ಬ್ಯಾಂಕ್ ಗ್ರಾಹಕರ ಗಮನಕ್ಕೆ : ಜೂನ್ 11 ರಿಂದ ನಾಲ್ಕು ದಿನ ಬ್ಯಾಂಕ್‌ ರಜೆ

ನವದೆಹಲಿ : ಜೂನ್ 11 ಮತ್ತು 15 ರ ನಡುವೆ ಬ್ಯಾಂಕುಗಳು ನಾಲ್ಕು ದಿನ ಬಾಗಿಲು (Bank Customers Alert ) ಮುಚ್ಚಲಿವೆ. ಜೂನ್ 11 ಭಾರತದಾದ್ಯಂತ ಎರಡನೇ ಶನಿವಾರ ಜೂನ್ 12 ಭಾನುವಾರ ಭಾರತದಾದ್ಯಂತ ಜೂನ್ 14 ಸಂತ ಗುರು ಕಬೀರ್ ಜಯಂತಿ ಚಂಡೀಗಢ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಜೂನ್ 15 ಗುರು ಹರಗೋಬಿಂದ್ ಜನ್ಮದಿನ ಒಡಿಶಾ, ಮಿಜೋರಾಂ, ಜಮ್ಮು ಮತ್ತು ಕಾಶ್ಮೀರ ಗ್ರಾಹಕರು ತಮ್ಮ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಜೂನ್ 11 ರ ಮೊದಲು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಆದರೆ ನಾಲ್ಕು ದಿನಗಳ ರಜೆ ಎಲ್ಲಾ ರಾಜ್ಯಗಳಿಗೆ ಅನ್ವಯಿಸುವುದಿಲ್ಲ. ಜೂ 11 ರಿಂದ ಎರಡನೇ ಶನಿವಾರ ಮತ್ತು ಭಾನುವಾರದ ರಜೆಗಳು ಸೇರಿಕೊಂಡಿವೆ. ಬ್ಯಾಂಕ್‌ ಗ್ರಾಹಕರು ತುರ್ತು ಕಾರ್ಯಗಳಿದ್ರೆ ರಜೆ ದಿನ ಕುರಿತು ಗಮನ ಹರಿಸುವುದು ಒಳಿತು. ಆದರೆ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.

ಇನ್ನು ಬ್ಯಾಂಕ್ ರಜಾದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮೂರು ವರ್ಗಗಳ ಆಧಾರದ ಮೇಲೆ ನಿರ್ಧರಿಸುತ್ತದೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, RTGS ಹಾಲಿಡೇ ಮತ್ತು ಬ್ಯಾಂಕ್ ಖಾತೆಗಳನ್ನು ಮುಚ್ಚುವುದು. ಎರಡನೇ ಶನಿವಾರ, ಮೂರನೇ ಶನಿವಾರ, ಮತ್ತು ಎಲ್ಲಾ ಭಾನುವಾರಗಳು ಬ್ಯಾಂಕ್ ರಜೆ ಘೋಷಿಸಲಾಗಿದೆ.

ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ ?

BHIM, ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್‌ ಮುಂತಾದ ಆಪ್‌ಗಳು UPI ಮುಖಾಂತರ ಹಣ ವರ್ಗಾಯಿಸುವುದನ್ನು (Set Up UPI) ಅನುವು ಮಾಡಿಕೊಟ್ಟಿದೆ. UPI ಎಂದರೆ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಎಂದು. ಇದನ್ನೂ 2016 ರಲ್ಲಿ ಪ್ರಾರಂಭಿಸಿಲಾಯಿತು. ಇದು ಡಿಜಿಟಲ್‌ ಹಣ ವರ್ಗಾವಣೆಯನ್ನು ಬೆಂಬಲಿಸವುದು. UPI ಅನ್ನು ಸೆಟ್‌ ಮಾಡಲು ಬಳಕೆದಾರರು UPI ಸೌಲಭ್ಯವನ್ನು ನೀಡುವ ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕು.

BHIM, ಮತ್ತು ಗೂಗಲ್‌ಪೇ, ಫೋನ್‌ಪೇ, ಮತ್ತು ಪೇಟಿಎಮ್‌ ನಂತಹ ಖಾಸಗಿ ವಹಿವಾಟುದಾರರು ಸೇರಿದಂತೆ UPI ಬೆಂಬಲಿಸುವ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುವುದು. ಈ ಅಪ್ಲಿಕೇಶನ್‌ ತನ್ನ ಬಳಕೆದಾರರಿಗೆ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಲು ಕೇಳುತ್ತದೆ. ಅವರು ತಮ್ಮ ಬ್ಯಾಂಕ್‌ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್‌ ಸಂಖ್ಯೆಯನ್ನು ಸಹ ಆಯ್ಕೆ ಮಾಡಬೇಕಾಗುತ್ತದೆ.

ನಂತರ, ಬಳಕೆದಾರರು ಪರಿಶೀಲನೆಯ ನಂತರ ತಮ್ಮ ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಬೇಕಾಗುತ್ತದೆ ಮತ್ತು ಅಪ್ಲಿಕೇಶನ್‌ ಅನ್ನು ತೆರಯಲು UPI ಪಿನ್‌ ರಚಿಸಬೇಕು. ಈಗ UPI ಖಾತೆಯನ್ನು ನೋಂದಾಯಿಸುವ ಪ್ರಕ್ರಿಯೆಯು ಪೂರ್ಣಗೊಳ್ಳುವುದು ಮತ್ತು ವರ್ಚುವಲ್‌ ಪಾವತಿ ವಿಳಾಸವನ್ನು (VPA) ರಚಿಸಲ್ಪಡುವುದು. ಇದು ಬಳಕೆದಾರರಿಗೆ ಹಣವನ್ನು ವರ್ಗಾಯಿಸಲು, ಅವರ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ವಹಿವಾಟಿನ ಇತಿಹಾಸವನ್ನು(Transaction history) ಪರಶೀಲಿಸಲು ಅನುಮತಿ ನೀಡುತ್ತದೆ. ಇದು QR ಕೋಡ್‌ಗಳ ಮೂಲಕ ಪಾವತಿಗಳನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ : ಭವಿಷ್ಯ ನಿಧಿ (PF) ಬ್ಯಾಲೆನ್ಸ್‌ ಅನ್ನು ಹೇಗೆಲ್ಲಾ ಚೆಕ್‌ ಮಾಡಬಹುದು ಗೊತ್ತಾ? ಇಲ್ಲಿದೆ 5 ಸರಳ ಮಾರ್ಗಗಳು

ಇದನ್ನು ಓದಿ : UIDAI Cautions : ಆಧಾರ್‌ ಪೋಟೋ ಕಾಪಿ ಶೇರ್‌ ಮಾಡುವ ಮುನ್ನ ಹುಷಾರ್‌ !

Bank Customers Alert Banks 4 days After June 11

Comments are closed.