7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ದಿನದಿಂದ ಸರಕಾರಿ ನೌಕರರ ವೇತನ ಹೆಚ್ಚಳ

ದೇಶದಾದ್ಯಂತ ಇರುವ ಲಕ್ಷಾಂತರ ಕೇಂದ್ರ ಸರಕಾರಿ ನೌಕರರ (Central Government Employees) ಅದೃಷ್ಟ ಮತ್ತೊಮ್ಮೆ ಖುಲಾಯಿಸಲಿದೆ. ಈ ಹಿಂದೆ ನೌಕರರ ಡಿಎ (DA) ಮತ್ತು ಡಿಆರ್‌ (DR) ಹೆಚ್ಚಿಸಿದ ಸರಕಾರ, ಇದೀಗ ಉದ್ಯೋಗಿಗಳ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ.

ನವದೆಹಲಿ : ದೇಶದಾದ್ಯಂತ ಇರುವ ಲಕ್ಷಾಂತರ ಕೇಂದ್ರ ಸರಕಾರಿ ನೌಕರರ (Central Government Employees) ಅದೃಷ್ಟ ಮತ್ತೊಮ್ಮೆ ಖುಲಾಯಿಸಲಿದೆ. ಈ ಹಿಂದೆ ನೌಕರರ ಡಿಎ (DA) ಮತ್ತು ಡಿಆರ್‌ (DR) ಹೆಚ್ಚಿಸಿದ ಸರಕಾರ, ಇದೀಗ ಉದ್ಯೋಗಿಗಳ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಅದ್ರಲ್ಲೂ 7ನೇ ವೇತನ ಆಯೋಗದ (7th Pay Commission News) ಶಿಫಾರಸ್ಸಿನಂತೆ ವೇತನ ಹೆಚ್ಚಳವಾಗಲಿದೆ ಎಂಬ ಮಾತು ಕೇಳಿಬಂದಿದೆ.

ಕೇಂದ್ರ ಸರಕಾರ ಲೋಕಸಭಾ ಚುನಾವಣೆಯೂ (Lok Sabha Elections) ಮೊದಲೇ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಈ ಕುರಿತು ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಕೇಂದ್ರ ಸರಕಾರಿ ನೌಕರರು ಕೂಡ ಕೇಂದ್ರ ಸರಕಾರವನ್ನು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿದ್ದಾರೆ.

ಕೇಂದ್ರ ಸರಕಾರ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನವನ್ನು ಹೆಚ್ಚಳ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡ್ರೆ ಉದ್ಯೋಗಿಗಳಿಗೆ ದೊಡ್ಡ ಕೊಡುಗೆ ಎನಿಸಲಿದೆ. ಸರಕಾರ ಡಿಎ ಹೆಚ್ಚಳವನ್ನು ಇದೇ ತಿಂಗಳು ಪ್ರಕಟಿಸುವ ಸಾಧ್ಯತೆಯಿದೆ. ತಿಂಗಳ ಮಧ್ಯಭಾಗದಲ್ಲಿ ಗಣೇಶ ಚೌತಿ ಹಬ್ಬದ ಸಂದರ್ಭದಲ್ಲಿ ಹಬ್ಬದ ಗಿಫ್ಟ್‌ ಆಗಿ ಕೇಂದ್ರ ಸರಕಾರ ನೀಡಬಹುದು. ಇಲ್ಲಾ ನವರಾತ್ರಿಯ ಸಂದರ್ಭದಲ್ಲಿಯೂ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

As per the recommendation of the 7th Pay Commission, the salary hike of government employees from this day
Image Credit To Original Source

ಸದ್ಯ ಕೇಂದ್ರ ಸರಕಾರ ಡಿಎ ಹೆಚ್ಚಳ ಘೋಷಣೆಯ ಸುದ್ದಿ ಎಲ್ಲೆಡೆಯಲ್ಲಿಯೂ ಹರಿದಾಡುತ್ತಿದೆ. ಕೇಂದ್ರ ಸರಕಾರ ಒಂದೊಮ್ಮೆ ಡಿಎ ಹೆಚ್ಚಳ ಮಾಡಿದ್ರೆ ಶೇ. 4 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈ ವರ್ಷದ ಜನವರಿ ತಿಂಗಳಿನಿಂದ ನೌಕರರಿಗೆ ಶೇ 42ರಷ್ಟು ಡಿಎ ಹೆಚ್ಚಳ ದೊರೆಯುತ್ತಿದೆ. 4ರಷ್ಟು ಏರಿಕೆಯಾದ ನಂತರ ಶೇ.46ಕ್ಕೆ ಏರಿಕೆಯಾಗಲಿದೆ.

