₹ 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 50MP ಕ್ಯಾಮೆರಾ 6000mAh ಬ್ಯಾಟರಿ ಸ್ಮಾರ್ಟ್‌ಪೋನ್‌ : ಅಮೆಜಾನ್ ಸೇಲ್ ನಲ್ಲಿ ಭರ್ಜರಿ ಆಫರ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2023ರಲ್ಲಿ ( Amazon Great Indian Sale 2023 ) 10,000ಕ್ಕಿಂತ ಕಡಿಮೆ ಬೆಲೆಗೆ ರೆಡ್‌ಮಿ, ರಿಯಲ್‌ಮೀ, ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಪೋನ್‌ ಖರೀದಿಸಬಹುದಾಗಿದೆ.

ಭಾರತದಲ್ಲಿ ಅತ್ಯುತ್ತಮ ತಂತ್ರಜ್ಞಾನದ ಮೊಬೈಲ್‌ ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದ್ರಲ್ಲೂ ಹಬ್ಬದ ಹೊತ್ತಲ್ಲೇ ದುಬಾರಿ ಸ್ಮಾರ್ಟ್‌ಪೋನ್‌ ಗಳ ಮೇಲೆ ಬಾರೀ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಅದ್ರಲ್ಲೂ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ 2023ರಲ್ಲಿ ( Amazon Great Indian Sale 2023 ) 10,000ಕ್ಕಿಂತ ಕಡಿಮೆ ಬೆಲೆಗೆ ರೆಡ್‌ಮಿ, ರಿಯಲ್‌ಮೀ, ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಪೋನ್‌ ಖರೀದಿಸಬಹುದಾಗಿದೆ.

ಸ್ಮಾರ್ಟ್‌ಪೋನ್‌ ಖರೀದಿ ಮಾಡಬೇಕು ಅಂದು ಕೊಳ್ಳುತ್ತಿರುವವರಿಗೆ ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ( Amazon Great Indian Sale 2023 ) ಅತ್ಯುತ್ತಮ ಅವಕಾಶವನ್ನು ಕಲ್ಪಿಸಿದೆ. ಈ ಬಾರಿಯ ಸೇಲ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್‌ಗಳ ಮೇಲೆ ಭರ್ಜರಿ ಆಫರ್‌ ಘೋಷಿಸಿದ್ದರೆ, ಇದೀಗ ಬಡವರು ಹಾಗೂ ಮಧ್ಯಮ ವರ್ಗದವರಿಗಾಗಿ ಬೆಸ್ಟ್ ಫೀಚರ್ ಸ್ಮಾರ್ಟ್‌ಫೋನ್‌ಗಳನ್ನು ರೂ 10,000ಕ್ಕಿಂತ (latest mobile phones under 10000) ಕಡಿಮೆ ಬೆಲೆಗೆ ಖರೀದಿಸಬಹುದು.

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000 Redmi A2
Image Credit to Original Source

Amazon ದಸರಾ ಹಾಗೂ ದೀಪಾವಳಿಯ ಹೊತ್ತಲ್ಲೇ ಭರ್ಜರಿ ಮಾರಾಟವನ್ನು ನಡೆಸುತ್ತಿದೆ. ಅದ್ರಲ್ಲೂ ದೀಪಾವಳಿಯ ಮಾರಾಟದಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ 50% ವರೆಗೆ ರಿಯಾಯಿತಿ ಘೋಷಣೆ ಮಾಡಿದೆ. ಒಂದೊಮ್ಮೆ ಕಡಿಮೆ ಬಜೆಟ್‌ ಮೊಬೈಲ್‌ ಪೋನ್‌ ಖರೀದಿ ಮಾಡುವ ಯೋಚನೆ ಇದ್ದವರು ರೂ 10,000 ಕ್ಕಿಂತ ಕಡಿಮೆ ಬೆಲೆಗೆ ಮೊಬೈಲ್‌ ಖರೀದಿಸಬಹುದಾಗಿದೆ.

ಇದನ್ನೂ ಓದಿ : ದೀಪಾವಳಿ ಬಿಗ್‌ ಸೇಲ್‌ನಲ್ಲಿ ಆಪಲ್‌ ಐಪೋನ್ 15 ಮೇಲೆ ಭರ್ಜರಿ ಡಿಸ್ಕೌಂಟ್‌

ಅಮೆಜಾನ್ ಮಾರಾಟದಲ್ಲಿ 50% ವರೆಗೆ Redmi ಮತ್ತು Samsung ನಂತಹ ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳೂ ಇವೆ. ಈ ಸ್ಮಾರ್ಟ್‌ಪೋನ್‌ಗಳನ್ನು ಅರ್ಧ ಬೆಲೆಗೆ ನೀವು ಖರೀದಿ ಮಾಡಬಹುದಾಗಿದೆ. ಹಾಗಾದ್ರೆ ಯಾವ ಕಂಪೆನಿಯ ಯಾವ ಮೊಬೈಲ್‌ ದೀಪಾವಳಿ ಸೇಲ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ ಅನ್ನೋದನ್ನು ನೋಡೋಣಾ.

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000 Real me 12C
Image Credit to Original Source

ರಿಯಲ್‌ ಮೀ 12ಸಿ ( Realmi 12C)ಸ್ಮಾರ್ಟ್‌ಫೋನ್:

Amazon Great Indian Sale 2023 ರಲ್ಲಿ ಅತ್ಯಂತ ಕಡಿಮೆ ಬೆಲೆಯ ಬಜೆಟ್‌ ಸ್ನೇಹಿ ಸ್ಮಾರ್ಟ್‌ಪೋನ್‌ಗಾಗಿ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ MediaTek Helio G85 ಪ್ರೊಸೆಸರ್‌ ಒಳಗೊಂಡಿದೆ. ಅಮೆಜಾನ್‌ನಲ್ಲಿ ಫೋನ್ ಅನ್ನು 50% ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಪೋನ್ MRP ದರ ರೂ 13,999 ಇದ್ದು, ಇದೀಗ ಅಮೆಜಾನ್‌ ದೀಪಾವಳಿ ಸೇಲ್‌ನಲ್ಲಿ ರೂ 6,999 ಕ್ಕೆ ಖರೀದಿಸಬಹುದಾಗಿದೆ.

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000 Redmi 12C
Image Credit to Original Source

ರೆಡ್‌ಮೀ ಎ2 (Redmi A2) :

ರೆಡ್‌ಮಿ ಕಂಪೆನಿ ಭಾರತದಲ್ಲಿ ಅತ್ಯುತ್ತಮ ತಂತ್ರಜ್ಞಾನದ ಸ್ಮಾರ್ಟ್‌ಪೋನ್‌ ಗಳನ್ನು ಪರಿಚಯಿಸುತ್ತಿದೆ. ಇದೀಗ 8MP ಡ್ಯುಯಲ್ ಕ್ಯಾಮೆರಾ ಒಳಗೊಂಡಿರುವ ರೆಡ್‌ಮೀ ೨ ಸ್ಮಾರ್ಟ್‌ಪೋನ್‌ಗನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ. ಸೆಲ್ಪಿಗಾಗಿ 5MP ಕ್ಯಾಮೆರಾವನ್ನು ಒಳಗೊಂಡಿದೆ. ಈ ಪೋನ್‌ ಮಾರುಕಟ್ಟೆಯಲ್ಲಿ 9,999 ಲಭ್ಯವಿದೆ. ಆದರೆ ಅಮೆಜಾನ್‌ 47% ರಷ್ಟು ರಿಯಾಯಿತಿ ಘೋಷಿಸಿದ್ದು, ಇದೀಗ ರೂ 5,299 ಕ್ಕೆ ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ : ಕೇವಲ 6,499ರೂ.ಗೆ ಸಿಗುತ್ತೆ 4,000mAh ಸುದೀರ್ಘ ಬ್ಯಾಟರಿ ಮೊಬೈಲ್ : ಭಾರತದಲ್ಲಿ ಬಿಡುಗಡೆ ಆಯ್ತು Itel A05s

