Aadhar card lock-unlock facility : ನಿಮ್ಮ ಆಧಾರ್ ಕಾರ್ಡ್‌ ದುರ್ಬಳಕೆ ಆಗದಿರಲಿ : UIDAI ಸೌಲಭ್ಯ ಬಳಸಿ ಎಂದ ಅಲೋಕ್‌ ಕುಮಾರ್‌

ಬೆಂಗಳೂರು: ಮಂಗಳೂರು ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಆರೋಪಿ ಆಧಾರ ಕಾರ್ಡ್‌ನ್ನು (Aadhar card lock-unlock facility) ದುರ್ಬಳಕೆ ಮಾಡಿಕೊಂಡಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡವರು ಯುಐಡಿಎಐ (UIDAI) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಆಯ್ಕೆಯನ್ನು ಬಳಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಆಧಾರ್ ಕಾರ್ಡ್‌ನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ. ಆಧಾರ್ ಸಂಖ್ಯೆಯನ್ನು ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಆಯ್ಕೆಯನ್ನು ಬಳಸಲು ಸೂಚಿಸಿದೆ. ಮನೆ ಬಾಡಿಗೆ ನೀಡುವಾಗಲೂ ಬಾಡಿಗೆದಾರರ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಮನೆಯ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಟ್ವೀಟ್ ಮೂಲಕ ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಆಧಾರ್ ವಿವರಗಳನ್ನು ಲಾಕ್-ಅನ್ಲಾಕ್ ಮಾಡುವುದು ಹೇಗೆ?
ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ವೆಬ್‌ಸೈಟ್‌ನಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಬೇಕು. ನಿಮ್ಮ ಗುರುತನ್ನು ಪರಿಶೀಲಿಸಿದ ನಂತರ ನಿಮ್ಮ ಆಧಾರ್ ವಿವರಗಳನ್ನು ಲಾಕ್ ಮಾಡುವ ಆಯ್ಕೆ ಇರುತ್ತದೆ. ಹೀಗಾಗಿ ಆಧಾರ್ ಡೇಟಾ ಲಾಕ್ ಆಗಿದ್ದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯಾವುದೇ ಮಾಹಿತಿಯನ್ನು ಪರಿಶೀಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

ಅಂದರೆ ನಮ್ಮ ಆಧಾರ್‌ ಕಾರ್ಡ್‌ ಬಳಸಿ ಇತರರು ಸಿಮ್ ಪಡೆಯುವುದು, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ವಂಚನೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಆದರೆ ಒಮ್ಮೆ ಪ್ರೊಫೈಲ್ ಲಾಕ್ ಆಗಿದ್ದರೆ, ಅದು ಅನ್‌ಲಾಕ್ ಆಗುವವರೆಗೆ ಆಧಾರ್ ವಿವರಗಳನ್ನು ಬಳಸಿಕೊಂಡು ನೀವು ಯಾವುದೇ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮ್ಮ ಆಧಾರ್ ಪ್ರೊಫೈಲ್ ಅನ್ನು ಲಾಕ್ ಮಾಡಲು ನೀವು ಬಯಸಿದರೆ, ಮೊದಲು 16-ಅಂಕಿಯ ವರ್ಚುವಲ್ ಐಡಿ ಸಂಖ್ಯೆಯನ್ನು ರಚಿಸಬೇಕು. ಇದಕ್ಕಾಗಿ SMS ಅಥವಾ UIDAI ವೆಬ್‌ಸೈಟ್ ಬಳಸಬಹುದು. https://resident.uidai.gov.in/bio-lock ಲಿಂಕ್ ಮೂಲಕ ನೀವು ನೇರವಾಗಿ ಪ್ರೊಫೈಲ್ ಲಾಕ್ ವಿಭಾಗಕ್ಕೆ ಹೋಗಬಹುದು. ಅಥವಾ UIDAI ವೆಬ್‌ಸೈಟ್‌ನಲ್ಲಿ ‘ನನ್ನ ಆಧಾರ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.

ದನ್ನೂ ಓದಿ : NRI Aadhaar Card : NRI ಆಧಾರ್ ನೋಂದಾಯಿಸಲು ಅರ್ಹರೇ ? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Aadhaar Card : ಆಧಾರ್ ಕಾರ್ಡ್ ಪಡೆದು 10 ವರ್ಷ ಕಳೆದಿದ್ಯಾ : ಹಾಗಾದ್ರೆ ಈ ತಿದ್ದುಪಡಿ ಮಾಡಿಸಿ

ಇದನ್ನೂ ಓದಿ : Aadhaar Card Photo:ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಬಯಸುವಿರಾ ? ಇಲ್ಲಿದೆ ಸಂಪೂರ್ಣ ಮಾಹಿತಿ

ನಂತರ ‘ಆಧಾರ್ ಸೇವೆಗಳು’ ವಿಭಾಗದ ಅಡಿಯಲ್ಲಿ ‘ಆಧಾರ್ ಲಾಕ್/ಅನ್ಲಾಕ್’ ವಿಭಾಗಕ್ಕೆ ಹೋಗಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ನೋಂದಾಯಿತ ಮೊಬೈಲ್‌ಗೆ ಕಳುಹಿಸಿದ OTP ಅನ್ನು ನಮೂದಿಸಬೇಕು. ನಂತರ ಪರದೆಯ ಮೇಲೆ ‘ಸಕ್ರಿಯಗೊಳಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈ ಹಂತದ ನಂತರ ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಅನ್‌ಲಾಕ್ ಮಾಡಬೇಕಾದ ಸಂದರ್ಭವಿದ್ದರೆ, ಹಿಂದೆ ಪಡೆದ ವರ್ಚುವಲ್ ಐಡಿಯನ್ನು ನಮೂದಿಸಬೇಕು. ನಂತರ ಬರುವ OTP ಹಾಕಬೇಕು. ನೀವು OTP ಅನ್ನು ನಮೂದಿಸಿದ ನಂತರ, ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಅನ್‌ಲಾಕ್ ಮಾಡಲಾಗುತ್ತದೆ.

Aadhar card lock-unlock facility : Don’t misuse your Aadhar card : Use UIDAI facility says Alok Kumar

Comments are closed.