ಭಾನುವಾರ, ಏಪ್ರಿಲ್ 27, 2025
HomebusinessBank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌...

Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ ಬ್ಯಾಂಕ್‌ ರಜೆ

- Advertisement -

ಭಾರತೀಯ ರಿಸರ್ವ್ ಬ್ಯಾಂಕ್‌ (RBI)ನ ಡಿಸೆಂಬರ್ 2022 ರ ರಜಾದಿನಗಳ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಿದೆ. ಅದರ ಅನುಗುಣವಾಗಿ ಬ್ಯಾಂಕ್‌ಗಳಿಗೆ ನಿರ್ದಿಷ್ಟ ದಿನಗಳಂದು ರಜೆ ಇರಲಿದೆ. ಡಿಸೆಂಬರ್‌ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 14 ದಿನ ರಜೆ ಇರಲಿದೆ (Bank Holidays December 2022). ಎಲ್ಲಾ ಬ್ಯಾಂಕ್‌ ರಜಾ ದಿನಗಳು ಆಯಾ ಪ್ರದೇಶ ಮತ್ತು ರಾಜ್ಯಗಳಿಗನುಗುಣವಾಗಿ ರಜೆ ನೀಡಲಾಗುತ್ತದೆ. 1881 ರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ಅಡಿಯಲ್ಲಿ, ಎಲ್ಲಾ ಬ್ಯಾಂಕ್ ರಜಾದಿನಗಳನ್ನು ಘೋಷಿಸಲಾಗುವುದು. ಎಂದಿನಂತೆ ಆನ್‌ಲೈನ್ ಮತ್ತು ನೆಟ್ ಬ್ಯಾಂಕಿಂಗ್ ಸೇವೆಗಳು ಡಿಸೆಂಬರ್ 2022 ರಲ್ಲಿ ಲಭ್ಯವಿರುತ್ತವೆ.

Bank Holidays December 2022 : ಬ್ಯಾಂಕ್‌ ರಜಾ ದಿನಗಳ ಪಟ್ಟಿ :

ಡಿಸೆಂಬರ್ 4: ಭಾನುವಾರ
ಡಿಸೆಂಬರ್ 10: ಎರಡನೇ ಶನಿವಾರ
ಡಿಸೆಂಬರ್ 11: ಭಾನುವಾರ
ಡಿಸೆಂಬರ್ 18: ಭಾನುವಾರ
ಡಿಸೆಂಬರ್ 24: ನಾಲ್ಕನೇ ಶನಿವಾರ ಮತ್ತು ಕ್ರಿಸ್ಮಸ್ ಹಬ್ಬ
ಡಿಸೆಂಬರ್ 25: ಭಾನುವಾರ ಮತ್ತು ಕ್ರಿಸ್ಮಸ್ ಆಚರಣೆ

ರಾಜ್ಯಗಳಿಗನುಗುಣವಾಗಿ ಡಿಸೆಂಬರ್‌ 2022 ರ ಬ್ಯಾಂಕ್‌ ರಜಾ ದಿನಗಳು:
3 ಡಿಸೆಂಬರ್ 2022: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ (ಗೋವಾ)
5 ಡಿಸೆಂಬರ್ 2022: ಗುಜರಾತ್ ವಿಧಾನಸಭೆ ಚುನಾವಣೆ 2022 (ಗುಜರಾತ್‌)
12 ಡಿಸೆಂಬರ್ 2022 ಪಾ-ಟೋಗನ್ ನೆಂಗ್ಮಿಂಜ ಸಂಗ್ಮಾ (ಮೇಘಾಲಯ)
19 ಡಿಸೆಂಬರ್ 2022 ಗೋವಾ ವಿಮೋಚನಾ ದಿನ (ಗೋವಾ)
26 ಡಿಸೆಂಬರ್ 2022 ಕ್ರಿಸ್ಮಸ್ ಆಚರಣೆ/ಲೂಸೂಂಗ್/ನಮ್ಸೂಂಗ್ 26 (ಮಿಝೋರಾಂ,ಸಿಕ್ಕಿಂ, ಮತ್ತು ಮೇಘಾಲಯ)
29 ಡಿಸೆಂಬರ್ 2022 ಗುರು ಗೋವಿಂದ್ ಸಿಂಗ್ ಜಿ ಜನ್ಮದಿನ 29 (ಚಂಡೀಗಢ)
30 ಡಿಸೆಂಬರ್ 2022 U Kiang Nangbah (ಮೇಘಾಲಯ)
31 ಡಿಸೆಂಬರ್ 2022 ಹೊಸ ವರ್ಷದ ಮುನ್ನಾದಿನ (ಮಿಝೋರಾಂ)

ಕರ್ನಾಟಕದಲ್ಲಿ ಬ್ಯಾಂಕ್‌ ರಜಾ ದಿನಗಳು :
ಕರ್ನಾಟಕದಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ಶನಿವಾರ, ಭಾನುವಾರ ಮತ್ತು ಕ್ರಿಸ್ಮಸ್‌ ಸೇರಿದಂತೆ 6 ದಿನಗಳು ಮಾತ್ರ ರಜೆ ಇರಲಿದೆ.

ಇದನ್ನೂ ಓದಿ : National Pension System : ಡಿಜಿಲಾಕರ್‌ ಬಳಸಿ ಆನ್‌ಲೈನ್‌ನಲ್ಲಿ ಎನ್‌ಪಿಎಸ್‌ ಖಾತೆ ತೆರೆಯಿರಿ

ಇದನ್ನೂ ಓದಿ : Post Office Schemes : ಪೋಸ್ಟ್‌ ಆಫೀಸ್‌ ನಲ್ಲಿ ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ!!

(Bank Holidays In December 2022 banks to remain closed for 14 days)

RELATED ARTICLES

Most Popular