BMTC Bus Accident: ಬೈಕ್‌ – ಬಿಎಂಟಿಸಿ ಬಸ್‌ ಭೀಕರ ಅಪಘಾತ: ಇಬ್ಬರು ಸಾವು

ಬೆಂಗಳೂರು: (BMTC Bus Accident) ಬೈಕ್‌ ಮತ್ತು ಬಿಎಂಟಿಸಿ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಸ್‌ ರೋಡ್‌ ಮಾಗಡಿ ಜಂಕ್ಷನ್‌ ಬಳಿ ನಡೆದಿದೆ. ಮಂಜುನಾಥ್‌ (25 ವರ್ಷ) ಹಾಗೂ ಶಿವರಾಜ್‌ (29 ವರ್ಷ) ಮೃತ ದುರ್ದೈವಿಗಳು.

ಮೃತ ವ್ಯಕ್ತಿಗಳನ್ನು ರಾಮನಗರ ಜಿಲ್ಲೆಯ ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳು ಎಂದು ಗುರುತಿಸಲಾಗಿದೆ. ನೈಸ್‌ ರೋಡ್‌ ಮಾಗಡಿ ಜಂಕ್ಷನ್‌ ಬಳಿಯಲ್ಲಿ ಜುಪಿಟರ್‌ ಬೈಕ್‌ ನಲ್ಲಿ ಇಬ್ಬರು ಬೈಕ್‌ ಸವಾರರು ಹೋಗುತ್ತಿದ್ದ ವೇಳೆ ಏಕಾಏಕಿ ಹಿಂದಿನಿಂದ ಬಂದ ಬಿಎಂಟಿಸಿ ಬಸ್‌ (BMTC Bus Accident) ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾವರೆಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರಗಳಿಗೆ ನೀರು ಕುಡಿಸಲು ಹೋದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಬಿದ್ದು ಸಾವು

ನೀರು ತುಂಬಿದ ಕಲ್ಲಿನ ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಂಟಗಂಟಿ ಗ್ರಾಮದಲ್ಲಿ ನಡೆದಿದೆ. ಸುಮೀತ್ ಹಿರೇಮಠ (10) ಮತ್ತು ಅಂದಾನಗೌಡ (8) ಮೃತ ಬಾಲಕರು. ಬಾಲಕರು ಜಾನುವಾರಗಳಿಗೆ ನೀರು ಕುಡಿಸಲು ಕಲ್ಲಿನ ಕ್ವಾರಿಯ ಕೊಳ್ಳಕ್ಕೆ ಹೋಗಿದ್ದ ವೇಳೆ ಸಾವನ್ನಪ್ಪಿದ್ದಾರೆ. ಸುಮೀತ್ ಹಿರೇಮಠನ ಶವ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕ ಅಂದಾನಗೌಡನ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ : Gang rape of young woman: ಕೇರಳ ಮೂಲದ ಯುವತಿ ಮೇಲೆ ಗ್ಯಾಂಗ್‌ ರೇಪ್‌: ಇಬ್ಬರ ಬಂಧನ

ಇದನ್ನೂ ಓದಿ : Noida Accident : ಕಾರು ಹರಿದು 6 ವರ್ಷದ ಬಾಲಕಿ ಸಾವು, ಇಬ್ಬರು ಗಂಭೀರ

ಇದನ್ನೂ ಓದಿ : teacher called the student a terrorist: ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಶಿಕ್ಷಕ: ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌

ಘಟನೆಗೆ ತಾಲೂಕು ಆಡಳಿತ ನಿರ್ಲಕ್ಷ್ಯ ಕಾರಣ ‌ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕ್ವಾರಿಯಲ್ಲಿನ ನೀರು ಖಾಲಿ‌ ಮಾಡುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ. ನರೇಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

(BMTC Bus Accident) A terrible accident took place between a bike and a BMTC bus and two people died on the spot near Nice Road Magadi Junction. Manjunath (25 years) and Shivraj (29 years) are unfortunate dead.

Comments are closed.