Virat Kohli 100 T20 Match : ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಈ ಮಹೋನ್ನತ ದಾಖಲೆ ಬರೆಯಲಿದ್ದಾರೆ ಕಿಂಗ್ ಕೊಹ್ಲಿ

ದುಬೈ: (Virat Kohli 100 T20 Match) ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ, ಏಷ್ಯಾ ಕಪ್ ಟೂರ್ನಿಯ (Asia Cup 2022) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಹೋನ್ನತ ದಾಖಲೆಯೊಂದನ್ನು ಬರೆಯಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100ನೇ ಟಿ20 ಪಂದ್ಯ. ಇದರೊಂದಿಗೆ ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಪ್ರಕಾರಗಳಲ್ಲಿ 100 ಪಂದ್ಯಗಳನ್ನಾಡಿದ್ದ ಭಾರತದ ಮೊದಲ ಆಟಗಾರನೆಂಬ ದಾಖಲೆ ಬರೆಯಲಿದ್ದಾರೆ.

ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ತಲಾ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದಾಖಲೆ ನ್ಯೂಜಿಲೆಂಡ್’ನ ದಿಗ್ಗಜ ಆಟಗಾರ ರಾಸ್ ಟೇಲರ್ ಹೆಸರಲ್ಲಿದೆ. ಆ ಸಾಲಿಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗಲಿದ್ದಾರೆ. ಕೊಹ್ಲಿಯ 100ನೇ ಟಿ20 ಪಂದ್ಯ ಪಾಕಿಸ್ತಾನ ವಿರುದ್ಧವೇ ನಿಗದಿಯಾಗಿರುವುದು ವಿಶೇಷ. ತಮ್ಮ ಸ್ಮರಣೀಯ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಡುವ ವಿಶ್ವಾಸದಲ್ಲಿದ್ದಾರೆ ವಿರಾಟ್ ಕೊಹ್ಲಿ.

ಪಾಕಿಸ್ತಾನ ವಿರುದ್ಧ ಟಿ20 ಕ್ರಿಕೆಟ್’ನಲ್ಲಿ ಅಮೋಘ ದಾಖಲೆ ಹೊಂದಿರುವ ಕಿಂಗ್ ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಒಟ್ಟು 7 ಟಿ20 ಪಂದ್ಯಗಳನ್ನಾಡಿದ್ದು, 77.75ರ ಅಮೋಘ ಸರಾಸರಿಯಲ್ಲಿ 311 ರನ್ ಕಲೆ ಹಾಕಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ದಾಖಲೆ ನಾಯಕ ರೋಹಿತ್ ಶರ್ಮಾ ಹೆಸರಲ್ಲಿದ್ದು, ರೋಹಿತ್ ಇದುವರೆಗೆ ಒಟ್ಟು 132 ಪಂದ್ಯಗಳನ್ನಾಡಿದ್ದಾರೆ. ಭಾನುವಾರ ನಡೆಯುವ ಪಾಕ್ ವಿರುದ್ಧದ ಪಂದ್ಯದ ಮೂಲಕ ವಿರಾಟ್ ಕೊಹ್ಲಿ 100 ಟಿ20 ಪಂದ್ಯಗಳ ಕ್ಲಬ್’ಗೆ ಸೇರ್ಪಡೆಯಾಗಲಿದ್ದಾರೆ.

33 ವರ್ಷದ ವಿರಾಟ್ ಕೊಹ್ಲಿ ಇದುವರೆಗೆ 102 ಟೆಸ್ಟ್, 262 ಏಕದಿನ ಹಾಗೂ 99 ಟಿ20 ಪಂದ್ಯಗಳನ್ನಾಡಿದ್ದಾರೆ. ಹೀಗೆ ಒಟ್ಟು 463 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ, 70 ಶತಕಗಳ ಸಹಿತ ಒಟ್ಟು 23,726 ರನ್ ಕಲೆ ಹಾಕಿದ್ದಾರೆ. 99 ಟಿ20 ಪಂದ್ಯಗಳಿಂದ 50.12ರ ಸರಾಸರಿಯಲ್ಲಿ 30 ಅರ್ಧಶತಕಗಳ ಸಹಿತ 3,308 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಟಿ20 ಸಾಧನೆ
ಪಂದ್ಯ: 99
ಇನ್ನಿಂಗ್ಸ್: 91
ರನ್: 3308
ಸರಾಸರಿ: 50.12
ಸ್ಟ್ರೈಕ್’ರೇಟ್: 137.66
ಅರ್ಧಶತಕ: 30
ಬೌಂಡರಿ: 299
ಸಿಕ್ಸರ್: 93

ಇದನ್ನೂ ಓದಿ : KSCA Maharaja Trophy : ಮಯಾಂಕ್ ತಂಡವನ್ನು ಸೋಲಿಸಿ ಮನೀಶ್ ಟೀಮ್ ಚಾಂಪಿಯನ್

ಇದನ್ನೂ ಓದಿ : Suresh Raina Comeback IPL : ಐಪಿಎಲ್ ಕಂಬ್ಯಾಕ್‌ಗೆ ಸುರೇಶ್ ರೈನಾ ಬಿಗ್ ಪ್ಲಾನ್, ಸಿಎಸ್‌ಕೆ ಜೆರ್ಸಿ ಧರಿಸಿ ಭರ್ಜರಿ ಪ್ರಾಕ್ಟೀಸ್

Virat Kohli 100 T20 Match Asia cup 2022 India vs Pakistan

Comments are closed.