Long Hair Beauty Tips: ನೀಳ ಕೇಶರಾಶಿ ನಿಮ್ಮದಾಗಬೇಕಾ ? ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

(Long Hair Beauty Tips)ನೀಳ ಕೇಶರಾಶಿ ಹೊಂದಿರುವವರು ಮುಂದೆ ಪಾಸ್‌ ಆದರೆ ಸಾಕು ಇಂತ ಕೂದಲು ನಮಗೂ ಬೇಕು ಎಂಬ ಆಸೆ ಎಲ್ಲಾ ಮಹಿಳೆಯರಲ್ಲೂ ಮೂಡುತ್ತದೆ. ಇಂತಹ ದಪ್ಪ ಮತ್ತು ಉದ್ದ ಕೂದಲನ್ನು ನೀವೂ ಕೂಡ ಪಡೆಯಬಹುದು. ದಟ್ಟವಾದ ಕೂದಲು ಪಡೆಯಲು ಈ ಕೆಳಗೆ ಸೂಚಿಸಿರುವ ಮಾಹಿತಿಯನ್ನು ಅನುಸರಿಸಿ. ಇದರ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Long Hair Beauty Tips)ಈರುಳ್ಳಿ ಎಣ್ಣೆ
ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಗುಣಲಕ್ಷಣ ಇರುವುದರಿಂದ ಇದರಿಂದ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಿ ದಟ್ಟ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಈರುಳ್ಳಿ ಎಣ್ಣೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ಈರುಳ್ಳಿ
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಹೆಚ್ಚಿಕೊಂಡ ಈರುಳ್ಳಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿಕೊಂಡು ಕಾಯಿಸಬೇಕು ಅದಕ್ಕೆ ರುಬ್ಬಿಕೊಂಡ ಈರುಳ್ಳಿಯನ್ನು ಹಾಕಿ ಸಣ್ಣ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿಸಿಕೊಳ್ಳಬೇಕು. ಈರುಳ್ಳಿ ಕಂದು ಬಣ್ಣಕ್ಕೆ ಬರುತ್ತಿದ್ದ ಹಾಗೆ ಎಣ್ಣೆಯನ್ನು ಬದಿಯಲ್ಲಿ ತೆಗೆದು ಇಟ್ಟುಕೊಳ್ಳಬೇಕು. ಈ ಎಣ್ಣೆ ತಣ್ಣಗಾದ ನಂತರ ಡಬ್ಬಿಯಲ್ಲಿ ಸೊಸಿಕೊಂಡು ಇಟ್ಟುಕೊಳ್ಳಬೇಕು. ತಲೆ ಸ್ನಾನದ ಹದಿನೈದು ನಿಮಿಷದ ಮುಂಚೆ ಈರುಳ್ಳಿ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಮಸಾಜ್‌ ಮಾಡಬೇಕು. ಹೀಗೆ ವಾರಕ್ಕೆ ಎರಡು ಬಾರಿ ಮಾಡುವುದರಿಂದ ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ಎಣ್ಣೆ
ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲ ಬುಡವನ್ನು ಗಟ್ಟಿ ಮಾಡುವುದರ ಜೊತೆಗೆ ಹೊಳಪನ್ನು ಕಾಪಾಡುತ್ತದೆ. ನೆಲ್ಲಿಕಾಯಿ ಎಣ್ಣೆ ಹೇಗೆ ಮಾಡಬೇಕು ಎಂಬುದರ ಕುರಿತು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ನೆಲ್ಲಿಕಾಯಿ
  • ಕರಿಬೇವು
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಸಣ್ಣದಾಗಿ ಹೆಚ್ಚಿಕೊಂಡ ನೆಲ್ಲಿಕಾಯಿ ಮತ್ತು ಕರಿಬೇವನ್ನು ಮಿಕ್ಸಿ ಜಾರಿಯಲ್ಲಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಅದಕ್ಕೆ ರುಬ್ಬಿಕೊಂಡ ನೆಲ್ಲಿಕಾಯಿ ಮತ್ತು ಕರಿಬೇವನ್ನು ಹಾಕಿ ಕಾಯಿಸಬೇಕು. ಕಂದು ಬಣ್ಣಕ್ಕೆ ತಿರುಗುತ್ತಿದ್ದ ಹಾಗೆ ಎಣ್ಣೆಯನ್ನು ಬದಿಯಲ್ಲಿ ತೆಗೆದು ಇಟ್ಟುಕೊಳ್ಳಬೇಕು. ಎಣ್ಣೆ ತಣ್ಣಗಾಗುತ್ತಿದ್ದ ಹಾಗೆ ಡಬ್ಬದಲ್ಲಿ ಸೊಸಿಕೊಂಡು ಇಟ್ಟುಕೊಳ್ಳಬೇಕು. ತಲೆಸ್ನಾನದ ಇಪ್ಪತ್ತು ನಿಮಿಷದ ಮುಂಚೆ ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್‌ ಮಾಡಿಕೊಳ್ಳಬೇಕು ನಂತರ ತಲೆಸ್ನಾನ ಮಾಡಬೇಕು.ಹೀಗೆ ಪ್ರತಿಬಾರಿ ತಲೆಸ್ನಾನ ಮಾಡುವ ಮುನ್ನ ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಇದನ್ನೂ ಓದಿ:Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ನೆಲ್ಲಿಕಾಯಿ ಜ್ಯೂಸ್‌
ನೆಲ್ಲಿಕಾಯಿ ಜ್ಯೂಸ್‌ ಕುಡಿಯುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಿ ಕೂದಲು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಕಪ್ಪಾಗಿ ಬೆಳೆಯುವಂತೆ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್‌ ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು:

  • ನೆಲ್ಲಿಕಾಯಿ
  • ಕರಿಬೇವು
  • ಜೇನುತುಪ್ಪ

ಮಾಡುವ ವಿಧಾನ
ಒಂದು ಲೋಟದಲ್ಲಿ ನೀರನ್ನು ಹಾಕಿಕೊಂಡು ಕರಿಬೇವು ಮತ್ತು ತುಂಡರಿಸಿದ ನೆಲ್ಲಿಕಾಯಿ ಹಾಕಿ ಇಪ್ಪತ್ತು ನಿಮಿಷ ನೆನಸಿಡಬೇಕು. ನಂತರ ಕರಿಬೇವು ಮತ್ತು ನೆಲ್ಲಿಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್‌ ಮಾಡಬೇಕು. ಇದನ್ನು ಒಂದು ಲೋಟದಲ್ಲಿ ಸೊಸಿಕೊಂಡು ಜೇನುತುಪ್ಪ ಬೆರೆಸಿದರೆ ನೆಲ್ಲಿಕಾಯಿ ಜ್ಯೂಸ್‌ ರೆಡಿ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಆರೋಗ್ಯಕ್ಕೂ ಉತ್ತಮ ಜೊತೆಗೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ

Do you want long hair? Then follow these tips

Comments are closed.