Newsnext special: Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

ಬೆಂಗಳೂರು:(Manish Pandey IPL 2023 ) ಐಪಿಎಲ್’ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಆಟಗಾರ, ಸ್ಫೋಟಕ ಹೊಡೆತಗಳಿಗೆ ಹೆಸರಾಗಿದ್ದ ಬ್ಯಾಟರ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮನೀಶ್ ಪಾಂಡೆ ಐಪಿಎಲ್’ನಲ್ಲಿ ಹೊಸ ಪ್ರಯಾಣದ ನಿರೀಕ್ಷೆಯಲ್ಲಿದ್ದಾರೆ. ಮನೀಶ್ ಪಾಂಡೆ ಅಂದ್ರೆ 2009ರ ಐಪಿಎಲ್’ನ ಆ ಶತಕ ನೆನಪಿಗೆ ಬರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಮನೀಶ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಮನೀಶ್ ಕೇವಲ 73 ಎಸೆತಗಳಲ್ಲಿ ಸಿಡಿಲಬ್ಬರದ 114 ರನ್ ಗಳಿಸಿ ಐಪಿಎಲ್’ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರನೆಂದ ದಾಖಲೆ ಬರೆದಿದ್ದರು. ಆಗ ಮನೀಶ್ ಪಾಂಡೆಗೆ ಕೇವಲ 19 ವರ್ಷ.

ಅದ್ಭುತ ಪ್ರತಿಭಾವಂತ ಆಟಗಾರನಾಗಿದ್ದ ಮನೀಶ್ ಪಾಂಡೆ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಮೂಲಕ ತಮ್ಮ ಐಪಿಎಲ್ ಪ್ರಯಾಣ ಶುರು ಮಾಡಿದ್ದರು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಹರಾ ವಾರಿಯರ್ಸ್ ಇಂಡಿಯಾ, ಕೋಲ್ಕತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರಿದಂತೆ ಐಪಿಎಲ್’ನಲ್ಲಿ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2014ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಸ್ಫೋಟಕ 94 ರನ್ ಸಿಡಿಸಿದ್ದ ಮನೀಶ್ ಪಾಂಡೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಳೆದ ಸಾಲಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಮನೀಶ್ ಪಾಂಡೆ ಅವರನ್ನು ಲಕ್ನೋ ಫ್ರಾಂಚೈಸಿ ರಿಲೀಸ್ ಮಾಡಿದ್ದು, ಪಾಂಡೆ ಹೊಸ ತಂಡ ಸೇರುವ ನಿರೀಕ್ಷೆಯಲ್ಲಿದ್ದಾರೆ. 2008ರಿಂದ 2022ರವರೆಗೆ ಐಪಿಎಲ್’ನಲ್ಲಿ ಒಟ್ಟು 160 ಪಂದ್ಯಗಳನ್ನಾಡಿದ್ದು, 29.90ರ ಸರಾಸರಿಯಲ್ಲಿ 121.52ರ ಸ್ಟ್ರೈಕ್’ರೇಟ್’ನೊಂದಿಗೆ ಒಂದು ಶತಕ ಹಾಗೂ 21 ಅರ್ಧಶತಕಗಳ ಸಹಿತ 3648 ರನ್ ಗಳಿಸಿದ್ದಾರೆ.

Manish Pandey IPL 2023 : ಐಪಿಎಲ್’ನಲ್ಲಿ ಮನೀಶ್ ಪಾಂಡೆ ಪ್ರತಿನಿಧಿಸಿದ ತಂಡಗಳು:

2008: ಮುಂಬೈ ಇಂಡಿಯನ್ಸ್
2009-10: ರಾಯಲ್ ಚಾಲೆಂಜರ್ಸ್ ಬೆಂಗಳೂರು
2011-13: ಪುಣೆ ವಾರಿಯರ್ಸ್ ಇಂಡಿಯಾ
2014-17: ಕೋಲ್ಕತಾ ನೈಟ್ ರೈಡರ್ಸ್
2018-21: ಸನ್ ರೈಸರ್ಸ್ ಹೈದರಾಬಾದ್
2002: ಲಕ್ನೋ ಸೂಪರ್ ಜೈಂಟ್ಸ್

ಐಪಿಎಲ್‌ನಲ್ಲಿ ಮನೀಶ್ ಪಾಂಡೆ ಸಾಧನೆ
ಪಂದ್ಯ: 160
ರನ್: 3648
ಸರಾಸರಿ: 29.90
ಸ್ಟ್ರೈಕ್’ರೇಟ್: 121.52
100/50: 01/21

ಇದನ್ನೂ ಓದಿ : Karnataka star to captain Sunrisers IPL: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕನ್ನಡಿಗ ನಾಯಕ ?

ಇದನ್ನೂ ಓದಿ : Sachin Tendulkar Fans: ವಿಮಾನವೇರಿದ ಸಚಿನ್ ತೆಂಡೂಲ್ಕರ್‌ಗೆ ಕಾದಿದ್ದು ಅಚ್ಚರಿ.. ಕಾರಣವೇನು ಗೊತ್ತೇ?

Manish Pandey the Indian who scored the first century in IPL 2023 whose share will it be

Comments are closed.