KFC : ಕೆಎಫ್​​ಸಿಯಲ್ಲಿ ಆರ್ಡರ್​ ಮಾಡೋ ಮುನ್ನ ಎಚ್ಚರ..! ನಿಮಗೂ ಆಗಬಹುದು ಇಂತಹ ಭಯಾನಕ ಅನುಭವ

ಕೆಂಟುಕಿ ಫ್ರೈಡ್ ಚಿಕನ್​ ಅಥವಾ ಕೆಎಫ್​ಸಿ(KFC) ಅಂದರೆ ನಾನ್​ ವೆಜ್​ ಪ್ರಿಯರ ಬಾಯಲ್ಲಂತೂ ನೀರೂರುತ್ತೆ. ಕೆಎಫ್​ಸಿ ನೀಡುವ ವಿಶಿಷ್ಟ ರುಚಿಯ ಚಿಕನ್​ ಪದಾರ್ಥಗಳು ವಿಶ್ವ ಮಟ್ಟದಲ್ಲಿ ಮನ್ನಣೆಯನ್ನು ಸಂಪಾದಿಸಿದೆ. ಇದೇ ಕಾರಣಕ್ಕೆ ಕೆಎಫ್​ಸಿ ವಿಶ್ವಾದ್ಯಂತ ಒಳ್ಳೆಯ ಹೆಸರನ್ನು ಸಂಪಾದಿಸಿದೆ. ಆದರೆ ಬ್ರಿಟನ್​ನಲ್ಲಿ ಕೆಎಫ್​​ಸಿ ಮಳಿಗೆಗೆ ಭೇಟಿ ನೀಡಿದ ಮಹಿಳೆಗೆ ಮಾತ್ರ ವಿಚಿತ್ರ ಅನುಭವವಾಗಿದೆ. ತಾವು ಆರ್ಡರ್​ ಮಾಡಿದ್ದ ಹಾಟ್​ ವಿಂಗ್ಸ್ ಮೀಲ್​​ನಲ್ಲಿದ್ದ ಕೋಳಿಯ ತಲೆಯನ್ನು ಕಂಡು ಶಾಕ್​ಗೆ ಒಳಗಾಗಿದ್ದಾರೆ.

ಗ್ಯಾಬ್ರಿಲ್ಲೆ ಎಂಬ ಹೆಸರಿನ ಮಹಿಳೆಯು ಕೋಳಿಯ ತಲೆಯ ಫೋಟೋವನ್ನು ಸೆರೆ ಹಿಡಿದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ರಿವ್ಯೂ ಬರೆದಿದ್ದಾರೆ. ಕೆಎಫ್​ಸಿಗೆ 2 ಸ್ಟಾರ್ ನೀಡಿರುವ ಗ್ಯಾಬ್ರಿಲ್ಲೆ ಪ್ರತಿಷ್ಠಿತ ಕೆಂಟುಕಿ ಫ್ರೈಡ್​ ಚಿಕನ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ರಿವ್ಯೂದ ಸ್ಕ್ರೀನ್​ಶಾಟ್​ ಇದೀಗ ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ರಿವ್ಯೂನಲ್ಲಿ ಮಹಿಳೆಯು, ನಾನು ಆರ್ಡರ್​ ಮಾಡಿದ್ದ ಹಾಟ್​ ವಿಂಗ್​ ಮೀಲ್​​ನಲ್ಲಿ ನನಗೆ ಕೋಳಿಯ ತಲೆ ಸಿಕ್ಕಿದೆ ಎಂದು ಬರೆದಿದ್ದಾರೆ. ಮಹಿಳೆ ಪೋಸ್ಟ್​ ಮಾಡಿರುವ ಫೋಟೋದಲ್ಲಿ ಕೋಳಿ ತಲೆ, ಕಣ್ಣು, ಕೊಕ್ಕು ಸ್ಪಷ್ಟವಾಗಿ ಗೋಚರವಾಗ್ತಿದೆ.

ಈ ಟ್ವೀಟ್​ನ್ನು ಡಿಸೆಂಬರ್​ 20ರಂದು ಪೋಸ್ಟ್​ ಮಾಡಲಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಕೆಎಫ್​ಸಿಗೆ ಭೇಟಿ ನೀಡಲು ಎರಡ್ಮೂರು ಬಾರಿ ಯೋಚಿಸುವಂತಾಗಿದೆ. ಫೋಟೋ ನೋಡಿದ ನೆಟ್ಟಿಗರೊಬ್ಬರು ಇದು ನಿಜಕ್ಕೂ ಅಸಹ್ಯವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಮತ್ತೊಬ್ಬರು ಚಿಕನ್​ ತಲೆಯನ್ನು ನೋಡಿದ ಬಳಿಕವೂ ಕೆಎಫ್​ಸಿಗೆ 2 ಸ್ಟಾರ್​ ನೀಡಿದ ಮಹಿಳೆ ಬಗ್ಗೆ ನನಗೆ ಆಶ್ಚರ್ಯ ಎನಿಸುತ್ತಿದೆ ಎಂದು ಬರೆದಿದ್ದಾರೆ.

ಈ ಟ್ವೀಟ್​ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದರೆ ವಿಚಾರ ಬ್ರಿಟನ್​​ನ ಕೆಎಫ್​ಸಿ ಕಚೇರಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಎಫ್​ಸಿ ಬ್ರಿಟನ್​ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಈ ಫೋಟೋ ನೋಡಿ ನಮಗೂ ಆಘಾತವಾಗಿದೆ. ನಾವು ಚಿಕನ್​ ಪೀಸುಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡುತ್ತೇವೆ. ಆದರೆ ಎಂತಹ ಅತ್ಯುತ್ತಮ ಯೋಜನೆ ಇದ್ದರೂ ಸಹ ಅಲ್ಲಲ್ಲಿ ಎಡವುದು ಸಾಮಾನ್ಯ. ಇದು ಕೂಡ ಅದೇ ರೀತಿಯ ಒಂದು ಪ್ರಕರಣವಾಗಿದೆ. ಇಂತಹದ್ದೊಂದು ಪದಾರ್ಥ ಸ್ವೀಕರಿಸಿದ ಬಳಿಕವೂ 2 ಸ್ಟಾರ್​ ನೀಡಿದ ಗ್ಯಾಬ್ರಿಲ್ಲೆ ಉದಾರತೆಗೆ ನಾವು ಆಭಾರಿಯಾಗಿದ್ದೇವೆ ಎಂದು ಟ್ವೀಟಾಯಿಸಿದ್ದಾರೆ.

ಇದನ್ನು ಓದಿ : CM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ

ಇದನ್ನೂ ಓದಿ : Good News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ

UK woman finds fried chicken head in her hot wings meal; KFC responds as picture goes viral

Comments are closed.