Yash Birthday : ರಾಕಿಂಗ್ ಸ್ಟಾರ್ ಬರ್ತಡೇಗೆ ಓಮೈಕ್ರಾನ್ ಅಡ್ಡಿ: ಫ್ಯಾನ್ಸ್ ಗೆ ಯಶ್ ಸಂದೇಶವೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಂದ್ರೇನೇ ಹಾಗೇ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನದ ಹೊಳೆಯೇ ಹರಿದುಬಿಡುತ್ತೆ.‌ ಲಕ್ಷಾಂತರ ಫ್ಯಾನ್ಸ್ ಹೊಂದಿರೋ ಯಶ್ ಹುಟ್ಟುಹಬ್ಬ ವಂತೂ (Yash Birthday) ಅದ್ದೂರಿಯಾಗಿ ಆಚರಿಸೋದು ಫ್ಯಾನ್ಸ್ ಗೆ ದೊಡ್ಡ ಸಂಭ್ರಮ. ಆದರೆ ಕಳೆದ ಎರಡು ವರ್ಷದಿಂದ ಈ ಖುಷಿಯನ್ನು ಕೊರೋನಾ ಅಭಿಮಾನಿಗಳಿಂದ ಕಸಿದುಕೊಂಡಿತ್ತು. ಈ ವರ್ಷ ಕೊರೋನಾ ಕಡಿಮೆ ಆಗಿರೋದರಿಂದ ಅದ್ದೂರಿಯಾಗಿ ಯಶ್ ಬರ್ತಡೇ ಆಚರಿಸೋ ಸಿದ್ಧತೆಯಲ್ಲಿದ್ದರು ಫ್ಯಾನ್ಸ್. ಆದರೆ ಈಗ ಆ ಖುಷಿಗೆ ಯಶ್ ಅಡ್ಡಗಾಲು ಹಾಕಿದ್ದಾರೆ.

ಹೌದು ಇದೇ ಬರುವ ಜನವರಿ 8 ರಂದು ಯಶ್ ಬರ್ತಡೇ ಇದೆ. ಈ ವರ್ಷ ಕರೋನಾ ಕಡಿಮೆಯಾಗಿದೆ. ಹೀಗಾಗಿ ಅದ್ದೂರಿಯಾಗಿ ಆಚರಿಸೋಣ ಅಂತ ಸಿದ್ಧತೆಯಲ್ಲಿದ್ದರು ಅಭಿಮಾನಿ ಗಳು. ಆದರೆ ಫ್ಯಾನ್ಸ್ ಸಂಭ್ರಮಕ್ಕೆ, ಉತ್ಸಾಹಕ್ಕೆ ಯಶ್ ತಣ್ಣೀರೆರೆಚಿದ್ದಾರೆ. ಹೌದು ಕಳೆದ ಎರಡು ವರ್ಷದಿಂದ ಕೊರೋನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದ ಯಶ್ ಈ ವರ್ಷವೂ ಹುಟ್ಟುಹಬ್ಬ ಆಚರಣೆ ಬೇಡ. ಇದೊಂದು ವರ್ಷ ಆಚರಿಸದೇ ಇರೋದು ಉತ್ತಮ ಅಂತ ನನಗೆ ಅನ್ನಿಸ್ತಿದೆ.

ಯಾಕಂದ್ರೇ ಈಗ ಸದ್ಯಕ್ಕೆ ಕೊರೋನಾ ಕಡಿಮೆಯಾಗಿದೆ. ಆದರೂ ಬೇರೆ ಬೇರೆ ರೀತಿಯ ವೈರಸ್ ಗಳು ಬರುತ್ತಿವೆ.‌ಹೀಗಾಗಿ ನಮ್ಮ ಹಾಗೂ ನಿಮ್ಮ ಎಲ್ಲರ ಹಿತದ ದೃಷ್ಟಿಯಿಂದ ಎಲ್ಲಿದ್ದಿರೋ ಅಲ್ಲಿಂದಲೇ ಹುಟ್ಟುಹಬ್ಬಕ್ಕೆ ಹಾರೈಸಿ ಎಂದು ಯಶ್ ಮನವಿ‌ಮಾಡಿದ್ದಾರೆ. ಯಶ್ ಈ ಹೇಳಿಕೆ ಈ ವರ್ಷ ವಾದರೂ ಯಶ್ ರನ್ನು ಮೀಟ್ ಮಾಡಿ ಶುಭಹಾರೈಸುವ ಕನಸಿನಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ತಂದಿದೆ.

