ಸಣ್ಣಪುಟ್ಟ ಕೆಲಸಕ್ಕೂ ಬ್ಯಾಂಕಿಗೆ ಅಲೆಯೋ ಚಿಂತೆಯಿಲ್ಲ : ಎಸ್‌ಬಿಐ ಪರಿಚಯಿಸಿದೆ ವಾಟ್ಸಾಪ್‌ ಬ್ಯಾಂಕಿಂಗ್‌

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಕೂಡ ವಾಟ್ಸಾಪ್‌ ಬಳಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಸ್‌ಬಿಐ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಇನ್ನಷ್ಟು ಸುಲಭವಾಗಲಿ ಅನ್ನೋ ಕಾರಣಕ್ಕೆ ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್‌ (SBI WhatsApp Banking Service) ಸೇವೆಯನ್ನು ಒದಗಿಸಿದೆ.

ನವದೆಹಲಿ : ಭಾರತ ಸರಕಾರಿ ಸ್ವಾಮ್ಯದ ಅಗ್ರಮಾನ್ಯ ಬ್ಯಾಂಕ್‌ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ( State Bank Of india) ತಮ್ಮ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಹಲವು ಸೇವೆಗಳನ್ನು ಒದಗಿಸಿದೆ. ಇನ್ಮುಂದೆ ಎಸ್‌ಬಿಐ ಗ್ರಾಹಕರು ಸಣ್ಣಪುಟ್ಟ ವ್ಯವಹಾರಕ್ಕೂ ಬ್ಯಾಂಕ್‌ ಶಾಖೆಗೆ ಅಲೆಯೂ ಚಿಂತೆಯಿಲ್ಲ. ಗ್ರಾಹಕರ ಅನುಕೂಲಕ್ಕಾಗಿಯೇ ಎಸ್‌ಬಿಐ ವಾಟ್ಸಪ್‌ (SBI WhatsApp Banking Service) ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಿದೆ.

ಎಸ್‌ಬಿಐ ಈಗಾಗಲೇ ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಸ್‌ಎಂಎಸ್‌ ಬ್ಯಾಂಕಿಂಗ್‌ ಸೇವೆಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೇ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಇಲ್ಲದೆಯೂ ಎಟಿಎಂನಲ್ಲಿ ಎಸ್‌ಬಿಐ ಗ್ರಾಹಕರು ಯೋನೋ ಆಪ್‌ ಬಳಸಿ ಹಣವನ್ನು ಪಡೆಯಬಹುದಾಗಿದೆ. ಅಲ್ಲದೇ ಗ್ರಾಹಕರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿಯೂ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

Even for small work, the bank does not have to worry: SBI has introduced WhatsApp banking
Image Credit to Original Source

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಕೂಡ ವಾಟ್ಸಾಪ್‌ ಬಳಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಸ್‌ಬಿಐ ಗ್ರಾಹಕರಿಗೆ ಬ್ಯಾಂಕಿಂಗ್‌ ಸೇವೆ ಇನ್ನಷ್ಟು ಸುಲಭವಾಗಲಿ ಅನ್ನೋ ಕಾರಣಕ್ಕೆ ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್‌ (SBI WhatsApp Banking Service) ಸೇವೆಯನ್ನು ಒದಗಿಸಿದೆ. ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗದಿರುವುದಕ್ಕೆ ಇದೇ ಕಾರಣ ! ಹಾಗಾಗಿ ಈ ಕೆಲಸವನ್ನು ಇಂದೇ ಮಾಡಿ

ಅತ್ಯಂತ ಸುಲಭವಾಗಿರುವ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಗ್ರಾಹಕರು ತಮ್ಮ ಮೊಬೈಲ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಾಟ್ಸಪ್‌ (whatsapp) ಮೂಲಕ ಬ್ಯಾಂಕಿಂಗ್ ಸೇವೆಗಳನ್ನು (Banking Service ) ಪಡೆಯಲು ಸಾಧ್ಯವಾಗುತ್ತದೆ. ಈ ಸೇವೆಯಿಂದ ಗ್ರಾಹಕರು ಏನೆಲ್ಲಾ ಮಾಹಿತಿಯನ್ನು ಪಡೆಯಬಹುದು ? ಹೀಗೆ ಬಳಸುವುದು ? ಏನೆಲ್ಲಾ ಪ್ರಯೋಜನ ನೀಡುವುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ. ಇದನ್ನೂ ಓದಿ : ನಿಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಈ ಖಾತೆಯಲ್ಲಿ ಸಣ್ಣ ಹೂಡಿಕೆ ಮಾಡಿ, 67 ಲಕ್ಷ ರೂ. ಪಡೆಯಿರಿ

ಎಸ್‌ಬಿಐನ ವಾಟ್ಸಪ್‌ ಬ್ಯಾಂಕಿಂಗ್‌ನಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ ?

 • ಖಾತೆ ಬಾಕಿ
 • ಮಿನಿ ಹೇಳಿಕೆ (ಕಳೆದ 5 ವಹಿವಾಟುಗಳ ಮಾಹಿತಿ)
 • ಪಿಂಚಣಿ ಚೀಟಿ
 • ಸಾಲದ ಮಾಹಿತಿ ಮತ್ತು ಇತರ ಹಲವು SBI ಬ್ಯಾಂಕಿಂಗ್ ಸೇವೆಗಳು ವಾಟ್ಸಪ್‌ನಲ್ಲಿ ಲಭ್ಯವಿದೆ.
 • ಠೇವಣಿ ಮಾಹಿತಿ
 • ಎನ್‌ಆರ್‌ಐ ಸೇವೆ
 • ಡೆಬಿಟ್ ಕಾರ್ಡ್ ಬಳಕೆಯ ವಿವರಗಳು
 • ಅಪ್ಲಿಕೇಶನ್‌ನಲ್ಲಿ ಎಟಿಎಂ ಮತ್ತು ಶಾಖೆಯನ್ನು ಹುಡುಕಲು ಸಾಧ್ಯವಾಗುತ್ತದೆ

  Even for small work, the bank does not have to worry: SBI has introduced WhatsApp banking
  Image Credit to Original Source

ಎಸ್‌ಬಿಐ ವಾಟ್ಸಪ್‌ ಬ್ಯಾಂಕಿಂಗ್ ಸೇವೆಗೆ ನೋಂದಾವಣೆ ಹೇಗೆ ?

 • ಎಸ್‌ಬಿಐ ವಾಟ್ಸಪ್‌ ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕ್ ಖಾತೆಯನ್ನು ನೋಂದಾಯಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WAREG A/C ಸಂಖ್ಯೆ (917208933148) ಗೆ ಎಸ್‌ಎಮ್‌ಎಸ್‌ ಕಳುಹಿಸಬೇಕು.
 • ನೋಂದಣಿ ಪೂರ್ಣಗೊಂಡ ನಂತರ, ನೀವು ಎಸ್‌ಬಿಐನ ವಾಟ್ಸಪ್‌ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.
 • ಈಗ ವಾಟ್ಸಪ್‌ನಲ್ಲಿ ಹಾಯ್ ಎಂದು ಕಳುಹಿಸಿ (+909022690226). ಈ ಪಾಪ್ ಅಪ್ ಸಂದೇಶವು ತೆರೆಯುತ್ತದೆ.
 • ಇದರ ನಂತರ ನಿಮಗೆ ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್, ಡಿ-ರಿಜಿಸ್ಟರ್ ವಾಟ್ಸಪ್‌ ಬ್ಯಾಂಕಿಂಗ್ ಆಯ್ಕೆಯನ್ನು ನೀಡಲಾಗುತ್ತದೆ.
 • ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಟೈಪ್ 1 ಮತ್ತು ಮಿನಿ ಸ್ಟೇಟ್‌ಮೆಂಟ್ ಟೈಪ್ 2. ಆಗಿರುತ್ತದೆ.

Even for small work, the bank does not have to worry: SBI has introduced WhatsApp banking

Comments are closed.