ಎಟಿಎಂಗಳಿಂದ ಹಣ ಡ್ರಾ ಮಾಡಲು ಹೊಸ ರೂಲ್ಸ್‌ : ಕ್ರೆಡಿಟ್‌ ಕಾರ್ಡ್‌ನಿಂದ ಹಣ ಪಡೆದ್ರೆ ಕಡಿಮೆ ಆಗುತ್ತಾ ಸಿಬಿಲ್‌ ಸ್ಕೋರ್‌ ?

ಎಟಿಎಂನಿಂದ ಹಣ ಪಡೆಯುವುದಕ್ಕೆ ಹೊಸ ರೂಲ್ಸ್‌ ಜಾರಿಯಾಗಿದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂನಿಂದ ಹಣ ವಾಪಾಸ್‌ ಪಡೆದ್ರೆ ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತಾ ? ಇಲ್ಲಿದೆ ಇಂಟರಸ್ಟಿಂಗ್‌ ಸ್ಟೋರಿ

ಡೆಬಿಟ್‌ ಕಾರ್ಡ್‌ ಬಳಸಿ ಎಟಿಎಂಗಳಿಂದ ಹಣ ಪಡೆಯೋದು ಸಾಮಾನ್ಯ. ಆದರೆ ಎಟಿಎಂನಿಂದ ಕ್ರೆಡಿಟ್‌ ಕಾರ್ಡ್‌ ಬಳಸಿಯೂ ಹಣವನ್ನು ಪಡೆಯಬಹುದು. ಆದರೆ ಎಟಿಎಂನಿಂದ ಹಣ ಪಡೆಯುವುದಕ್ಕೆ ಹೊಸ ರೂಲ್ಸ್‌ ಜಾರಿಯಾಗಿದೆ. ಜೊತೆಗೆ ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂನಿಂದ ಹಣ ವಾಪಾಸ್‌ ಪಡೆದ್ರೆ ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತಾ ? ಇಲ್ಲಿದೆ ಇಂಟರಸ್ಟಿಂಗ್‌ ಸ್ಟೋರಿ

ಭಾರತದಲ್ಲಿ ಸರಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಸೌಕರ್ಯವನ್ನು ಒದಗಿಸುತ್ತಿವೆ. ಡೆಬಿಟ್‌ ಕಾರ್ಡ್‌ ಬಳಸಿ ಬಹುತೇಕರು ಎಟಿಎಂಗಳಿಂದ ಹಣವನ್ನು ವಾಪಾಸ್‌ ಪಡೆಯುತ್ತಾರೆ. ಆದರೆ ಕ್ರೆಡಿಟ್‌ ಕಾರ್ಡ್‌ ಕೇವಲ ಶಾಪಿಂಗ್‌, ಆನ್‌ಲೈನ್‌ ಶಾಪಿಂಗ್‌ಗೆ ಮಾತ್ರವೇ ಬಳಕೆ ಆಗುತ್ತೆ ಅಂತಾ ಅಂದುಕೊಂಡವರೇ ಹೆಚ್ಚು.

Atm cash withdrawal new rules cibil score effect from credit card through cash withdrawal
Image credit to original source

ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು ಎಟಿಎಂಗಳಿಂದ ನಗದು ಪಡೆಯಬಹುದಾಗಿದೆ. ಸಾಮ್ಯಾನ್ಯವಾಗಿ ಎಟಿಎಂಗಳಿಂದ ಡೆಬಿಟ್‌ ಕಾರ್ಡ್‌ ಬಳಸಿ ಹಣವನ್ನು ವಾಪಾಸ್‌ ಪಡೆಯುವುದರಿಂದ ಬ್ಯಾಂಕುಗಳು ಕಡಿಮೆ ಸೇವಾ ಶುಲ್ಕವನ್ನು ಪಡೆದುಕೊಳ್ಳುತ್ತವೆ. ಅಲ್ಲದೇ ಡೆಬಿಟ್‌ ಕಾರ್ಡ್‌ ಸೇವೆಗಾಗಿ ವಾರ್ಷಿಕವಾಗಿ ಸೇವಾ ಶುಲ್ಕವನ್ನು ಗ್ರಾಹಕರಿಂದ ಕಡಿತ ಮಾಡುತ್ತವೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಡೆಬಿಟ್‌ ಕಾರ್ಡ್‌ಗಳಿಗೆ ಹೋಲಿಕೆ ಮಾಡಿದ್ರೆ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಎಟಿಎಂಗಳಿಂದ ಹಣವನ್ನು ಪಡೆದುಕೊಂಡ್ರೆ ದುಬಾರಿ ಬಡ್ಡಿ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಇನ್ನು ಕ್ರೆಡಿಟ್‌ ಕಾರ್ಡ್‌ ಬಳಸಿ ಹಣವನ್ನು ಡ್ರಾ ಮಾಡುವುದರಿಂದ ನಿಮ್ಮ ಸಿಬಿಎಲ್‌ ಸ್ಕೋರ್‌ ಮೇಲೆಯೂ ಎಫೆಕ್ಟ್‌ ಆಗುವ ಸಾಧ್ಯತೆ ಹೆಚ್ಚಿದೆ.

