ನವದೆಹಲಿ : ಭಾರತದಲ್ಲಿ ಕೆಲಸ ದಿನಗಳ ಸಂಖ್ಯೆ ಹಾಗೂ ಅವಧಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೀಗ ವಾರದಲ್ಲಿ ಐದು ದಿನ ಕೆಲಸ ಮಾಡಿ, ಶನಿವಾರ ಹಾಗೂ ಭಾನುವಾರದಂದು ಸಂಪೂರ್ಣ ಬ್ಯಾಂಕುಗಳಿಗೆ ರಜೆ (Bank Holiday) ಘೋಷಣೆ ಮಾಡುವ ಬೇಡಿಕೆ ಕೇಳಿಬಂದಿದೆ.

ದೇಶದ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಪ್ರತೀ ಭಾನುವಾರದ ಜೊತೆಗೆ ಎರಡನೇ ಹಾಗೂ ಕೊನೆಯ ಶನಿವಾರದಂದು ರಜೆ ಘೋಷಿಸಲಾಗಿದೆ. ಅಲ್ಲದೇ ಸರಕಾರಿ ನೌಕರರು ಕೂಡ ಈ ರಜೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ರೀಗ ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಎಲ್ಲಾ ಶನಿವಾರ ಹಾಗೂ ಭಾನುವಾರವನ್ನು ರಜಾ ದಿನವೆಂದು ಘೋಷಿಸುವಂತೆ ಒತ್ತಾಯಿಸಿವೆ.
ಒಂದೊಮ್ಮೆ ಕೇಂದ್ರ ಸರಕಾರ ಹಾಗೂ ಆರ್‌ಬಿಐ ಬ್ಯಾಂಕ್ ನೌಕರರ ಬೇಡಿಕೆಗಳಿಗೆ ಅಸ್ತು ಅಂದ್ರೆ, ಇನ್ಮುಂದೆ ವಾರದಲ್ಲಿ ಐದು ದಿನಗಳ ಕಾಲ ಮಾತ್ರವೇ ಕೆಲಸ ಇರಲಿದೆ. ಅಲ್ಲದೇ ಶನಿವಾರ ಹಾಗೂ ಭಾನುವಾರ ರಜೆ ಇರಲಿದೆ. ಒಂದೊಮ್ಮೆ ಐದು ದಿನಗಳ ಕಾಲ ಕೆಲಸದ ನಿಯಮ ಜಾರಿಯಾದ್ರೆ ದೈನದಿಂದ ಕೆಲಸದ ಅವಧಿಯಲ್ಲಿಯೂ ಬದಲಾವಣೆ ಆಗಲಿದೆ.
ಇದನ್ನೂ ಓದಿ : ಎಟಿಎಂಗಳಿಂದ ಹಣ ಡ್ರಾ ಮಾಡಲು ಹೊಸ ರೂಲ್ಸ್ : ಕ್ರೆಡಿಟ್ ಕಾರ್ಡ್‌ನಿಂದ ಹಣ ಪಡೆದ್ರೆ ಕಡಿಮೆ ಆಗುತ್ತಾ ಸಿಬಿಲ್ ಸ್ಕೋರ್ ?
ಹೊಸ ರಜೆಯ ನಿಯಮ ಜಾರಿಯಾದ್ರೆ ನಿತ್ಯವೂ ಬ್ಯಾಂಕ್ ಸಿಬ್ಬಂದಿಗಳು 45 ನಿಮಿಷಗಳ ಕಾಲ ಹೆಚ್ಚುವರಿ ಕೆಲಸವನ್ನು ಮಾಡಬೇಕಾಗುತ್ತದೆ. ಕೇವಲ ರಜೆ ಹೆಚ್ಚಳ ಮಾತ್ರವಲ್ಲ, ಉದ್ಯೋಗಿಗಳ ಸಂಬಳದಲ್ಲಿಯೂ ಶೇ.15 ರಷ್ಟು ಏರಿಕೆಯಾಗಲಿದೆ. ಇಷ್ಟೇ ಅಲ್ಲದೇ ಒಕ್ಕೂಟಗಳು ಇತರ ಬದಲಾವಣೆಗಳ ಜೊತೆಗೆ ಹೆಚ್ಚಿನ ವೇತನಕ್ಕೆ ಒತ್ತಾಯಿಸುತ್ತಿವೆ.
ಸರಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ತಮ್ಮ ಉದ್ಯೋಗಿ ಗಳ ವೇತನದಲ್ಲಿ ಶೇಕಡಾ 15ರಷ್ಟು ಹೆಚ್ಚಳಕ್ಕೆ ಮಾತುಕತೆ ನಡೆಸುತ್ತಿವೆ. ಇನ್ನು ಭಾರತೀಯ ಬ್ಯಾಂಕುಗಳ ಸಂಘ ವಾರಕ್ಕೆ ಐದು ದಿನಗಳ ಕೆಲಸ ಅವಧಿಗೆ ಅನುಮೋದನೆ ನೀಡಿದ್ದು, ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ ಅನುಮೋದನೆಗೆ ಕಾಯುತ್ತಿದೆ.
ಇದನ್ನೂ ಓದಿ : LIC Aadhaar Shila : ದಿನಕ್ಕೆ ರೂ.29 ಹೂಡಿಕೆ, ಮಹಿಳೆಯರಿಗೆ ಸಿಗುತ್ತೆ 4 ಲಕ್ಷ ರೂ., ಇದು ಎಲ್‌ಐಸಿಯ ಆಧಾರ್ ಶಿಲಾ ಅದ್ಭುತ ಯೋಜನೆ

ಈಗಾಗಲೇ ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸೇರಿದಂತೆ ಕೆಲವು ಬ್ಯಾಂಕುಗಳು ವೇತನ ಹೆಚ್ಚಳ ನಿಬಂಧನೆಗೆ ಮುಂದಾಗಿವೆ. ಈ ಮಾತುಕತೆಯ ಹಣಕಾಸು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳ ಲಾಭದಲ್ಲಿ ಏರಿಕೆ ಕಂಡಿದೆ. ಸಾಲದಾತರಿಂದ ಸಾಲವನ್ನು ಮರುಪಾವತಿ ಮಾಡಿಸಿಕೊಳ್ಳುವಲ್ಲಿಯೂ ಯಶಸ್ವಿ ಆಗಿವೆ.
ಐದು ದಿನ ಕೆಲಸದ ಜೊತೆಗೆ ವೇತನ ಹೆಚ್ಚಳಕ್ಕಾಗಿ ದೇಶದಾದ್ಯಂತ ಬ್ಯಾಂಕುಗಳ ನೌಕರರು ಈಗಾಗಲೇ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ. ಜೊತೆಗೆ ಹಳೆಯ ಪಿಂಚಣಿ ಯೋಜನೆ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಬ್ಯಾಂಕ್ ಒಕ್ಕೂಟ ಸರಕಾರದ ಮುಂದಿಟ್ಟಿವೆ. ಒಂದೊಮ್ಮೆ ಈ ನಿಯಮ ಜಾರಿಯಾದ್ರೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಜೊತೆಗೆ ಖಾಸಗಿ ಬ್ಯಾಂಕುಗಳಿಗೂ ಅನ್ವಯ ಆಗಲಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ
ಅಖಿಲ ಭಾರತ ಬ್ಯಾಂಕ್ ಎಂಪಿ ಅಸೋಸಿಯೇಷನ್ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಅವರು ಕಳೆದ ಬಾರಿಯ ಸಭೆಯ ನಂತರ ಪಿಂಚಣಿದಾರರಿಗೆ ಪಿಂಚಣಿ ನವೀಕರಿಸುವುದು ಮತ್ತು ಪರಿಷ್ಕರಿಸುವ ಬೇಡಿಕೆಯಿದೆ. ಅಲ್ಲದೇ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಆರಂಭಿಸುವುದು ನೌಕರರ ಬೇಡಿಕೆ ಆಗಿದೆ ಎಂದಿದ್ದರು.
5 Days Work A Week Salary Increase 15 Percent Good News for bank Employees