ಇನ್ನು ಹಿಂದಿನ ವರ್ಷದ ಯಶ್ ಬರ್ತಡೇಗೆ ಕೆಜಿಎಫ್ -2 ಚಿತ್ರತಂಡ ಟೀಸರ್ ರಿಲೀಸ್ ಮಾಡಿ ಶುಭಹಾರೈಸಿತ್ತು. ಆ ಟೀಸರ್ ವೀಕ್ಷಣೆಯಲ್ಲಿ ಹಲವು ದಾಖಲೆ ಬರೆದಿತ್ತು. ಹೀಗಾಗಿ ಈ ವರ್ಷವೂ ಯಶ್ ಬರ್ತಡೇಗೆ ಕೆಜಿಎಫ್ -2 ತಂಡದಿಂದ ಟ್ರೇಲರ್ ಬಿಡುಗಡೆಯಾಗಬಹುದೆಂಬ ನೀರಿಕ್ಷೆ ಇತ್ತು. ಆದರೆ ಈ ನೀರಿಕ್ಷೆಯನ್ನು ಯಶ್ ಹುಸಿಗೊಳಿಸಿದ್ದಾರೆ. ನನ್ನ ಹುಟ್ಟುಹಬ್ಬ ಕ್ಕೆ ಟ್ರೇಲರ್ ರಿಲೀಸ್ ಮಾಡೋದು ಅನುಮಾನ. ಯಾಕಂದ್ರೇ ಹುಟ್ಟುಹಬ್ಬ ಕ್ಕೆ ಟ್ರೇಲರ್ ರಿಲೀಸ್ ಮಾಡಿದ್ರೇ,ಅಲ್ಲಿಂದ ಸಿನಿಮಾ‌ರಿಲೀಸ್ ಗೆ ಏಪ್ರಿಲ್ 14 ರ ತನಕ ಸುದೀರ್ಘ ಸಮಯವಿದೆ. ಹೀಗಾಗಿ ಟ್ರೇಲರ್ ರಿಲೀಸ್ ಮಾಡೋದು ಅನುಮಾನ ಎಂದಿದ್ದಾರೆ.

ಹೀಗಾಗಿ ಯಶ್ ಅಭಿಮಾನಿಗಳಿಗೆ ಸಾಲು ಸಾಲು ನಿರಾಸೆ ಎದುರಾಗಿದ್ದು, ನೆಚ್ಚಿನ ನಟನ ಬರ್ತಡೆನೂ ಇಲ್ಲ, ಕೆಜಿಎಫ್ 2 ಟ್ರೇಲರ್ ಕೂಡ ಇಲ್ಲ ಎಂಬ ಸುದ್ದಿ ಕೇಳಿ ಬೇಸರಗೊಂಡಿ ದ್ದಾರೆ. ಆದರೆ ಯಶ್ ಮಾತ್ರ ನನಗೆ ನಿಮ್ಮ ಸುರಕ್ಷತೆನೂ ಮುಖ್ಯ ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ, ಅದ್ದೂರಿ ಆಚರಣೆ ಬೇಡ ಅಂತ ಮನವಿ ಮಾಡಿ ಅಭಿಮಾನಿಗಳ ಮನವೊಲಿಸೋ ಸರ್ಕಸ್ ನಡೆಸಿದ್ದಾರೆ.

ಇದನ್ನೂ ಓದಿ :‌ ಡೈರೈಕ್ಟರ್ ಕ್ಯಾಪ್ ತೊಡ್ತಾರಾ ರಾಕಿಂಗ್ ಸ್ಟಾರ್ : ಯಶ್ ಹೇಳಿದ್ದೇನು ಗೊತ್ತಾ ?!

ಇದನ್ನೂ ಓದಿ : ಯುಟ್ಯೂಬ್​ನಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್​ ಸಿನಿಮಾ ಟ್ರೇಲರ್​..!

(Omicron disruption to Rocking Star Yash Birthday: Fans know Yash’s message)

Comments are closed.