Google Pay Users : ಗೂಗಲ್‌ ಪೇ ಬಳಕೆದಾರರ ಗಮನಕ್ಕೆ : ಯುಪಿಐ ಆಕ್ಟಿವ್‌ ಮಾಡಲು ಆಧಾರ್‌ ಬಳಸಬಹುದೇ ?

ನವದೆಹಲಿ : (Google Pay Users) ಕಳೆದ ಕೆಲ ವರ್ಷಗಳಿಂದಲೂ ಜನರು ಆನ್‌ಲೈನ್‌ ವ್ಯವಹಾರದ ಮೊರೆ ಹೋಗುತ್ತಿದ್ದಾರೆ. ಅದ್ರಲ್ಲೂ ಮೊಬೈಲ್‌ ಮೂಲಕ ವ್ಯವಹಾರ ನಡೆಸಲು ಗೂಗಪ್‌ ಪೇ, ಪೋನ್‌ಪೇ ಬಳಸಲಾಗುತ್ತಿದೆ. ಆದರೆ ಇದೀಗ ಯುಪಿಐ ಆಕ್ಟಿವ್‌ ಮಾಡಲು ಡೆಬಿಡ್‌ ಕಾರ್ಡ್‌ ಬದಲು ಆಧಾರ್‌ ಕಾರ್ಡ್‌ ಬಳಸಿಕೊಂಡು ಯುಪಿಐ ಆಕ್ಟಿವ್‌ ಮಾಡಬಹುದು ಎಂದು ರಾಷ್ಟ್ರೀಯ ಪಾವತಿಗಳ ನಿಗಮದ (NPCI) ತಿಳಿಸಿದೆ.

ಗೂಗಲ್‌ ಪೇ ಹೇಳಿದ್ದೇನು ?
ಆಧಾರ್‌ ಕಾರ್ಡ್‌ ಬಳಸಿಕೊಂಡು ಗೂಗಲ್ ಪೇ ಬಳಕೆದಾರರು ಯುಪಿಐ ಆಕ್ಟಿವ್‌ ಮಾಡಬಹುದಾಗಿದೆ. ಇದರಿಂದಾಗಿ ನೂರಾರು ಮಿಲಿಯನ್‌ ಯುಪಿಐ ಬಳಕೆದಾರರಿಗೆ ಅನುಕೂಲವಾಗಲಿದೆ. ಹೆಚ್ಚು ಜನರು ಡಿಜಿಟಲ್‌ ಪಾವತಿಗಳನ್ನು ಸಹಕಾರಿಯಾಗಲಿದೆ ಎಂದು ಗೂಗಲ್‌ ಪೇ ಹೇಳಿಕೆ ನೀಡಿದೆ.

ಉಲ್ಲೇಖಿಸಬೇಕಾದ ನಿಯಮಗಳು:

  • ಬಳಕೆದಾರರು ನೀಡಿರುವ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.
  • ಆಧಾರ್ ಮೂಲಕ ಯುಪಿಐಯನ್ನು ಬಳಸಲು ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ತಮ್ಮ ಆಧಾರ್‌ಗೆ ಲಿಂಕ್ ಮಾಡಿರಬೇಕು ಮತ್ತು ಅವರ ಫೋನ್ ಸಂಖ್ಯೆಯನ್ನು ಯುಐಡಿಎಐ (UIDAI) ನಲ್ಲಿ ನೋಂದಾಯಿಸಿಕೊಳ್ಳಬೇಕು.

ಯುಪಿಐ ಐಡಿ ಬ್ಯಾಂಕ್‌ನಲ್ಲಿ ನೋಂದಾವಣೆಯಾಗಿರುವ ಪೋನ್‌ ಸಂಖ್ಯೆಯನ್ನು ಗುರುತಿಸುತ್ತದೆ. ಬಳಕೆದಾರರು ಯಾವ ಆಪ್ಲಿಕೇಷನ್‌ನಿಂದ ಹಣವನ್ನು ವರ್ಗಾವಣೆ ಮಾಡಲು ಬಯಸುತ್ತಾರೋ ಆಗ ಯುಪಿಐ ಐಡಿ ಅದಕ್ಕೆ ಅನುಮತಿಯನ್ನು ನೀಡುತ್ತದೆ. ಯುಪಿಐ ಐಡಿಗಾಗಿ ನೀವು ಮೂರು ಯುಪಿಐ ಸಂಖ್ಯೆಗಳನ್ನು ರಚಿಸಬಹುದು. ಇದು ನಿಮ್ಮ ಫೋನ್ ಸಂಖ್ಯೆಯಾಗಿರಬಹುದು ಅಥವಾ ನೀವು ಆಯ್ಕೆಮಾಡುವ ಯಾವುದೇ 8 ರಿಂದ 10 ಅಂಕಿಯ ಸಂಖ್ಯಾ ಐಡಿ ಆಗಿರಬಹುದು.

UPI ಸಂಖ್ಯೆಯನ್ನು ರಚಿಸಲು ಕ್ರಮಗಳು :

  • ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಬೇಕು
  • “ಪಾವತಿ ವಿಧಾನಗಳು” ಕ್ಲಿಕ್ ಮಾಡಿ, ತದನಂತರ ನೀವು UPI ಸಂಖ್ಯೆಯನ್ನು ರಚಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
  • ಮೆನುವಿನಿಂದ “UPI ಸಂಖ್ಯೆಗಳನ್ನು ನಿರ್ವಹಿಸಿ” ಆಯ್ಕೆ ಮಾಡಬೇಕು.
  • ಪರದೆಯ ಮೇಲೆ ಪ್ರದರ್ಶಿಸಲಾದ ಸೂಚನೆಗಳನ್ನು ಅನುಸರಿಸಬೇಕು.

ಇದನ್ನೂ ಓದಿ : 7th Pay Commission News : ಸರಕಾರಿ ನೌಕರರಿಗೆ ಸಿಹಿ ಸುದ್ದಿ : ಜುಲೈನಿಂದಲೇ ಹೆಚ್ಚಳವಾಗಲಿದೆ ಡಿಎ

ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಅಥವಾ ಅವರ ಆಧಾರ್ ಅನ್ನು ಬಳಸಿಕೊಂಡು ಯುಪಿಐಗೆ ಸೈನ್ ಅಪ್ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ ಎಂಬುದನ್ನು ಸಹ ಗಮನಿಸಬೇಕು.

Attention Google Pay Users: Can Aadhaar be used to activate UPI?

Comments are closed.