ಸೋಮವಾರ, ಏಪ್ರಿಲ್ 28, 2025
Homebusinessಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ

ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ

- Advertisement -

Anna bhagya yojana Fund Transfer: ಕರ್ನಾಟಕ ಸರಕಾರ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಡಿ ಕೋಟ್ಯಾಂತರ ಮಂದಿ ಲಾಭ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಐದು ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದು, ರಾಜ್ಯ ಸರಕಾರ ತನ್ನ ಗ್ಯಾರಂಟಿ ಘೋಷಣೆಯಡಿ ಅಕ್ಕಿಯ ಬದಲು ಹಣವನ್ನು ವರ್ಗಾವಣೆ ಮಾಡುತ್ತಿದೆ. ಇದೀಗ ಮಾರ್ಚ್‌ ತಿಂಗಳ ಹಣವನ್ನು ವರ್ಗಾಯಿಸಲಾಗಿದೆ.

Anna bhagya yojana Fund Transfer Check whether your funds have been deposited you Bank Account 
Image Credit to Original Source

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗ್ಯಾರಂಟಿ ಘೋಷಣೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಐದು ಕೆಜಿ ಅಕ್ಕಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಅಕ್ಕಿಯ ಕೊರತೆಯ ಹಿನ್ನೆಲೆಯಲ್ಲಿ ಅಕ್ಕಿಯ ಬದಲು ಪ್ರತೀ ಕೆಜಿಗೆ ೨೪ ರೂಪಾಯಿಯನ್ನು ನೀಡಲಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದಲೂ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತಿದೆ.

ಇದೀಗ ಮಾರ್ಚ್‌ ತಿಂಗಳ ಅನ್ನಭಾಗ್ಯ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ. ಹೀಗಾಗಿ ಅನ್ನಭಾಗ್ಯ ಯೋಜನೆಯ ಫಲಾನುಭವಿ ಗಳಿಗೆ ಅಕ್ಕಿಯ ಜೊತೆಗೆ ಹಣವೂ ಸಿಗುತ್ತಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಉ ಉಪ ನಿರ್ದೇಶಕ ಸಿದ್ದರಾಮ ಮರಿಹಾಳ ತಿಳಿಸಿದ್ದಾರೆ.

ಇದನ್ನೂ ಓದಿ : ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಈ ಅಂಶಗಳನ್ನು ನೀವು ತಿಳಿದಿರಲೇ ಬೇಕು

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಹಣವನ್ನು ಪಡೆದುಕೊಂಡಿದ್ದ ಕೆಲವರನ್ನು ಅನ್ನಭಾಗ್ಯ ಪಟ್ಟಿಯಿಂದ ಕೈಬಿಡಲಾಗಿದೆ. ಅನರ್ಹ ರಾಗಿದ್ದರೂ ಕೂಡ ಬಿಪಿಎಲ್‌ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಕೈಗೊಂಡಿದೆ. ಈಗಾಗಲೇ ಹಲವರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್‌ ಮಾಡಿದೆ.

Anna bhagya yojana Fund Transfer Check whether your funds have been deposited you Bank Account 
Image Credit to Original Source

ಇದನ್ನೂ ಓದಿ : ಮಹಿಳಾ ದಿನದಂದು ಮಹಿಳೆಯರಿಗೆ ಭರ್ಜರಿ ಕೊಡುಗೆ : 2025 ರವರೆಗೆ LPG ಸಬ್ಸಿಡಿ 300ರೂ.ಗೆ ಹೆಚ್ಚಳ

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿಯನ್ನು ನೀಡುವ ಮೂಲಕ ಅನರ್ಹರ ಪಟ್ಟಿಯನ್ನು ಪಡೆದುಕೊಳ್ಳಬಹುದು. ಅಷ್ಟಕ್ಕೂ ನೀವು ಮಾಡಬೇಕಾಗಿರುವುದು ಇಷ್ಟೆ. ಆಹಾರ ಮತ್ತು ನಾಗರೀಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ ಎಲಿಜಿಬಲ್‌ ರೇಷನ್‌ ಕಾರ್ಡ್‌ ಲಿಸ್ಟ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ನಂತರ ಈ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ : 10ನೇ ಉತ್ತೀರ್ಣರಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, ರೂ 55000 ರೂ. ವೇತನ, 98,083 ಹುದ್ದೆ ಭರ್ತಿಗೆ ಅರ್ಜಿ

ನಂತರದಲ್ಲಿ ನಿಮ್ಮ ಗ್ರಾಮ, ತಾಲೂಕು, ಜಿಲ್ಲೆ ಸೇರಿದಂತೆ ಅಲ್ಲಿ ಕೇಳಿರುವ ಮಾಹಿತಿಯನ್ನು ಒದಗಿಸಬೇಕು. ನಂತರದಲ್ಲಿ ನಿಮಗೆ ರದ್ದಾಗಿರುವ ಕಾರ್ಡುಗಳ ಪಟ್ಟಿ ಲಭ್ಯವಾಗಲಿದೆ. ಒಂದೊಮ್ಮೆ ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಿದ್ದರೆ, ಯಾವ ಕಾರಣಕ್ಕೆ ರದ್ದಾಗಿದೆ ಅನ್ನೋ ಮಾಹಿತಿಯನ್ನು ಪಡೆದುಕೊಳ್ಳಿ.

Anna bhagya yojana Fund Transfer: Check whether your funds have been deposited you Bank Account 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular