ಭಾನುವಾರ, ಏಪ್ರಿಲ್ 27, 2025
Homebusinessಅವಿವಾಹಿತ ಮಹಿಳೆಯರಿಗೆ ಪ್ರತೀ ತಿಂಗಳು 500ರೂ. : ಸರಕಾರದಿಂದ ಗುಡ್‌ನ್ಯೂಸ್‌, ಮನಸ್ವಿನಿ ಯೋಜನೆಗೆ ಅರ್ಜಿ...

ಅವಿವಾಹಿತ ಮಹಿಳೆಯರಿಗೆ ಪ್ರತೀ ತಿಂಗಳು 500ರೂ. : ಸರಕಾರದಿಂದ ಗುಡ್‌ನ್ಯೂಸ್‌, ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

- Advertisement -

ಬೆಂಗಳೂರು : ಕರ್ನಾಟಕ ಸರಕಾರ ಮಹಿಳೆಯರಿಗಾಗಿ ಸಾಲು ಸಾಲು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆ ( Gruha Lakshmi Scheme), ಸ್ತ್ರೀಶಕ್ತಿ ಸಂಘಟನೆಗಳ ಸಾಲದ ಬೆನ್ನಲ್ಲೇ ಇದೀಗ ಮನಸ್ವಿನಿ ಯೋಜನೆ(Manaswini scheme Karnataka) ಜಾರಿಗೆ ತಂದಿದ್ದು, ಅವಿವಾಹಿತರಿಗೆ ಹಾಗೂ ವಿಚ್ಚೇಧಿತ ಮಹಿಳೆಯರಿಗೆ ಅನುಕೂಲವಾಗಲಿದೆ.

ಮಹಿಳೆಯರನ್ನು ಸ್ವಾಲಂಭಿಗಳನ್ನಾಗಿ ಮಾಡುವ ಉದ್ದೇಶದಿಂದಲೇ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಹಣವನ್ನು ಮೀಸಲು ಇಟ್ಟಿತ್ತು. ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಎರಡು ಕಂತುಗಳು ಮಹಿಳೆಯ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ.

500 per month for unmarried and divorced women for Manaswini Yojana implemented, how to apply
Image Credit to Original Source

ಈ ನಡುವಲ್ಲೇ ಸ್ತ್ರಿಶಕ್ತಿ ಗುಂಪುಗಳ ಮಹಿಳೆಯರಿಗೆ ಗುಡ್‌ನ್ಯೂಸ್‌ ಕೊಟ್ಟಿರುವ ಸರಕಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಘೋಷಣೆ ಮಾಡಿದೆ. ಇಷ್ಟು ವರ್ಷ ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಬಡ್ಡಿಯನ್ನು ಪಡೆಯದೇ ಸಾಲ ನೀಡಲಾಗುತ್ತಿದ್ದು, ಮಹಿಳೆಯರು ಕಂತುಗಳ ಆಧಾರದಲ್ಲಿ ಅಸಲನ್ನು ಮಾತ್ರವೇ ಪಾವತಿ ಮಾಡಬಹುದಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ನವರಾತ್ರಿ ಗಿಫ್ಟ್, 2 ನೇ ಕಂತಿನ ಹಣ ಜಮೆ

ಇದೀಗ ರಾಜ್ಯ ಸರಕಾರ ನವರಾತ್ರಿ, ದಸರಾ ಹೊತ್ತಲ್ಲೇ ಮತ್ತೊಂದು ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಈ ಯೋಜನೆಯು 40 ರಿಂದ 64 ವರ್ಷದ ಒಳಗಿನ ವಿಚ್ಚೇದಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ. ಮಹಿಳೆಯರನ್ನು ಸ್ವಾವಲಂಭಿ ಗಳನ್ನಾಗಿ ಮಾಡಬೇಕು ಅನ್ನೋದು ಈ ಯೋಜನೆಯ ಉದ್ದೇಶವಾಗಿದೆ.

ಪ್ರಮುಖವಾಗಿ ರಾಜ್ಯ ಸರಕಾರ 2013 ರಲ್ಲಿ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಇದೇ ಯೋಜನೆಯ ಮೂಲಕ ಇದೀಗ ಅವಿವಾಹಿತರು ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಪ್ರತೀ ತಿಂಗಳು ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ.

500 per month for unmarried and divorced women for Manaswini Yojana implemented, how to apply
Image Credit to Original Source

ಇದನ್ನೂ ಓದಿ : ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಮನಸ್ವಿನಿ ಯೋಜನೆಯ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಾಹಿತಿಯನ್ನು ನೀಡಿದ್ದಾರೆ. ಈ ಯೋಜನೆಗಾಗಿ ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಬರೋಬ್ಬರಿ 138 ಕೋಟಿ ರೂಪಾಯಿಯನ್ನು ಮೀಸಲು ಇರಿಸಲಾಗಿದೆ. ರಾಜ್ಯ ಸರಕಾರ ಮಹಿಳೆಯರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಈಗಾಗಲೇ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ರಾಜ್ಯದಲ್ಲಿನ ಸರಕಾರದ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದ್ದು, ಕಳೆದ ಕೆಲವು ತಿಂಗಳಿನಿಂದಲೂ ಈ ಯೋಜನೆಯ ಲಾಭವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಸರಕಾರಿ ಬಸ್ಸುಗಳಲ್ಲಿ ಇದೀಗ ಜನರು ತುಂಬಿತುಳುಕುತ್ತಿದ್ದಾರೆ.

ಇದನ್ನೂ ಓದಿ : ಮಹಿಳೆಯರಿಗೆ ಬಡ್ಡಿಯಿಲ್ಲದೇ ಸಿಗುತ್ತೆ 2 ಲಕ್ಷ ರೂ ಸಾಲ : ಗೃಹಲಕ್ಷ್ಮೀ ಬೆನ್ನಲ್ಲೇ ಸರಕಾರದಿಂದ ಮತ್ತೊಂದ ಯೋಜನೆ

500 per month for unmarried and divorced women for Manaswini Yojana implemented, how to apply

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular