Bank Holidays January 2023 : ಬ್ಯಾಂಕ್‌ ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

ನವದೆಹಲಿ : ಹೊಸವರ್ಷಾಚರಣೆಯನ್ನು ಸ್ವಾಗತಿಸಲು ವಿಶ್ವವೇ ಸಜ್ಜಾಗಿ ನಿಂತಿದೆ. ಭಾರತೀಯರು ಹೊಸ ವರ್ಷಕ್ಕೆ 2023ರ ಕ್ಯಾಲೆಂಡರ್‌ನ್ನು (Bank Holidays January 2023) ಖರೀದಿಸಲು ಸಜ್ಜಾಗಿದ್ದಾರೆ. 2022 ಮುಗಿಯಲು ಇನ್ನೂ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ ಹೊಸ ವರ್ಷದ ಆರಂಭದಲ್ಲಿಯೇ ಸಾಲು ಸಾಲು ರಜೆಗಳು ಎದುರಾಗಿದೆ. ಬ್ಯಾಂಕುಗಳ ರಜಾಪಟ್ಟಿ ಬಿಡುಗಡೆಯಾಗಿದ್ದು, ಜನವರಿ ತಿಂಗಳಿನಲ್ಲಿ ಬರೋಬ್ಬರಿ ಹದಿನಾಲ್ಕು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಗ್ರಾಹಕರು ರಜಾದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕ್ ವ್ಯವಹಾರ ನಡೆಸಬೇಕಾಗಿದೆ.

ಹೊಸ ವರ್ಷ 2023ಕ್ಕೆ ಇನ್ನೂ ಕೆಲವೇ ದಿನಗಳು ಇದೆ.ಆರ್‌ಬಿಐ (RBI) ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ. 14 ದಿನಗಳ ರಜೆಯ ಹೊರತಾಗಿಯೂ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ. ಹಾಗಾಗಿ ಬ್ಯಾಂಕ್‌ ವ್ಯವಹಾರಕ್ಕೆ ಗ್ರಾಹಕರು ತೆರಳುವ ಮುನ್ನ ಈ ಕೆಳಗಿನ ರಜಾದಿನಗಳ ಮೇಲೆ ಗಮನಹರಿಸಬೇಕಾಗಿದೆ.

ಜನವರಿ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ :
ಜನವರಿ 1 (ಭಾನುವಾರ) : ಹೊಸ ವರ್ಷದ ಬ್ಯಾಂಕ್ ರಜೆ ಮತ್ತು ಭಾನುವಾರ ಬ್ಯಾಂಕ್ ರಜೆ
ಜನವರಿ 2 (ಸೋಮವಾರ) : ಹೊಸ ವರ್ಷದ ಬ್ಯಾಂಕ್ ಆಚರಣೆ – ಮಿಜೋರಾಂ
ಜನವರಿ 5 (ಗುರುವಾರ) : ಗುರು ಗೋಬಿಂದ್ ಸಿಂಗ್ ಜಯಂತಿ – ಹರಿಯಾಣ ಮತ್ತು ರಾಜಸ್ಥಾನ
ಜನವರಿ 8 (ಭಾನುವಾರ ): ಭಾನುವಾರ ಬ್ಯಾಂಕ್ ರಜೆ
ಜನವರಿ 11 (ಬುಧವಾರ ): ಮಿಷನರಿ ಡೇ – ಮಿಜೋರಾಂ
ಜನವರಿ 14 (ಶನಿವಾರ) : ಎರಡನೇ ಶನಿವಾರ ಬ್ಯಾಂಕ್ ರಜೆ
ಜನವರಿ 15 (ಭಾನುವಾರ) : ಭಾನುವಾರ ಬ್ಯಾಂಕ್ ರಜೆ
ಜನವರಿ 22 (ಭಾನುವಾರ) : ಭಾನುವಾರ ಬ್ಯಾಂಕ್ ರಜೆ
ಜನವರಿ 23 (ಸೋಮವಾರ) : ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ – ತ್ರಿಪುರ ಮತ್ತು ಪಶ್ಚಿಮ ಬಂಗಾಳ
ಜನವರಿ 25 (ಬುಧವಾರ) : ರಾಜ್ಯ ದಿನ – ಹಿಮಾಚಲ ಪ್ರದೇಶ
ಜನವರಿ 26 (ಗುರುವಾರ) : ಗಣರಾಜ್ಯೋತ್ಸವ
ಜನವರಿ 28 (ಶನಿವಾರ) : ನಾಲ್ಕನೇ ಶನಿವಾರ ಬ್ಯಾಂಕ್ ರಜೆ
ಜನವರಿ 29 (ಭಾನುವಾರ) : ವಾರಾಂತ್ಯದ ಬ್ಯಾಂಕ್ ರಜೆ
ಜನವರಿ 31 (ಸೋಮವಾರ) : ಮಿ-ಡ್ಯಾಮ್-ಮಿ-ಫೈ – ಅಸ್ಸಾಂ

ಇದನ್ನೂ ಓದಿ : Bank Holidays In December 2022 : ಡಿಸೆಂಬರ್‌ 2022ನಲ್ಲಿ ಒಟ್ಟು 14 ದಿನ ಬ್ಯಾಂಕ್‌ ರಜೆ; ಕರ್ನಾಟಕದಲ್ಲಿ 6 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : Metro AG : 19 ವರ್ಷದ ಬಳಿಕ ಭಾರತದ ಮಾರುಕಟ್ಟೆ ತೊರೆಯಲಿದೆ ಮೆಟ್ರೋ ಎಜಿ : ಕಾರಣವೇನು ಗೊತ್ತಾ ?

ಇದನ್ನೂ ಓದಿ : LPG Cylinders Just rs 500 : ಕೇವಲ 500 ರೂ. ಇಳಿಕೆಯಾಗಲಿದೆ ಎಲ್‌ಪಿಜಿ ಸಿಲಿಂಡರ್‌ !

ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜಾದಿನಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನ ಎಂದು ವರ್ಗಿಕರಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದರೆ, ಕೆಲವು ಬ್ಯಾಂಕ್‌ಗಳು ಪ್ರಾದೇಶಿಕ ಹಬ್ಬಗಳು ಮತ್ತು ರಜಾದಿನಗಳನ್ನು ಒಳಗೊಂಡಿರುತ್ತದೆ. ಅದರ ಜೊತೆಯಲಿ ಪ್ರಾದೇಶಿಕ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲ್ಪಡುತ್ತದೆ.

Bank Holidays January 2023: Bank customers note: 14 days bank holiday in the month of January

Comments are closed.