ಡಿಸೆಂಬರ್ ತಿಂಗಳಲ್ಲಿ (December 2021) ಬ್ಯಾಂಕ್ ರಜಾ ಅಥವಾ ಮತ್ತಿತರ ವಿಷಯಗಳಿಂದ ಯಾವುದಾದರೂ ಬ್ಯಾಂಕ್ ಕೆಲಸ ಮಾಡಿಕೊಳ್ಳಲಾಗದೇ ಇದ್ದೀರಾ? 2022ರ ಆರಂಭದಲ್ಲಿ ಅಂದರೆ, ಜನವರಿ ತಿಂಗಳಲ್ಲಿ Bank Holidays January 2022) ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳೋಣ ಎಂದುಕೊಂಡಿದ್ದರೆ ಸ್ವಲ್ಪ ಈ ಸ್ಟೋರಿ ಓದಿ. ಏಕೆಂದರೆ 2022ನೇ ಇಸವಿಯ ಜನವರಿ ತಿಂಗಳಿನಲ್ಲಿ ಹದಿನಾರು ದಿನಗಳ ಕಾಲ ಬ್ಯಾಂಕ್‌ಗಳ ಬಾಗಿಲು ಹಾಕಿರುತ್ತದೆ. ಎಲ್ಲ ರಾಜ್ಯಗಳಲ್ಲಿನ ಬ್ಯಾಂಕ್‌ಗಳಿಗೂ ಈ ರಜೆಗಳು ಅನ್ವಯವಾಗದೇ ಇದ್ದರೂ ಈ ನಿಯಮವನ್ನು ನೀವೊಮ್ಮೆ ತಿಳಿದುಕೊಳ್ಳುವುದು ಲೇಸು. ಏಕೆಂದರೆ ನೀವು ಬ್ಯಾಂಕ್‌ಗೆಂದು ತೆರಳಿದ ದಿನವೇ ಬ್ಯಾಂಕ್ ಬಾಗಿಲು ಹಾಕಿದ್ದರೆ ಕಷ್ಟವಲ್ಲ ಮಾರಾಯರೇ!
ನಮ್ಮ ದೇಶದಲ್ಲಿನ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳೂ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಲಾಗಿರುತ್ತದೆ. ಈ ರಜೆಗಳನ್ನು ಸೇರಿಸಿ ಇನ್ನಿತರ ಕೆಲವು ರಜಾದಿನಗಳೂ ಕೂಡಿ ಜನವರಿ ತಿಂಗಳೊಂದರಲ್ಲೆ ಭಾರತದಲ್ಲಿನ ಬ್ಯಾಂಕ್‌ಗಳಿಗೆ ಒಟ್ಟು ಹದಿನಾರು ದಿನಗಳ ರಜಾದಿನವಿದೆ. ಇವು ಎಲ್ಲ ಬ್ಯಾಂಕ್‌ಗಳು ಮತ್ತು ಎಲ್ಲ ರಾಜ್ಯಗ್ಳಿಗೂ ಅನ್ವಯವಾಗದೆಯೂ ಇರಬಹುದು. ಆದರೆ ಈ ರಜಾದಿನಗಳಲ್ಲಿ ಆನ್‌ಲೈನ್ ವಹಿವಾಟುಗಳನ್ನು ಖಂಡಿತ ನಡೆಸಬಹುದಾಗಿದೆ.
1 ಜನವರಿ: ಹೊಸ ವರ್ಷದ ದಿನ (ಇಡೀ ದೇಶದಲ್ಲೂ ಬ್ಯಾಂಕ್‌ಗಳಿಗೆ ರಜೆ)
2 ಜನವರಿ: ರವಿವಾರ
4 ಜನವರಿ: ಲೋಸೂಂಗ್ (ಸಿಕ್ಕಿಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)
8 ಜನವರಿ: ಎರಡನೇ ಶನಿವಾರ
9 ಜನವರಿ: ರವಿವಾರ
11 ಜನವರಿ: ಮಿಷನರಿ ಡೇ (ಮಿಜೋರಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)
ಜನವರಿ 12: ಸ್ವಾಮಿ ವಿವೇಕಾನಂದ ಅವರ ಜನ್ಮದಿನ
14 ಜನವರಿ: ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬ
15 ಜನವರಿ: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ
16 ಜನವರಿ: ರವಿವಾರ
18 ಜನವರಿ: ಚೆನ್ನೈನಲ್ಲಿ ಥೈ ಪೂಸಂ ಎಂಬ ಹಬ್ಬ
22 ಜನವರಿ: ನಾಲ್ಕನೆಯ ಶನಿವಾರ
23 ಜನವರಿ: ರವಿವಾರ
30 ಜನವರಿ: ರವಿವಾರ
26 ಜನವರಿ: ಗಣರಾಜ್ಯೋತ್ಸವ ಸಂಭ್ರಮ
31 ಜನವರಿ: ಮಿ-ಡ್ಯಾಮ್-ಮಿ-ಫೈ (ಅಸ್ಸಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)
ಹೀಗಾಗಿ 2021ರ ಜನವರಿ ತಿಂಗಳ ಮೊದಲ ದಿನವೂ ಬ್ಯಾಂಕ್‌ಗೆ ರಜೆ ಆಗಿದ್ದು, ಜನವರಿ 31 ರಂದೂ ಸಹ ರಜೆ ಇರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: Human Milk Bank : ನವಜಾತ ಶಿಶುಗಳಿಗೆ ವರದಾನ : ಮಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಹ್ಯುಮನ್ ಮಿಲ್ಕ್ ಬ್ಯಾಂಕ್
(Bank Holidays January 2022 Remain Closed For 16 Days here is the list)