LIC Aadhaar Shila : ದಿನಕ್ಕೆ ರೂ.29 ಹೂಡಿಕೆ, ಮಹಿಳೆಯರಿಗೆ ಸಿಗುತ್ತೆ 4 ಲಕ್ಷ ರೂ., ಇದು ಎಲ್‌ಐಸಿಯ ಆಧಾರ್‌ ಶಿಲಾ ಅದ್ಭುತ ಯೋಜನೆ

ಎಲ್‌ಐಸಿಯ ಜೀವನ್‌ ಶಿಲಾ ಪಾಲಿಸಿಯಲ್ಲಿ ಮಹಿಳೆಯರು ಕನಿಷ್ಠ 75,000 ರೂ. ನಿಂದ ಗರಿಷ್ಠ 3ರೂ. ವರೆಗೆ ಹೂಡಿಕೆ ಮಾಡಬಹುದಾಗಿದೆ. ಯೋಜನೆಯ ಮೆಚ್ಯುರಿಟಿ ಅವಧಿಯು 10 ವರ್ಷಗಳಿಂದ 20 ವರ್ಷಗಳು ಆಗಿರಲಿದೆ.

ಲೈಫ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ (LIC ) ಭಾರತ ಪ್ರಮುಖ ಇನ್ಶ್ಯುರೆನ್ಸ್‌ ಕಂಪೆನಿ. ದೇಶದಲ್ಲಿ ಅತೀ ಹೆಚ್ಚು ಮಂದಿ ಎಲ್‌ಐಸಿಯಲ್ಲಿ ತಮ್ಮ ಜೀವವಿಮಾ ಪಾಲಿಸಿಗಳನ್ನು (life insurance policy) ಹೊಂದಿದ್ದಾರೆ. ಇದೀಗ ಎಲ್‌ಐಸಿ ಮಹಿಳೆಯರಿಗಾಗಿಯೇ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಪಾಲಿಸಿ ಎಲ್‌ಐಸಿ ಆಧಾರ್‌ ಶಿಲಾ (LIC Aadhaar Shila) ದಲ್ಲಿ ಮಹಿಳೆಯರು ಅದ್ಬುತ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

LIC Aadhaar Shila plan Investment of Rs29 per day Women get Rs4 Lakh this is LIC Aadhaar Shila amazing scheme
Image Credit to Original Source

ಎಲ್‌ಐಸಿ ಪರಿಚಯಿಸಿರುವ ಆಧಾರ್‌ ಶಿಲಾ ಯೋಜನೆಯಲ್ಲಿ ಮಹಿಳೆಯರು ಮಾತ್ರವೇ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಮಾಡುವ ಹೂಡಿಕೆಗಳಿಗೆ ಅತ್ಯಧಿಕ ಬಡ್ಡಿದರವನ್ನು ನೀಡಲಾಗುತ್ತಿದ್ದು, ಅತೀ ಹೆಚ್ಚಿನ ಲಾಭ ದೊರೆಯುವಂತೆ ಮಾಡಲಾಗುತ್ತಿದೆ.  ಅಷ್ಟಕ್ಕೂ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ಎಲ್‌ಐಸಿ ಆಧಾರ್‌ ಶಿಲಾ ಯೋಜನೆಯಲ್ಲಿ ಈ ಯೋಜನೆಯ ಅಡಿಯಲ್ಲಿ ನೀವು ದಿನಕ್ಕೆ 29ರೂ. ಹೂಡಿಕೆ ಮಾಡಿದ್ರೆ 20 ವರ್ಷಗಳ ನಂತರ 4 ಲಕ್ಷದವರೆಗೆ ಲಾಭವನ್ನು ಪಡೆಯಬಹುದು. ಒಂದೊಮ್ಮೆ ನಿಮಗೆ 30  ವರ್ಷ ಎಂದು ತಿಳಿದುಕೊಳ್ಳಿ. ನೀವು ನಿತ್ಯವೂ 29ರೂ. ಹೂಡಿಕೆ ಮಾಡಿದ್ರೆ ಮೊದಲ ವರ್ಷಕ್ಕೆ ನೀವು ಹೂಡಿಕೆ ಮಾಡಿದ ಹಣಕ್ಕೆ 4.5% ಬಡ್ಡಿದರ ಸೇರಿಸಿ 10,959 ರೂ. ಆಗುತ್ತದೆ. ನೀವು ಇಪ್ಪತ್ತು ವರ್ಷಗಳ ಬಳಿಕ 4 ಲಕ್ಷ ರೂಪಾಯಿಯ ವರೆಗೆ ರಿಟರ್ನ್ಸ್ ಪಡೆಯಬಹುದು.

ಎಲ್‌ಐಸಿಯ ಜೀವನ್‌ ಶಿಲಾ ಪಾಲಿಸಿಯಲ್ಲಿ ಮಹಿಳೆಯರು ಕನಿಷ್ಠ 75,000 ರೂ. ನಿಂದ ಗರಿಷ್ಠ 3ರೂ. ವರೆಗೆ ಹೂಡಿಕೆ ಮಾಡಬಹುದಾಗಿದೆ. ಯೋಜನೆಯ ಮೆಚ್ಯುರಿಟಿ ಅವಧಿಯು 10 ವರ್ಷಗಳಿಂದ 20 ವರ್ಷಗಳು ಆಗಿರಲಿದೆ. ಇನ್ನು ಪಾಲಿಸಿಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂಗಳಲ್ಲಿ ಪಾವತಿ ಮಾಡಬಹುದಾಗಿದೆ.

ಇದನ್ನೂ ಓದಿ : CIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌ ಕೊಟ್ಟ RBI

ಎಲ್‌ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮಹಿಳೆಯರು ಪಾಲಿಸಿಯ ಅವಧಿಯನ್ನು ಪೂರ್ಣಗೊಳಿಸುವ ಸಮಯದಲ್ಲಿ 70 ವರ್ಷ ವಯಸ್ಸನ್ನು ಮೀರಿರಬಾರದು. ಆದರೆ 8 ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು 55 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಈ ಪಾಲಿಸಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

LIC Aadhaar Shila plan Investment of Rs29 per day Women get Rs4 Lakh this is LIC Aadhaar Shila amazing scheme
Image Credit to Original Source

ದೀರ್ಘಾವಧಿಗೆ ಹೂಡಿಕೆ ಮಾಡುವ ಯೋಚನೆಯಲ್ಲಿದ್ದವರು ಎಲ್‌ಐಸಿಯ ಜೀವನ್‌ ಶಿಲಾ ಪಾಲಿಸಿಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಒಂದೊಮ್ಮೆ ಪಾಲಿಸಿ ಪಡೆದುಕೊಂಡವರು ಐದು ವರ್ಷಗಳ ನಂತರ ಮರಣ ಹೊಂದಿದ್ರೆ, ಅಂತಹ ಸಂದರ್ಭದಲ್ಲಿ ಅವರ ಕುಟುಂಬಸ್ಥರಿಗೆ ಹೆಚ್ಚುವರಿ ವಿಮಾ ಮೊತ್ತದ ಜೊತೆಗೆ ರಾಯಲ್ಟಿಯನ್ನು ಎಲ್‌ಐಸಿ ಪಾವತಿಸುತ್ತದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಒಂದೊಮ್ಮೆ ಎಲ್‌ಐಸಿ ಜೀವನ್‌ ಶಿಲಾ ಪಾಲಿಸಿಗೆ ಸೇರ್ಪಡೆ ಆದ ನಂತರ ಐದು ವರ್ಷಗಳ ಒಳಗೆ ಮರಣ ಹೊಂದಿದರೆ, ಅಂತಹ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಕುಟುಂಬ ಸದಸ್ಯರಿಗೆ 3 ಲಕ್ಷ ಪಾಲಿಸಿ ಮೊತ್ತವನ್ನು ನೀಡಲಾಗುತ್ತದೆ. ಜೀವನ್‌ ಶಿಲಾ ಪಾಲಿಸಿಯ ಮತ್ತೊಂದು ಅನುಕೂಲವೆಂದ್ರೆ, ಒಂದೊಮ್ಮೆ ನಿಮಗೆ ಸಾಲದ ಅಗತ್ಯವಿದ್ದರೆ, ನೀವು ಪಾವತಿಸಿರುವ ಪ್ರೀಮಿಯಂ ಮೊತ್ತದ ಶೇ.70ರಷ್ಟು ಹಣವನ್ನು ಸಾಲವಾಗಿ ನಿಮಗೆ ನೀಡಲಾಗುತ್ತದೆ.

ನೀವು ಬ್ಯಾಂಕಿನಲ್ಲಿ ಪಡೆಯುವ ಸಾಲಕ್ಕೆ ಹೋಲಿಕೆ ಮಾಡಿದ್ರೆ ಎಲ್‌ಐಸಿ ಪಾಲಿಸಿ ಮೇಲೆ ಪಡೆಯುವ ಸಾಲಕ್ಕೆ ಕಡಿಮೆ ಬಡ್ಡಿದರ ಇರುತ್ತದೆ ಅನ್ನೋದನ್ನು ಗಮನಿಸಬೇಕು. ಎಲ್‌ಐಸಿ ಪಾಲಿಸಿ ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಅನಿರೀಕ್ಷಿತ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಜೀವವಿಮೆ ನಿಮ್ಮ ಕುಟುಂಬದ ನೆರವಿಗೆ ಬರಲಿದೆ. ಈ ಕಾರಣದಿಂದಲೇ ಹೂಡಿಕೆಯ ಯೋಚನೆಯಲ್ಲಿದ್ದವರು, ಎಲ್‌ಐಸಿಯ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅನುಕೂಲ.

LIC Aadhaar Shila Investment of Rs.29 per day Women get Rs.4 Lakh, this is LIC’s Aadhaar Shila amazing scheme

Comments are closed.