ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಬ್ ಪಂತ್ ನಾಯಕ : ಐಪಿಎಲ್‌ 2024ಕ್ಕೆ ಕೋಚ್‌ ರಿಕಿ ಪಾಂಟಿಂಗ್ ಭರ್ಜರಿ ಫ್ಲ್ಯಾನ್‌

IPL 2024 Rishabh Pant : ಡೆಲ್ಲಿ ಕ್ಯಾಪಿಟಲ್ಸ್‌  (Delhi Capitals) ತಂಡದ ಅಭಿಮಾನಿಗಳಿಗೆ ಭರ್ಜರಿ ಖಷಿಯ ಸುದ್ದಿಯೊಂದು ಹೊರಬಿದ್ದಿದೆ. ರಸ್ತೆ ಅಪಘಾತಕ್ಕೆ ಒಳಗಾಗಿದ್ದ ರಿಷಬ್‌ ಪಂತ್‌ ಐಪಿಎಲ್‌ಗೆ (Indian Premier League) ಮರಳುವುದು ಫಿಕ್ಸ್‌ ಆಗಿದೆ.

IPL 2024 Rishabh Pant : ಡೆಲ್ಲಿ ಕ್ಯಾಪಿಟಲ್ಸ್‌  (Delhi Capitals) ತಂಡದ ಅಭಿಮಾನಿಗಳಿಗೆ ಭರ್ಜರಿ ಖಷಿಯ ಸುದ್ದಿಯೊಂದು ಹೊರಬಿದ್ದಿದೆ. ರಸ್ತೆ ಅಪಘಾತಕ್ಕೆ ಒಳಗಾಗಿದ್ದ ರಿಷಬ್‌ ಪಂತ್‌ ಐಪಿಎಲ್‌ಗೆ (Indian Premier League) ಮರಳುವುದು ಫಿಕ್ಸ್‌ ಆಗಿದೆ. ಅದ್ರಲ್ಲೂ ರಿಷಬ್‌ ಪಂತ್‌ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕನಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ಈ ಕುರಿತು ಡಿಸಿ ಕೋಚ್‌ ರಿಕಿ ಪಾಂಟಿಂಗ್‌ ಸುಳಿವು ಕೊಟ್ಟಿದ್ದಾರೆ.

Rishabh Pant is the captain of Delhi Capitals team Coach Ricky Ponting is big plan for IPL 2024
Image Credit to Original Source

ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತದ ನಂತರ, ರಿಷಬ್ ಪಂತ್ ಅವರು ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು. ಕಳೆದ ಬಾರಿ ಐಪಿಎಲ್‌ ನಲ್ಲಿಯೂ ಪಂತ್‌ ಆಡಿರಲಿಲ್ಲ. ಆದರೆ ಇದೀಗ ಪಂತ್‌ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಹಾರ್ದಿಕ್ ಪಾಂಡ್ಯ ಅವರ ಜೊತೆಗೆ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಪಂತ್‌ ಈಗಾಗಲೇ ಸಂಪೂರ್ಣವಾಗಿ ಫಿಟ್‌ ಆಗಿದ್ದು, ಅವರು ಕ್ರಿಕೆಟ್‌ಗೆ ಮರಳುವುದು ಫಿಕ್ಸ್‌ ಆಗಿದೆ.ದಿ ಐಸಿಸಿ ರಿವ್ಯೂನಲ್ಲಿ ಸಂಜನಾ ಗಣೇಶನ್ ಅವರ ಜೊತೆಗೆ ನಡೆಸಿದ ಸಂದರ್ಶನದಲ್ಲಿ ರಿಕಿ ಪಾಂಟಿಂಗ್ ಅವರು ಪಂತ್‌ ಐಪಿಎಲ್‌ಗೆ ಮರಳುವುದನ್ನು ಖಚಿತ ಪಡಿಸಿದ್ದಾರೆ. ಅದ್ರಲ್ಲೂ ರಿಷಬ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ : IPL 2024 : ಚೆನ್ನೈ ಸೂಪರ್‌ ಕಿಂಗ್ಸ್ ಶಿಬಿರ ಸೇರಿದ MS ಧೋನಿ

ರಿಷಬ್‌ ಪಂತ್‌ ಚೇತರಿಸಿಕೊಂಡಿರುವ ಕುರಿತು ರಿಕಿ ಪಾಂಟಿಂಗ್‌ ಸಾಕಷ್ಟು ಖುಷಿಯನ್ನು ಹೊಂದಿದ್ದಾರೆ. ಪಂತ್‌ ಈಗಾಗಲೇ ಅಭ್ಯಾಸ ಪಂದ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಎರಡು ವಾರಗಳಿಂದಲೂ ಅವರು ಅಭ್ಯಾಸ ನಡೆಸುತ್ತಿದ್ದಾರೆ.ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಪಂದ್ಯವನ್ನು ಆಡಲಿದೆ.

Rishabh Pant is the captain of Delhi Capitals team Coach Ricky Ponting is big plan for IPL 2024
Image Credit to Original Source

ರಿಷಬ್‌ ಪಂತ್‌ ಐಪಿಎಲ್‌ಗೆ ಮರಳಿದ್ರೂ ಕೂಡ ಕೇವಲ ಬ್ಯಾಟ್ಸ್‌ಮನ್‌ ಆಗಿ ಅದ್ರಲ್ಲೂ ಸ್ಪೋಟಕ ಆಟಗಾರನಾಗಿ ಕಾಣಿಸಿಕೊಳ್ಳಬಹುದು. ಆದರೆ ಪಂತ್‌ ವಿಕೆಟ್‌ ಕೀಪಿಂಗ್‌ ಮಾಡುವುದು ಇನ್ನೂ ಖಚಿತವಾಗಿಲ್ಲ. ರಿಷಬ್‌ ಪಂತ್‌ ಅವರ ದೇಹಸ್ಥಿತಿಗೆ ಹೊಂದಿಕೊಂಡು ಅವರಿಂದ ಕೀಪಿಂಗ್‌ ಮಾಡಿಸುವ ಕುರಿತು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿರ್ಧಾರ ಮಾಡಿಕೊಂಡತಿದೆ.

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಗುಡ್‌ನ್ಯೂಸ್‌ : ಎನ್‌ಸಿಎನಲ್ಲಿ ತರಬೇತಿ ಆರಂಭಿಸಿದ ಕೆಎಲ್‌ ರಾಹುಲ್‌

ಅಪಘಾತದ ನಂತರ ರಿಷಬ್‌ ಪಂತ್‌ ಯಾವುದೇ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳಲ್ಲಿ ಆಡಿಲ್ಲ. ಹೀಗಾಗಿ ರಿಷಬ್‌ ಪಂತ್‌ ಮೈದಾನಕ್ಕೆ ಇಳಿಯುವುದನ್ನು ನೋಡಲು ಅಭಿಮಾನಿಗಳು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖುದ್ದು ಕಾತರವಾಗಿದೆ. ಅದ್ರಲ್ಲೂ ಆರಂಭಿಕ ಪಂದ್ಯದ ಮೇಲೆ ಡೆಲ್ಲಿ ಹೆಚ್ಚಿನ ಗಮನ ಹರಿಸಿದೆ.

ಇದನ್ನೂ ಓದಿ : ಐಪಿಎಲ್ 2024ರಲ್ಲಿ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ : ತಂಡಕ್ಕೆ ಆಹ್ವಾನಿಸಿದ ವಿರಾಟ್‌ ಕೊಹ್ಲಿ

Rishabh Pant is the captain of Delhi Capitals team: Coach Ricky Ponting is big plan for IPL 2024

Comments are closed.