ವೇತನ ಹೆಚ್ಚಳ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ

ಜುಲೈ ತಿಂಗಳಲ್ಲಿ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕ ಮಾಹಿತಿಯ ಪ್ರಕಾರ, ಜೂನ್‌ನಲ್ಲಿ ಡಿಎ ಶೇಕಡಾ 46.24 ತಲುಪಿದೆ. ಆದರೆ ಸರಕಾರವು ಅದರ ದಶಮಾಂಶವನ್ನು ಸೇರಿಸುವುದಿಲ್ಲ. ಹಾಗಾಗಿಯೇ ಶೇ.46ಕ್ಕೆ ಏರಿಕೆಯಾಗಿದೆ. ಮಾಧ್ಯಮಗಳ ವರದಿಯನ್ನು ನಂಬುವುದಾದರೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಬಹುದು. ಇದನ್ನೂ ಓದಿ :  ಮಹಿಳೆಯರಿಗೆ ಬಿಗ್‌ ಶಾಕ್‌ ಕೊಟ್ಟ ಸರಕಾರ : ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯಲ್ಲಿ ಬಾರೀ ಬದಲಾವಣೆ

As per the recommendation of the 7th Pay Commission, the salary hike of government employees from this day
Image Credit To Original Source

ಅಧಿಕೃತ ಘೋಷಣೆ ಇಲ್ಲ

ಅದೇ ವೇಳೆಗೆ ಜನವರಿಯಿಂದ ಜೂನ್ ವರೆಗೆ ಎಐಸಿಪಿಐ ಸೂಚ್ಯಂಕ ಆಧಾರದ ಮೇಲೆ ಬಂದಿರುವ ಮಾಹಿತಿ ಆಧರಿಸಿ ಈ ಬಾರಿಯೂ ಉದ್ಯೋಗಿಗಳ ಡಿಎಯಲ್ಲಿ ಶೇ.4ರಷ್ಟು ಹೆಚ್ಚಳ ಖಚಿತ ಎಂದು ಪರಿಗಣಿಸಲಾಗಿದೆ. ಆದರೆ, ಅದರ ಅಧಿಕೃತ ಘೋಷಣೆಯನ್ನು ಸರಕಾರ ಮಾಡಿಲ್ಲ. ಆದರೆ ಶೀಘ್ರದಲ್ಲೇ ಡಿಎ ಹೆಚ್ಚಳಕ್ಕೆ ಅನುಮೋದನೆ ದೊರೆಯಬಹುದು.

ಇದನ್ನೂ ಓದಿ : ಸಣ್ಣಪುಟ್ಟ ಕೆಲಸಕ್ಕೂ ಬ್ಯಾಂಕಿಗೆ ಅಲೆಯೋ ಚಿಂತೆಯಿಲ್ಲ : ಎಸ್‌ಬಿಐ ಪರಿಚಯಿಸಿದೆ ವಾಟ್ಸಾಪ್‌ ಬ್ಯಾಂಕಿಂಗ್‌

ಸಂಬಳದಲ್ಲಿ ಎಷ್ಟು ಹೆಚ್ಚಳ ಸಾಧ್ಯತೆ ಇದೆ

ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಬಹುದು. ಅದರ ನಂತರ ಉದ್ಯೋಗಿಗಳು ಸಾಕಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ನೌಕರರ ಮೂಲ ವೇತನ 18,000 ರೂ.ಗಳಾಗಿದ್ದರೆ, 46 ರಷ್ಟು ತುಟ್ಟಿಭತ್ಯೆಯ ನಂತರ, ಪ್ರತಿ ತಿಂಗಳು 8280 ರೂ.ಗಳಷ್ಟು ವೇತನವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಪ್ರಮಾಣವು ಬೂಸ್ಟರ್ ಡೋಸ್‌ಗಿಂತ ಕಡಿಮೆಯಿಲ್ಲ.

As per the recommendation of the 7th Pay Commission, the salary hike of government employees from this day

Comments are closed.