David Warner:ಗಣಪತಿ ಬಪ್ಪ ಮೋರೆಯಾ: ಭಾರತೀಯರಿಗೆ ಗಣೇಶ ಚತುರ್ಥಿ ಶುಭಾಶಯ ಕೋರಿದ ಆಸ್ಟ್ರೇಲಿಯಾ ಕ್ರಿಕೆಟರ್ ದೇವಿಡ್ ವಾರ್ನರ್

ಬೆಂಗಳೂರು: ಡೇವಿಡ್ ವಾರ್ನರ್‌ (David Warner) ಆಸ್ಟ್ರೇಲಿಯಾದವರಾಗಿರಬಹುದು. ಆದರೆ ಡೇವಿಡ್ ವಾರ್ನರ್ (David Warner)ಅವರಿಗೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ತನ್ನ ಭಾರತೀಯ ಅಭಿಮಾನಿಗಳಿಗಾಗಿ ಡೇವಿಡ್‌ ವಾರ್ನರ್ ಆಗಾಗ ಇಂಪ್ರೆಸ್ ಮಾಡುತ್ತಲೇ ಇರುತ್ತಾರೆ. ಅದು ತನ್ನ ಸ್ಫೋಟಕ ಬ್ಯಾಟಿಂಗ್’ನಿಂದ ಇರಬಹುದು, ಸಾಮಾಜಿಕ ಜಾಲತಾಣಗಳಲ್ಲಿ(Ganesh Chaturthi) ಹಾಕುವ ಪೋಸ್ಟ್’ಗಳ ಮೂಲಕ ಇರಬಹುದು. ಭಾರತದಲ್ಲಿರುವ ತನ್ನ ಅಭಿಮಾನಿಗಳಿಗೆ ಡೇವಿಡ್ ವಾರ್ನರ್ ಮನರಂಜನೆ ನೀಡುತ್ತಲೇ ಇರುತ್ತಾರೆ.

ಆಗಸ್ಟ್ 15ರಂದು ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದ ಡೇವಿಡ್ ವಾರ್ನರ್ (David Warner) ಈಗ ತನ್ನ ಭಾರತೀಯ ಅಭಿಮಾನಿಗಳಿಗೆ ಅತ್ಯಂತ ವಿಭಿನ್ನವಾಗಿ, ವಿಶಿಷ್ಠವಾಗಿ (Ganesh Chaturthi) ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ. ಇನ್’ಸ್ಟಾಗ್ರಾಂನಲ್ಲಿ ಗಣೇಶನ ವಿಗ್ರಹದ ಮುಂದೆ ನಿಂತು ಕೈ ಮುಗಿಯುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿರುವ ಡೇವಿಡ್‌ ವಾರ್ನರ್, “ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

https://www.instagram.com/p/Ch6Xr_trdq9/?utm_source=ig_web_copy_link

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರಿಗೆ ಭಾರತದಲ್ಲಿ ಅಭಿಮಾನಿ ಬಳಗವಿರಲು ಕಾರಣ ಐಪಿಎಲ್. 2009ರಿಂದ ಐಪಿಎಲ್’ನಲ್ಲಿ ಆಡುತ್ತಿರುವ ಡೇವಿಡ್ ವಾರ್ನರ್ ತಮ್ಮ ಅಮೋಘ ಆಟದಿಂದ ಅಭಿಮಾನಿಗಳನ್ ರಂಜಿಸುತ್ತಾ ಬಂದಿದ್ದಾರೆ. ಮೊದಲು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದ ಡೇವಿಡ್ ವಾರ್ನರ್, ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ 2016ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರ ಬಿದ್ದಿದ್ದ ವಾರ್ನರ್, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದರು. ಸನ್ ರೈಸರ್ಸ್ ತಂಡದ ನಾಯಕರಾಗಿದ್ದಾಗ ತೆಲುಗು ಸಿನಿಮಾಗಳ ಡೈಲಾಗ್’ಗಳಿಗೆ ಟಿಕ್ ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದರು.

https://www.instagram.com/tv/CdLsN63lUx7/?igshid=YmMyMTA2M2Y=
https://www.instagram.com/tv/Cddc6D3Dlw8/?igshid=YmMyMTA2M2Y=
https://www.instagram.com/tv/CgeM9w2lKnf/?igshid=YmMyMTA2M2Y=

ಇದನೂ ಓದಿ: ಕಡಲನಗರಿಗೆ ಪ್ರಧಾನಿ ಆಗಮನ ಬೆನ್ನಲ್ಲೇ ಗೊಂದಲ ಸೃಷ್ಟಿಸಲು ಯತ್ನ :2 ಎಫ್​ಐಆರ್​ ದಾಖಲು

ಇದನ್ನೂ ಓದಿ: ಭಾರತ Vs ಹಾಂಕಾಂಗ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಮೇಲೆ ಬಿಗ್ ಪ್ರೆಶರ್

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್, ಧೋನಿ, ಕೊಹ್ಲಿಗೂ ಸಾಧ್ಯವಾಗದ ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

ಐಪಿಎಲ್’ನಲ್ಲಿ ಒಟ್ಟು 162 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 42ರ ಅಮೋಘ ಸರಾಸರಿಯಲ್ಲಿ 5881 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕಗಳು ಹಾಗೂ 55 ಅರ್ಧಶಕಗಳು ಸೇರಿವೆ. ಐಪಿಎಲ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ವಿದೇಶಿ ಆಟಗಾರನೆಂಬ ದಾಖಲೆ ವಾರ್ನರ್ ಹೆಸರಲ್ಲಿದೆ.

Australian cricketer David Warner wished Indians on Ganesh Chaturthi

Comments are closed.