Gold price Rise today in India: ಗಣೇಶ ಹಬ್ಬದಂದು ಆಭರಣ ಪ್ರಿಯರಿಗೆ ಒಂದು ಬ್ಯಾಡ್ ನ್ಯೂಸ್, ಕುಸಿತವಾಗಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ : ಗಣೇಶ ಚತುರ್ಥಿ ಆಭರಣ ಪ್ರಿಯರಿಗೆ ಕಹಿಯಾಗಿ ಪರಿಣಮಿಸಿದೆ. ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಇಳಿಕೆಯನ್ನು ಕಂಡಿತ್ತು. ಆದ್ರೀಗ ಇದೀಗ ಇಳಿಕೆಯಾಗಿದ್ದ ಚಿನ್ನಾಭರಣದ ಬೆಲೆ ಹಬ್ಬದ ದಿನದಂದೇ ಏರಿಕೆಯನ್ನು (Gold price Rise today in India) ಕಂಡಿದೆ. ಗಣೇಶ ಹಬ್ಬದ ವೇಳೆ ಜನರು ಚಿನ್ನ ಖರೀದಿಗೆ ಆಸಕ್ತಿ ತೋರಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂಬುದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ನೀಡಲಾಗಿದೆ.

ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ ರೂ.5,154 ರಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್) ಚಿನ್ನ ರೂ. 5,159. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ ರೂ.47,260. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,590 ರೂ.

ಇದನ್ನೂ ಓದಿ: ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ ಇನ್ನಿಲ್ಲ

ಇದನ್ನೂ ಓದಿ: ಭಾರತದ ವಾಯು ಸೇನೆಗೆ ಅಮೆರಿಕದ ‘ಚಿನೂಕ್’ ಚಿಂತೆ..?

ಪ್ರಮುಖ ನಗರಗಳಲ್ಲಿ(Gold price Rise today in India) ಇಂದಿನ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

  • ಬೆಂಗಳೂರು: ರೂ. 47,260 (22 ಕ್ಯಾರೆಟ್) ರೂ. 51,590 (24 ಕ್ಯಾರೆಟ್)
  • ಚೆನ್ನೈ: ರೂ. 47,900 (22 ಕ್ಯಾರೆಟ್) ರೂ. 52,250 (24 ಕ್ಯಾರೆಟ್)
  • ದೆಹಲಿ: ರೂ. 47,400 (22 ಕ್ಯಾರೆಟ್) ರೂ. 51,690 (24 ಕ್ಯಾರೆಟ್)
  • ಹೈದರಾಬಾದ್: ರೂ. 47,250 (22 ಕ್ಯಾರೆಟ್) ರೂ. 51,540 (24 ಕ್ಯಾರೆಟ್)
  • ಕೋಲ್ಕತ್ತಾ: ರೂ.47,250 (22 ಕ್ಯಾರೆಟ್) ರೂ.51,540 (24 ಕ್ಯಾರೆಟ್)
  • ಮಂಗಳೂರು:ರೂ.47,260 (22ಕ್ಯಾರೆಟ್) ರೂ.51,590 (24ಕ್ಯಾರೆಟ್)
  • ಮುಂಬೈ: ರೂ.47,250 (22 ಕ್ಯಾರೆಟ್) ರೂ.51,540 (24 ಕ್ಯಾರೆಟ್)
  • ಮೈಸೂರು: ರೂ.47,260 (22 ಕ್ಯಾರೆಟ್) ರೂ.51,590 (24 ಕ್ಯಾರೆಟ್)

ಬೆಳ್ಳಿ ದರ ದೇಶದಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ.54,000 ದಾಖಲಾಗಿದ್ದು, ಮಂಗಳವಾರವಷ್ಟೇ ಬೆಲೆ ದಾಖಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 60,100 ರೂ. ದೇಶಾದ್ಯಂತ ಹಲವೆಡೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ಕೆಲವೆಡೆ ಇಳಿಕೆಯಾಗಿದೆ. ಚೆನ್ನೈ, ಹೈದರಾಬಾದ್, ಕೇರಳ, ಕೊಯಮತ್ತೂರು, ಮಂಗಳೂರು, ಮೈಸೂರಿನಲ್ಲೂ 60,100 ರೂ.ಗೆ ನಿಗದಿಯಾಗಿದೆ.

ಇದನ್ನೂ ಓದಿ : Hindu awareness letter : ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ

ಇದನ್ನೂ ಓದಿ : Prime Minister’s arrival in mangalore : ಕಡಲನಗರಿಗೆ ಪ್ರಧಾನಿ ಆಗಮನ ಬೆನ್ನಲ್ಲೇ ಗೊಂದಲ ಸೃಷ್ಟಿಸಲು ಯತ್ನ :2 ಎಫ್​ಐಆರ್​ ದಾಖಲು

Bad news for jewellery lovers on Ganesha festival. Rise in gold prices

Comments are closed.