ಕಾಟನ್‌ ಕ್ಯಾಂಡಿ ಬ್ಯಾನ್‌ : ಕರ್ನಾಟಕ ಸರಕಾರದ ಮಹತ್ವದ ಆದೇಶ

Cotton candy ban: ಬೆಂಗಳೂರು : ತಮಿಳುನಾಡು, ಪುದುಚೇರಿ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿಯೂ ಕಾಟನ್‌ ಕ್ಯಾಂಡಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆರೋಗ್ಯಕ್ಕೆ ಹಾನಿಕಾರಕ ಅಂಶ ಕಾಟನ್‌ ಕ್ಯಾಂಡಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರಕಾರ ಮಹತ್ವದ ಆದೇಶ ಹೊರಡಿಸಿದೆ.

Cotton candy ban: ಬೆಂಗಳೂರು : ತಮಿಳುನಾಡು, ಪುದುಚೇರಿ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿಯೂ ಕಾಟನ್‌ ಕ್ಯಾಂಡಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆರೋಗ್ಯಕ್ಕೆ ಹಾನಿಕಾರಕ ಅಂಶ ಕಾಟನ್‌ ಕ್ಯಾಂಡಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಕೃತಕ ಬಣ್ಣ ಹಾಗೂ ಹಾನಿಕಾರಕ ರಾಸಾಯನಿಕ ಬಳಸಿರುವುದು ಪತ್ತೆಯಾಗಿತ್ತು ಈ ಹಿನ್ನೆಲೆಯಲ್ಲಿ ಕಾಟನ್‌ ಕ್ಯಾಂಡಿಗೆ ನಿಷೇಧ ಹೇರಲಾಗಿದೆ.

Cotton candy ban An important order of the Karnataka government
Image Credit to Original Source

ತಮಿಳುನಾಡು ಸರಕಾರ ಈಗಾಗಲೇ ಕಾಟನ್‌ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ನು ಮಾರಾಟ ಮಾಡದಂತೆ ನಿಷೇಧ ಹೇರಿದೆ. ಕರ್ನಾಟಕ ರಾಜ್ಯದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗವು, ಪರಿಶೀಲನೆ ನಡೆಸಿದ ವೇಳೆಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿತ್ತು. ಒಟ್ಟು 171 ಕಡೆಗಳಲ್ಲಿ ಗೋಬಿ ಮಂಚೂರಿಯ ಮಾದರಿಯನ್ನು ಸಂಗ್ರಹಿಸಲಾಗಿದ್ರೆ, ಈ ಪೈಕಿ 107 ಕಡೆಗಳ ಮಾದರಿಯಲ್ಲಿ ಹಾನಿಕಾರಕ ಬಣ್ಣ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ

ಇದೇ ರೀತಿಯಲ್ಲಿ ಕಾಟನ್‌ ಕ್ಯಾಂಡಿಯ ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ. ರೋಡಮೈನ್ ಬೀ, ಟಾಟ್ರಾಸೈನ್ ಹಾನಿಕಾರಕ ಅಂಶ ಇರುವುದು ದೃಢಪಟ್ಟಿದೆ. ರೋಡಮೈನ್ ಬೀ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಕಾಟನ್‌ ಕ್ಯಾಂಡಿಯಲ್ಲಿ ಪಿಂಕ್‌ ಬಣ್ಣ ಬರಬೇಕು ಅನ್ನೋ ಕಾರಣದಿಂದಲೇ ರೋಡಮೈನ್ ಬೀ ಬಳಕೆ ಮಾಡುತ್ತಾರೆ.

Cotton candy ban An important order of the Karnataka government
Image Credit to Original Source

ಆದರೆ ಇನ್ನುಂದೆ ಯಾವುದೇ ಕಾರಣಕ್ಕೂ ಕಾಟನ್‌ ಕ್ಯಾಂಡಿಯನ್ನು ಮಾರಾಟ ಮಾಡುವಂತಿಲ್ಲ. ಈ ಕುರಿತು ಆರೋಗ್ಯ ಇಲಾಖೆ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಿದೆ. ಸರಕಾರದ ಆದೇಶವನ್ನು ಪಾಲನೆ ಮಾಡದೇ ಇರುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಕಾಟನ್‌ ಕ್ಯಾಂಡಿ ಮಾತ್ರವಲ್ಲದೇ ಗೋಬಿ ಮಂಚೂರಿಯಲ್ಲಿಯೂ ಹಾನಿಕಾರಕ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ : ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಈ ಅಂಶಗಳನ್ನು ನೀವು ತಿಳಿದಿರಲೇ ಬೇಕು

ಗೋಬಿ ಪಂಚೂರಿಯನ್ನು ಆಹಾರವಾಗಿ ಸೇವಿಸುತ್ತಾರೆ. ಆದರೆ ಗೋಬಿ ಪಂಚೂರಿಯಲ್ಲಿ ಹಾನಿಕಾರಕ ಕಲರ್‌ ಬಳಕೆ ಮಾಡುತ್ತಾರೆ. ಗೋಬಿ ಮಂಚೂರಿ ಯಲ್ಲಿ ಬಳಕೆ ಮಾಡುವ ಬಣ್ಣದಲ್ಲಿ ಟಾಟ್ರಾಸೈನ್ ಒಳಗೊಂಡಿದೆ. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಬಣ್ಣ ಬಳಕೆ ಮಾಡದೇ ಗೋಬಿ ಮಂಚೂರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಸರ್ವರೋಗಗಳಿಗೂ ರಾಮಬಾಣ ಬೂದುಕುಂಬಳಕಾಯಿ – ಈ ರೀತಿ ಸೇವಿಸದ್ರೆ ಕ್ಯಾನ್ಸರ್ ಬರೋದೇ ಇಲ್ಲ

Cotton candy ban: An important order of the Karnataka government

Comments are closed.