Bank Holidays March 2022: ಗ್ರಾಹಕರೇ ಗಮನಿಸಿ; ಮಾರ್ಚ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 13 ರಜಾದಿನ

ಮಾರ್ಚ್ 2022 ರಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು, ದೇಶದ ಹಲವು ಬ್ಯಾಂಕ್‌ಗಳ ಶಾಖೆಗಳು ಮುಚ್ಚಲ್ಪಡುವ (Bank Holidays March 2022) ಪ್ರಮುಖ ದಿನಗಳನ್ನು ನೀವು ಗಮನಿಸಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾರ್ಚ್ 2022 ರಲ್ಲಿ ಹಲವು ದಿನಗಳಂದು ಬ್ಯಾಂಕ್‌ಗಳಿಗೆ ರಜೆ ಘೋಷಿಸಿದೆ. ಆದರೂ ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಮಾರ್ಚ್ ತಿಂಗಳಲ್ಲಿ  ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇವುಗಳಲ್ಲಿ 7 ದಿನಗಳ ರಜೆಯನ್ನು ಬಿಟ್ಟು ಉಳಿದ ದಿನಗಳು  ವಾರಾಂತ್ಯದ ರಜಾದಿನಗಳಾಗಿವೆ. ಆದರೆ ಈ ಎಲ್ಲ ಹದಿಮೂರು ದಿನಗಳಂದು ಎಲ್ಲಾ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ಉದಾಹರಣೆಗೆ ಬಿಹಾರದಲ್ಲಿ ಬಿಹಾರ ದಿವಸ್‌ ಆಚರಣೆಗಾಗಿ ಬ್ಯಾಂಕ್ ಶಾಖೆಗಳನ್ನು ಮುಚ್ಚಬಹುದು ಆದರೆ ಅಸ್ಸಾಂನಲ್ಲಿ ಅದೇ ಹಬ್ಬಕ್ಕೆ ಬ್ಯಾಂಕ್ ಶಾಖೆಗಳನ್ನು ಮುಚ್ಚಲಾಗುವುದಿಲ್ಲ.

ಮಾರ್ಚ್ 1 – ಮಹಾ ಶಿವರಾತ್ರಿ

ಲೋಸರ್: ಮಾರ್ಚ್ 3

ಚಾಪ್ಚಾರ್ ಕುಟ್: ಮಾರ್ಚ್ 4

ಹೋಳಿ: ಮಾರ್ಚ್ 17

ಹೋಳಿ 2ನೇ ದಿನ – ಧೂಲೇಟಿ/ಡೋಲ್ಜಾತ್ರಾ: ಮಾರ್ಚ್ 18

ಹೋಳಿ/ಯೋಸಾಂಗ್ 2ನೇ ದಿನ: ಮಾರ್ಚ್ 19

ಬಿಹಾರ ದಿವಸ್: ಮಾರ್ಚ್ 22

ಭಾನುವಾರ: ಮಾರ್ಚ್ 6

ಎರಡನೇ ಶನಿವಾರ: ಮಾರ್ಚ್ 12

ಭಾನುವಾರ: ಮಾರ್ಚ್ 13

ಭಾನುವಾರ: ಮಾರ್ಚ್ 20

ನಾಲ್ಕನೇ ಶನಿವಾರ: ಮಾರ್ಚ್ 26

ಭಾನುವಾರ: ಮಾರ್ಚ್ 27

ಈ ಎಲ್ಲ ರಜಾದಿನಗಳೂ ದೇಶದ ಎಲ್ಲ ರಾಜ್ಯಗಳಲ್ಲೂ ಅನ್ವಯವಾಗುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಕೆಲವು ರಜೆಗಳು ಅನ್ವಯವಾಗುತ್ತವೆ. ಎಲ್ಲ ಬ್ಯಾಂಕ್‌ಗಳು ವಿವಿಧ ರಾಜ್ಯಗಳಲ್ಲಿ ಅನುಸರಿಸುವುದಿಲ್ಲ. ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಆಚರಿಸಲ್ಪಡುತ್ತವೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

ಇದನ್ನೂ ಓದಿ: How be sexy hot?: ಸರಳವಾಗಿ ಸುಂದರ ಮತ್ತು ಮಾದಕವಾಗಿ ಕಾಣುವುದು ಹೇಗೆ?

(Bank Holidays March 2022 13 holidays for banks)

Comments are closed.