ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಕರ್ನಾಟಕ ಸರಕಾರ ಈಗಾಗಲೇ ಜಾರಿ ಮಾಡಿದೆ. ಎರಡು ಕಂತಿನ ಹಣವನ್ನು ಗೃಹಿಣಿಯರ ಖಾತೆಗೆ ಜಮೆ ಮಾಡಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯನ್ನು ಮಂಗಳಮುಖಿಯರಿಗೂ (Transgender Gruha Lakshmi Scheme) ವಿಸ್ತರಣೆ

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯನ್ನು (Gruha Lakshmi Scheme) ಕರ್ನಾಟಕ ಸರಕಾರ ಈಗಾಗಲೇ ಜಾರಿ ಮಾಡಿದೆ. ಎರಡು ಕಂತಿನ ಹಣವನ್ನು ಗೃಹಿಣಿಯರ ಖಾತೆಗೆ ಜಮೆ ಮಾಡಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯನ್ನು ಮಂಗಳಮುಖಿಯರಿಗೂ (Transgender Gruha Lakshmi Scheme) ವಿಸ್ತರಣೆ ಮಾಡುವ ಕುರಿತು ರಾಜ್ಯ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Gruha lakshmi Scheme for Transgender or Mangalamukhi An important decision by Karnataka government
Image credit to Original Source

ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಇಂದು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಗೃಹಲಕ್ಷ್ಮೀ ಯೋಜನೆಯನ್ನು ಈಗಾಗಲೇ ರಾಜ್ಯದಲ್ಲಿನ ಪ್ರತೀ ಕುಟುಂಬದ ಯಜಮಾನಿಗೆ ನೀಡಲಾಗುತ್ತಿದೆ. ಇದೀಗ ಯೋಜನೆಯನ್ನು ಇನ್ಮುಂದೆ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಸ್ತರಿಸಲಾಗಿದ್ದು, ಪ್ರತೀ ತಿಂಗಳು 2ooo ರೂಪಾಯಿಯನ್ನು ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಈಗಾಗಲೇ ಹಲವು ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ. ಇದೀಗ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯನ್ನು ಪ್ರತೀ ಕುಟುಂಬದ ಯಜಮಾನಿಯ ಖಾತೆಗೆ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿತ್ತು. ಮಹಿಳೆಯರಿಗೆ ಮಾತ್ರವೇ ಇದುವರೆಗೂ ಈ ಯೋಜನೆಯ ಲಾಭ ಸಿಗುತ್ತಿದೆ.

ಇದನ್ನೂ ಓದಿ : ಸರಕಾರಿ ನೌಕರರಿಗೆ ದೀಪಾವಳಿ ಬೋನಸ್‌ ಘೋಷಣೆ : ಆದ್ರೆ ಈ ನೌಕರರಿಗೆ ಮಾತ್ರವೇ ಅವಕಾಶ

ಕರ್ನಾಟಕ ರಾಜ್ಯ ಸರಕಾರದ ಹೊಸ ಘೋಷಣೆಯಿಂದಾಗಿ ಇನ್ಮುಂದೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಲಾಭ ದೊರೆಯಲಿದೆ. ಈ ಕುರಿತು ರಾಜ್ಯ ಸರಕಾರ ಪತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಲಿದ್ದು ಶೀಘ್ರದಲ್ಲಿಯೇ ಈ ಯೋಜನೆಗೆ ಮಂಗಳ ಮುಖಿಯರನ್ನು ಸೇರ್ಪಡೆಗೊಳಿಸಲಾಗುತ್ತದೆ.

ಗೃಹಲಕ್ಷ್ಮೀ ಯೋಜನೆಯನ್ನು ಅಗಸ್ಟ್‌ ತಿಂಗಳಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಮೊದಲ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಅಕ್ಟೋಬರ್‌ ತಿಂಗಳಿನಲ್ಲಿ ಎರಡನೇ ಕಂತಿನ ಹಣವನ್ನು ನವರಾತ್ರಿಯ ಹೊತ್ತಲ್ಲೇ ನೀಡಲಾಗಿದೆ. ಇದರಿಂದಾಗಿ ಗೃಹಿಣಿಯರು ಸಖತ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ :  ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ನವರಾತ್ರಿ ಗಿಫ್ಟ್, 2 ನೇ ಕಂತಿನ ಹಣ ಜಮೆ 

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಹಣ ಖಾತೆಗೆ ಜಮೆ ಆಗದೇ ಇರುವವರಿಗೆ ಸರಕಾರ ಇದೀಗ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ರೇಷನ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆಯನ್ನು ನೀಡಿದೆ.

Gruha lakshmi Scheme for Transgender or Mangalamukhi An important decision by Karnataka government
Image Credit to Original Source

ಮಂಗಳಮುಖಿಯರ ಬೇಡಿಕೆಗೆ ಸ್ಪಂದಿಸಿದ ಸರಕಾರ

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯ ಮೂಲಕ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಮಂಗಳಮುಖಿಯರನ್ನು ಕೂಡ ಈ ಯೋಜನೆಗೆ ಪರಿಗಣನೆ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಇದೀಗ ರಾಜ್ಯ ಸರಕಾರ ಮಂಗಳಮುಖಿಯರ ಬೇಡಿಕೆಗೆ ಸ್ಪಂದಿಸಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಸರಕಾರದಿಂದ ಮಹತ್ವದ ಘೋಷಣೆ

ಕರ್ನಾಟಕ ರಾಜ್ಯದಲ್ಲಿ 3-4 ರಿಂದ ಲಕ್ಷ ಮಂದಿ ಮಂಗಳಮುಖಿ ಯರಿದ್ದಾರೆ. ಈ ಪೂಕಿ 41,312 ಮಂದಿ ಮತದಾರರಿದ್ದಾರೆ. ಆದರೆ ಹಲವು ಮಂಗಳ ಮುಖಿಯರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ನಾವು ಮಹಿಳೆಯರಂತೆಯೇ ಬದುಕು ಸಾಗಿಸುತ್ತಿದ್ದೇವೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಅಳಲು ತೋಡಿಕೊಂಡಿದ್ದರು.

ಸರಕಾರದ ಯೋಜನೆ ನೀಡುವಾಗ ಮಾತ್ರವೇ ಯಾಕೆ ರಾಜಕೀಯ ಮಾಡುತ್ತೀರಿ. ನಮಗೂ ಗೃಹಲಕ್ಷ್ಮೀ, ಶಕ್ತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದರು.ಇದೀಗ ಸರಕಾರ ಮಂಗಳಮುಖಿಯರ ಬೇಡಿಕೆಗೆ ಮಣಿದಿದೆ. ಮಂಗಳಮುಖಿಯರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದೆ.

Gruha lakshmi Scheme for Transgender or Mangalamukhi An important decision by Karnataka government

Comments are closed.