Atm cash withdrawal new rules cibil score effect from credit card through cash withdrawal
Image credit to original source

ಸಾಮಾನ್ಯವಾಗಿ ಕೈಯಲ್ಲಿ ಹಣದ ಸಮಸ್ಯೆ ಎದುರಾದ್ರೆ ಪ್ರತಿಯೊಬ್ಬರು ಕೂಡ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಸುಲಭವಾಗಿ ಹಣವನ್ನು ಪಡೆಯಬಹುದು ಅನ್ನೋ ಉದ್ದೇಶದಿಂದಲೇ ಎಲ್ಲರೂ ಕ್ರೆಡಿಟ್‌ ಕಾರ್ಡ್‌ಗಳನ್ನು ಆಶ್ರಯಿಸುತ್ತಾರೆ. ತುಂಬಾ ಎಮರ್ಜೆನ್ಸಿ ಹಣದ ಅವಶ್ಯಕತೆ ಇದ್ದಾಗಲೂ ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂಗಳಿಂದ ಹಣವನ್ನು ಡ್ರಾ ಮಾಡುತ್ತಾರೆ.

ಕ್ರೆಡಿಟ್‌ ಕಾರ್ಡ್‌ ಬಳಸಿ ಎಂಟಿನಿಂದ ಹಣ ಡ್ರಾ : ಈ ಅಂಶ ನೆನಪಿನಲ್ಲಿಡಿ

ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಯಾವುದೇ ಹಣದ ವ್ಯವಹಾರ ಮಾಡುವ ಮುನ್ನ ಸರಿಯಾಗಿ ಯೋಚಿಸಬೇಕು. ಅದ್ರಲ್ಲೂ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಎಟಿಎಂಗಳಿಂದ ಹಣ ಪಡೆಯೋ ಮೊದಲು ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಬೇಕು. ಎಟಿಎಂ ಬಳಸಿ ಹಣವನ್ನು ವಿಥ್‌ಡ್ರಾ ಮಾಡುವುದರಿಂದ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಡಿಮೆ ಆಗುತ್ತದೆ. ಒಂದೊಮ್ಮೆ ನಿಮ್ಮ ಸಿಬಿಲ್‌ ಸ್ಕೋರ್‌ ಕಡಿಮೆ ಆದ್ರೆ ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ : CIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌ ಕೊಟ್ಟ RBI

ಕ್ರೆಡಿಟ್‌ ಕಾರ್ಡ್‌ ನಗದು ಪಡೆಯಲು ದುಬಾರಿ ಶುಲ್ಕ :

ಕ್ರೆಡಿಟ್‌ ಕಾರ್ಡ್‌ ಬಳಸಿ ಎಟಿಎಂಗಳಿಂದ ಹಣವನ್ನು ಡ್ರಾ ಮಾಡುವುದು ಬಹು ಸುಲಭ. ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಹಣವನ್ನು ಹಿಂಪಡೆಯುವಾಗ ಬ್ಯಾಂಕುಗಳು ದುಬಾರಿ ಬಡ್ಡಿದರವನ್ನು ವಿಧಿಸುತ್ತವೆ. ಅಲ್ಲದೇ ಈ ಹಣವನ್ನು ಮರುಪಾವತಿ ಮಾಡಲು ಯಾವುದೇ ಹೆಚ್ಚುವರಿ ಸಮಯವನ್ನು ನಿಮಗೆ ನೀಡುವುದಿಲ್ಲ. ಒಂದೊಮ್ಮೆ ಹಣ ಪಾವತಿ ವಿಳಂಭವಾದ್ರೆ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತದೆ. ತಿಳಿದಿರಲಿ.

ಇದನ್ನೂ ಓದಿ : LIC Aadhaar Shila : ದಿನಕ್ಕೆ ರೂ.29 ಹೂಡಿಕೆ, ಮಹಿಳೆಯರಿಗೆ ಸಿಗುತ್ತೆ 4 ಲಕ್ಷ ರೂ., ಇದು ಎಲ್‌ಐಸಿಯ ಆಧಾರ್‌ ಶಿಲಾ ಅದ್ಭುತ ಯೋಜನೆ

ಎಟಿಎಂಗಳಿಂದ ನೀವು ಕ್ರೆಡಿಟ್‌ ಕಾರ್ಡ್‌ ಬಳಸಿ ಹಣವನ್ನು ಪಡೆದ ಕೂಡಲೇ ನಿಮ್ಮ ಸಿಬಿಎಲ್‌ ಸ್ಕೋರ್‌ ಕಡಿಮೆ ಆಗೋದಿಲ್ಲ. ಬದಲಾಗಿ ನೀವು ಹಣವನ್ನು ಪಡೆದು ಮರು ಪಾವತಿ ವಿಳಂಭವಾದ್ರೆ ನಿಮಗೆ ಸಮಸ್ಯೆ ಗ್ಯಾರಂಟಿ. ಮಾತ್ರವಲ್ಲ ಎಟಿಎಂ ಮೂಲಕ ನಗದು ಪಡೆಯುವುದಕ್ಕೆ ಬ್ಯಾಂಕುಗಳು ದುಬಾರಿ ಶುಲ್ಕವನ್ನು ವಿಧಸುತ್ತವೆ.

ATM Cash Withdrawal New rules cibil score effect from credit card Through cash withdrawal

Comments are closed.