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000 samsung galaxy m04
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ04 (Samsung Galaxy M04):

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಮಾದರಿಯ ಸ್ಮಾರ್ಟ್‌ಪೋನ್‌ಗಳು ಈಗಾಗಲೇ ಭಾರತೀಯ ಗ್ರಾಹಕರ ಗಮನ ಸೆಳೆದಿದೆ. MediaTek Helio P35 ಆಕ್ಟಾ-ಕೋರ್ ಪ್ರೊಸೆಸರ್‌ ಒಳಗೊಂಡಿರುವ ಈ ಸ್ಮಾರ್ಟ್‌ ಪೋನ್‌ ಈಗಾಗಲೇ ಅತ್ಯಧಿಕ ಮಾರಾಟ ಕಂಡಿದೆ. 4GB RAM ಹೊಂದಿದ್ದು 8GB ವರೆಗೆ ವಿಸ್ತರಿಸಬಹುದು. 13MP + 2MP ಎರಡು ಕ್ಯಾಮೆರಾ ಒಳಗೊಂಡಿದ್ದು, ಇದೀಗ ಅಮೆಜಾನ್‌ ಸೇಲ್‌ ನಲ್ಲಿ ಈ ಸ್ಮಾರ್ಟ್‌ಪೋನ್‌ಗಳ ಮೇಲೆ 44% ರಿಯಾಯಿತಿ ಘೋಷಿಸಿದೆ. ನೀವು ರೂ 7,499 ಕ್ಕೆ ಈ ಸ್ಮಾರ್ಟ್‌ಪೋನ್‌ ಖರೀದಿಸಬಹುದು.

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000 samsung galaxy m13
Image Credit to Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ13(Samsung Galaxy M13):

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಮೊಬೈಲ್‌ ಪೋನ್‌ ನೋಡಲು ಆಕರ್ಷಕವಾಗಿದೆ. ಅದ್ರಲ್ಲೂ ಆಕ್ವಾ ಹಸಿರು ಬಣ್ಣದ ಮೊಬೈಲ್‌ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಪೋನ್ 6000mAh ಲಿಥಿಯಂ-ಐಯಾನ್‌ ಬ್ಯಾಟರಿ ಹೊಂದಿದ್ದು, ಸುದೀರ್ಘ ಅವಧಿಯ ವರೆಗೆ ಚಾರ್ಜಿಂಗ್‌ ಲಭಿಸಲಿದೆ. ಇನ್ನು 50MP + 5MP + 2MP ಟ್ರಿಪಲ್‌ ಕ್ಯಾಮೆರಾ ಒಳಗೊಂಡಿದೆ.

ಇದನ್ನೂ ಓದಿ : 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಮೊಬೈಲ್‌

ಇನ್ನು ಈ ಸ್ಮಾರ್ಟ್‌ಪೋನ್‌ ಸೆಲ್ಪಿ ಪ್ರಿಯರಿಗಾಗಿಯೇ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಣೀಡಲಾಗಿದೆ. ಸದ್ಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿಯ ಈ ಸ್ಮಾರ್ಟ್‌ಪೋನ್‌ ಅಮೆಜಾನ್‌ ಸೇಲ್‌ನಲ್ಲಿ 38% ರಷ್ಟು ರಿಯಾಯಿತಿ ಘೋಷಿಸಿದ್ದು, ಈ ಸ್ಮಾರ್ಟ್‌ಪೋನ್‌ ಅನ್ನು ಇದೀಗ ಕೇವಲ ರೂ 9,199 ಕ್ಕೆ ಖರೀದಿ ಮಾಡಬಹುದಾಗಿದೆ.

Amazon Great Indian Sale 2023 Buy 50MP Camera 6000mAh battery Best Feature Smartphones Under Rs 10,000

Comments are closed.