ಭಾನುವಾರ, ಏಪ್ರಿಲ್ 27, 2025
Homebusinessಬಿಪಿಎಲ್‌ ಕಾರ್ಡುದಾರರಿಗೆ 6 ಲಕ್ಷ, ಎಪಿಎಲ್‌ಗೆ 2 ಲಕ್ಷ : ಕೇಂದ್ರ ಸರಕಾರದ ಈ ಯೋಜನೆ...

ಬಿಪಿಎಲ್‌ ಕಾರ್ಡುದಾರರಿಗೆ 6 ಲಕ್ಷ, ಎಪಿಎಲ್‌ಗೆ 2 ಲಕ್ಷ : ಕೇಂದ್ರ ಸರಕಾರದ ಈ ಯೋಜನೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ

- Advertisement -

Ayushman Aarogya Card : ಕೇಂದ್ರ ಸರಕಾರ ಭಾರತೀಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಕರ್ನಾಟಕ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರದ ಈ ಯೋಜನೆಯ ಮೂಲಕ ಬಿಪಿಎಲ್‌ ಕುಟುಂಬದ ಪ್ರತೀ ಸದಸ್ಯರು 5 ಲಕ್ಷ ರೂಪಾಯಿ ಹಾಗೂ ಎಪಿಎಲ್‌ ಕಾರ್ಡುದಾರರು 2 ಲಕ್ಷ ರೂಪಾಯಿಯ ವರೆಗೆ ಸೌಲಭ್ಯ ಪಡೆಯಲು ಅವಕಾಶವಿದೆ.

ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗುತ್ತಿದ್ದಂತೆಯೇ ಯಾರೂ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲ ಬಾರದು ಅನ್ನೋ ಕಾರಣಕ್ಕೆ ಆಯುಷ್ಮಾನ್‌ ಭಾರತ್‌ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆಯುಷ್ಮಾನ್‌ ಭಾರತ್‌ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡುಗಳನ್ನು ಪಡೆದುಕೊಂಡ್ರೆ ಉಚಿತ ಆರೋಗ್ಯ ನೆರವು ದೊರೆಯಲಿದೆ.

Ayushman Aarogya Card How To apply on Online
Image Credit to Original Source

ಭಾರತದ ದೇಶದ ಪ್ರತೀ ಪ್ರಜೆಯು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬಿಪಿಎಲ್‌ ಕುಟುಂಬದ ಸದಸ್ಯರು 5 ಲಕ್ಷ ರೂಪಾಯಿಯ ವರೆಗೆ ಉಚಿತ ಚಿಕಿತ್ಸಾ ವೆಚ್ಚ ಪಡೆಯಬಹುದಾಗಿದೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಕೂಡ ಈ ಯೋಜನೆಯ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಆಯುಷ್ಮಾನ್‌ ಯೋಜನೆಯ ಅಡಿಯಲ್ಲಿ ಕೇವಲ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಉಚಿತ ಚಿಕಿತ್ಸೆಗೆ ಅವಕಾಶವಿದೆ. ಬಿಪಿಎಲ್‌ ಕಾರ್ಡು ಹೊಂದಿರುವವರು 5 ಲಕ್ಷ ರೂಪಾಯಿ ಹಾಗೂ ಎಪಿಎಲ್‌ ಕಾರ್ಡುದಾರರು ಅಥವಾ ಕಾರ್ಡು ಹೊಂದದೇ ಇರುವವರು ಕೂಡ 1.5 -2  ಲಕ್ಷ ರೂಪಾಯಿಯ ವರೆಗೆ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್‌ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್‌ ಮಾಡಿ

ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ, ಕುಟುಂಬ ಸದಸ್ಯರ ಮಾಹಿತಿಯನ್ನು ನೀಡುವ ಮೂಲಕ ಪ್ರತಿಯೊಬ್ಬರು ಕೂಡ ಆಯುಷ್ಮಾನ್‌ ಯೋಜನೆಗೆ ಸೇರ್ಪಡೆ ಆಗಬಹುದಾಗಿದೆ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್‌ ಮೂಲಕವೂ ಆಯುಷ್ಮಾನ್‌ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ಪಡೆಯುವುದು ಹೇಗೆ ?

ಆಯುಷ್ಮಾನ್‌ ಯೋಜನೆಯ ಕಾರ್ಡ್‌ನ್ನು ಮೊಬೈಲ್‌ ಮೂಲಕವೂ ಪಡೆಯಲು ಅವಕಾಶವಿದೆ. ನೀವು abdm.gov.in/ ಗೆ ಭೇಟಿ ನೀಡುವ ಮೂಲಕ ನೀವು ಆಯುಷ್ಮಾನ್‌ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Ayushman Aarogya Card How To apply on Online
Image Credit to Original Source

ವೆಬ್‌ಸೈಟ್‌ ಓಪನ್‌ ಆಗುತ್ತಿದ್ದಂತೆಯೇ ABHA ಕಾರ್ಡ್‌ ಮೇಲೆ ಕ್ಲಿಕ್‌ ಮಾಡಿ. ನಂತರ ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ನಮೂದಿಸುತ್ತಿದ್ದಂತೆಯೇ OTP ಸಂಖ್ಯೆಯನ್ನು ಕೇಳುತ್ತದೆ.

ಇದನ್ನೂ ಓದಿ : 10,000 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 4.4 ಲಕ್ಷ ರೂ. : ಅಂಚೆ ಇಲಾಖೆಯಿಂದ ಹೊಸ ಯೋಜನೆ

ನಿಮ್ಮ ಮೊಬೈಲ್‌ ಸಂಖ್ಯೆಗೆ ಬರುವ OTP ಸಂಖ್ಯೆಯನ್ನು ಸಲ್ಲಿಕೆ ಮಾಡಿದ ಬಳಿಕ, ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ನಮೂದಿಸಬೇಖು. ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ. ನೀವು ಸಲ್ಲಿಕೆ ಮಾಡುವ ಅರ್ಜಿಯನ್ನು ಸಂಪೂರ್ಣವಾಗಿ ಒಮ್ಮೆ ಓದಿಕೊಂಡು ಎಲ್ಲಾ ದಾಖಲೆ, ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.

ಎಲ್ಲವೂ ಸರಿಯಾಗಿದೆ ಅನ್ನೋದು ಖಚಿತವಾದ ನಂತರದಲ್ಲಿ ನೀವು ಸರ್ಜಿಯನ್ನು ಸಬ್ಮಿಟ್‌ ಮಾಡಿ. ನಂತರದಲ್ಲಿ ನೀವು ಸಲ್ಲಿಕೆ ಮಾಡಿರುವ ಅರ್ಜಿ ಸರಿಯಾಗಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ನಿಮಗೆ ಆಯುಷ್ಮಾನ್‌ ಕಾರ್ಡ್‌ ಮಂಜೂರು ಮಾಡಲಿದೆ. ಈ ಕಾರ್ಡ್‌ ಸಿಕ್ಕ ನಂತರ ನೀವು ಉಚಿತ ಚಿಕಿತ್ಸೆಗೆ ಅರ್ಹತೆಯನ್ನು ಪಡೆಯುತ್ತೀರಿ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯೋಕೆ ಇನ್ಮುಂದೆ ಈ ಕೆಲಸ ಮಾಡುವುದು ಕಡ್ಡಾಯ

Ayushman Aarogya Card How To apply on Online

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular