A huge increase in the price of gold : ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ

ನವದೆಹಲಿ: ಆಭರಣ ಪ್ರಿಯರಿಗೆ ಚಿನ್ನ ಬಿಗ್‌ ಶಾಕ್‌ ಕೊಟ್ಟಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನಾಭರಣದ ಬೆಲೆಯಲ್ಲಿ ಭಾರೀ ಏರಿಕೆಯನ್ನು (A huge increase in the price of gold ) ಕಂಡಿದೆ. ಇಂದು ಶನಿವಾರದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.

ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನದ ದರವು ರೂ.5,155 ನಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನ ರೂ. 5,160. ವಾರಾಂತ್ಯ ಬರುತ್ತಿದ್ದಂತೆ ಚಿನ್ನದ ದರದಲ್ಲಿ ಭಾರಿ ಏರಿಕೆ. ಇಂದಿನ ಚಿನ್ನದ ದರ ಇಲ್ಲಿದೆ. ದೈನಂದಿನ ದರ ಪ್ರಕ್ರಿಯೆಯಲ್ಲಿ, ಇಂದು ಬೆಳಿಗ್ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ ರೂ.47,300 ಕ್ಕೆ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,600 ರೂ. ಬೆಲೆಯಿದೆ.

ಪ್ರಮುಖ ನಗರಗಳಲ್ಲಿ ಇಂದಿನ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು: ರೂ. 47,300 (22 ಕ್ಯಾರೆಟ್) – ರೂ.51,600 (24 ಕ್ಯಾರೆಟ್)

ಚೆನ್ನೈ: ರೂ. 48,050 (22 ಕ್ಯಾರೆಟ್) – ರೂ. 52,420 (24 ಕ್ಯಾರೆಟ್)

ದೆಹಲಿ: ರೂ.47,400 (22 ಕ್ಯಾರೆಟ್) – ರೂ. 51,710 (24 ಕ್ಯಾರೆಟ್)

ಹೈದರಾಬಾದ್: ರೂ. 47,000 (22 ಕ್ಯಾರೆಟ್) – ರೂ. 51,230 (24 ಕ್ಯಾರೆಟ್)

ಕೋಲ್ಕತ್ತಾ: ರೂ.47,250 (22 ಕ್ಯಾರೆಟ್) – ರೂ.51,550 (24 ಕ್ಯಾರೆಟ್)

ಮಂಗಳೂರು: ರೂ.47,300 (22 ಕ್ಯಾರೆಟ್) – ರೂ.51,600 (24 ಕ್ಯಾರೆಟ್)

ಮುಂಬೈ: ರೂ.47,250 (22 ಕ್ಯಾರೆಟ್) – ರೂ.51,550 (24 ಕ್ಯಾರೆಟ್)

ಮೈಸೂರು: ರೂ.47,300 (22 ಕ್ಯಾರೆಟ್) – ರೂ.51,600 (24 ಕ್ಯಾರೆಟ್)

ಇದನ್ನೂ ಓದಿ: ಇಂದಿನಿಂದ ಏಷ್ಯಾ ಕಪ್ 2022 ಆರಂಭ, IND vs PAK Playing 11

ಬೆಳ್ಳಿ ದರ

ದೇಶದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ರೂ.55,000 ಏರಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ದರ 60,900 ರೂ. ದೇಶದ ಹಲವೆಡೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಂಗಳೂರು, ಮೈಸೂರಿನಲ್ಲೂ ರೂ.60,900 ನಿಗದಿಯಾಗಿದೆ.

A huge increase in the price of gold as the weekend comes. Here is the today’s gold price

Comments are closed.