾರ್ಡ್ ಬಳಸುವ ಗ್ರಾಹಕರಿಗೆ ಶೇ.5ರಷ್ಟು ಫ್ಲಾಟ್ ಕ್ಯಾಷ್ ಬ್ಯಾಕ್ ಸಿಗಲಿದೆ. ಆದರೆ ಈ ಸೌಲಭ್ಯ ಕೇವಲ ಫ್ಲಿಪ್ ಕಾರ್ಟ್ ಮತ್ತು ಮಿಂತ್ರಾದಲ್ಲಿ ಖರೀದಿಸಿದರೆ ಮಾತ್ರ. ಸ್ವಿಗ್ಗಿ, ಊಬರ್, ಪಿವಿಆರ್ ಇತರೆ ಕಡೆಗಳಲ್ಲಿ ಕಾರ್ಡ್ ಬಳಸಿದರೆ ಶೇ.4ರಷ್ಟು ಕ್ಯಾಷ್ ಬ್ಯಾಕ್ ಗ್ಯಾರಂಟಿ. ಇದರ ಹೊರತಾಗಿ ಬೇರೆ ಕಡೆ ಬಳಸಿದರೆ ಶೇ.1.5ರಷ್ಟು ಕ್ಯಾಷ್ ಬ್ಯಾಕ್ ದೊರೆಯಲಿದೆ. ಮೊದಲ ಬಾರಿಗೆ ಕಾರ್ಡ್ ಪಡೆಯುವ ಗ್ರಾಹಕರಿಗೆ ಮೊದಲ ಖರೀದಿಗೆ 500 ಮೊತ್ತದ ಫ್ಲಿಪ್ ಕಾರ್ಟ್ ವೋಚರ್ ದೊರೆಯಲಿದೆ. ಮಿಂತ್ರಾದಲ್ಲಿ ಖರೀದಿಸಿದರೆ ಶೇ.15ರಷ್ಟು ಕ್ಯಾಷ್ ಬ್ಯಾಕ್ ದೊರೆಯಲಿದೆ. ಈ ಕಾರ್ಡಿನ ವಾರ್ಷಿಕ ನಿರ್ವಹಣಾ ಫೀ 500ರೂ. ಆಗಿದೆ.

4) ಎಚ್ ಡಿಎಫ್ ಸಿ ಮಿಲೆನಿಯಾ ಕಾರ್ಡ್

ಅಮೇಜಾನ್ ಅಥವಾ ಫ್ಲಿಪ್ ಕಾರ್ಟ್ ಗಳಲ್ಲಿ ಖರೀದಿಸುವವರಿಗೆ ಇದು ಬೆಸ್ಟ್ ಕಾರ್ಡ್. ಆಗಾಗ ಡಿಸ್ಕೌಂಟ್ ಸೌಲಭ್ಯಗಳು ದೊರೆಯುತ್ತಲೇ ಇರುತ್ತವೆ. ಪ್ರಸ್ತುತ ಎಲ್ಲ ಖರೀದಿಯ ಮೇಲೆ ಶೇ.5ರಷ್ಟು ಕ್ಯಾಷ್ ಬ್ಯಾಕ್ ದೊರೆಯುತ್ತಿದೆ. ಮಿಲೆನಿಯಾ ಕಾರ್ಡ್ ಬಳಸಿ ಸ್ಮಾರ್ಟ್ ಬೈ, ಪೇಸಾಪ್ ಮೂಲಕ ಹೋಟೆಲ್, ಫ್ಲೈಟ್ ಬುಕಿಂಗ್ ಮಾಡಿದರೆ ಶೇ.5ರಷ್ಟು ಕ್ಯಾಷ್ ಬ್ಯಾಕ್ ಪಡೆಯಬಹುದು. ಈ ಕಾರ್ಡಿನ ವಾರ್ಷಿಕ ನಿರ್ವಹಣಾ ವೆಚ್ಚ 1000 ರೂ.

5) ಎಸ್ ಬಿ ಐ ಸಿಂಪ್ಲಿ ಕ್ಲಿಕ್ ಕ್ರೆಡಿಟ್ ಕಾರ್ಡ್

ವಾರ್ಷಿಕ 499 ರೂ. ಪಾವತಿಸಿದರೆ ಈ ಕಾರ್ಡನ್ನು ಪಡೆಯಬಹುದು. ಇದರಿಂದ ಲೆನ್ಸ್ ಕಾರ್ಟ್, ಬುಕ್ ಮೈ ಶೋ, ಕ್ಲಿಯರ್ ಟ್ರಿಪ್, ಅಮೇಜಾನ್, ಫ್ಲಿಪ್ ಕಾರ್ಟ್ ಮುಂತಾದವುಗಳ ಖರೀದಿಯ ಮೇಲೆ ಶೇ.10ರಷ್ಟು ರಿವಾರ್ಡ್ಸ್ ಇದೆ. ಎಸ್ ಬಿಐ ಕಾರ್ಡ್ ದಾರರಿಗೆ 500ರೂ. ಮೌಲ್ಯದ ಅಮೇಜಾನ್ ಗಿಫ್ಟ್ ಕಾರ್ಡ್ ದೊರೆಯಲಿದೆ. ಅಲ್ಲದೇ, ಶೇ.5 ರಷ್ಟು ರಿವಾರ್ಡ್ ಇತರೆ ಆನ್ ಲೈನ್ ಖರೀದಿಯಲ್ಲಿ ದೊರೆಯಲಿದೆ.

ಇದನ್ನೂ ಓದಿ: UPI : ಇಂಟರ್‌ನೆಟ್‌ ಇಲ್ಲದೇ ಮಾಡಬಹುದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಯುಪಿಐ ವಹಿವಾಟು

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(5 Best Credit Cards will give cashback offers)

RELATED ARTICLES

Most Popular