Russia vs Ukraine War: ಯುದ್ಧದ ವೇಳೆ ರಷ್ಯಾಕ್ಕೆ ಭೇಟಿ ಕೊಟ್ಟದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ರೋಮಾಂಚನ ನೀಡಿದೆಯಂತೆ!

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು (Pakistan PM Imran Khan) ರಷ್ಯಾ ಉಕ್ರೇನ್ ಯುದ್ಧದ (Russia vs Ukraine War) ನಡುವೆಯೇ ರಷ್ಯಾದ ರಾಜಧಾನಿ ಮಾಸ್ಕೋಗೆ (Moscow) ಭೇಟಿ ನೀಡಿದ್ದಾರೆ. ಇಂಡಿಯಾ ಟುಡೆ ವರದಿಯ ಪ್ರಕಾರ ನಾನು ಎಷ್ಟು ರೋಮಾಂಚನಕಾರಿ ಸಮಯದಲ್ಲಿ ರಷ್ಯಾಕ್ಕೆ ಬಂದಿದ್ದೇನೆ, ನನಗೆ ತುಂಬಾ ಉತ್ಸಾಹ ಉಕ್ಕುತ್ತಿದೆ!” ಎಂದು ಪಾಕ್ ಪ್ರಧಾನಿ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದನ್ನು ತಮ್ಮ ರಷ್ಯಾ ಭೇಟಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ನಡುವೆಯೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಷ್ಯಾ ಭೇಟಿ ಹಾಸ್ಯಕ್ಕೆ ಕಾರಣವಾಗಿದೆ. ಬುಧವಾರ, ಫೆಬ್ರುವರಿ 23ರಂದು ಸಂಜೆ ಮಾಸ್ಕೋದಲ್ಲಿ ರಷ್ಯಾದ ಸರ್ಕಾರದ ಸಚಿವ ಸಂಪುಟದ ಕೆಲವು ಸಚಿವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬರಮಾಡಿಕೊಂಡಿದ್ದಾರೆ.

ಇಮ್ರಾನ್ ಖಾನ್ ಅವರೊಂದಿಗೆ ಪಾಕಿಸ್ತಾನದ ಸಚಿವ ಸಂಪುಟದ ಮಂತ್ರಿಗಳಾದ ಶಾ ಮಹಮೂದ್ ಖುರೇಷಿ, ಚೌಧರಿ ಫವಾದ್ ಹುಸೇನ್, ಅಸದ್ ಉಮರ್, ಹಮ್ಮದ್ ಅಜರ್, ಅಬ್ದುರ್ ರಜಾಕ್ ದಾವೂದ್, ಮೊಯೀದ್ ಯೂಸುಫ್ ಮತ್ತು ಅಮೀರ್ ಮಹಮೂದ್ ಕಿಯಾನಿ ಮತ್ತು ವಾಣಿಜ್ಯ ಸಲಹೆಗಾರ ಅಬ್ದುರ್ ರಜಾಕ್ ದಾವೂದ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಮೂಯೆದ್, ಯೂಸುಫ್, ಮತ್ತು ವಾಣಿಜ್ಯ ಸಲಹೆಗಾರ ಅಬ್ದುರ್ ರಝಾ ಅವರನ್ನೊಳಗೊಂಡ ನಿಯೋಗವೂ ಸಹ ರಷ್ಯಾದ ಮಾಸ್ಕೋಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಇಮ್ರಾನ್ ಖಾನ್ ಅವರ ಭೇಟಿಯು ರಷ್ಯಾ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸುವ ಉದ್ದೇಶ ಹೊಂದಿದ್ದು, ರಷ್ಯಾ ವಿದೇಶಾಂಗ ಕಚೇರಿಯ ಪ್ರಕಾರ ಉಭಯ ನಾಯಕರು ಶೃಂಗಸಭೆಯ ಸಮಯದಲ್ಲಿ ಇಂಧನ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಶ್ರೇಣಿಯ ಬಗ್ಗೆ ಚರ್ಚಿಸಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬೆಲ್ಟ್ ಮತ್ತು ರಸ್ತೆ ನಿರ್ಮಾಣ ಕೇಂದ್ರಬಿಂದುವಾಗಿ ಪಾಕಿಸ್ತಾನವು ಬೀಜಿಂಗ್‌ಗೆ ಹತ್ತಿರವಾಗಿರುವುದರಿಂದ ಈ ಭೇಟಿಗೆ ಮಹತ್ವ ಬಂದಿದೆ. ಅಲ್ಲದೇ ಇದೀಗ ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತವಾಗಿ ಘೋಷಿಸಿರುವುದು ಈ ಭೇಟಿಯ ಬೆನ್ನಲ್ಲೆ ಜರುಗಿದೆ.

ಉಕ್ರೇನ್ ಎಂದೆಂದಿಗೂ ಶಾಂತಿಯನ್ನೇ ಬಯಸುತ್ತದೆ. ಆದರೆ ರಷ್ಯಾದ ಯಾವುದೇ ಆಕ್ರಮಣದ (Russia Ukraine War) ವಿರುದ್ಧ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂದು ಉಕ್ರೇನ್ ಅಧ್ಯಕ್ಷರ ವೊಲೊಡೈಮೈರ್ ಝಲೆನ್ಸ್ಕಿ ಎಚ್ಚರಿಸಿದ್ದಾರೆ. ಅಲ್ಲದೇ ಅವರು ಉಕ್ರೇನ್ ದೇಶದ ನಾಗರಿಕರನ್ನು ಉದ್ದೇಶಿಸಿ ಮಾಡಿರುವ ಭಾವನಾತ್ಮಕ ಭಾಷಣದಲ್ಲಿ (Ukrainian President Volodymyr Zelenskyy’s Emotional Speech) ದೇಶದ ಕುರಿತು ಸ್ವಾಭಿಮಾನವನ್ನು ಬಡಿದೆಬ್ಬಿಸುವ ಮಾತುಗಳನ್ನು ಆಡಿದ್ದು ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈನಡುವೆ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ (Russia Ukraine War Share Market)ಕಂಡುಬಂದಿದ್ದು ತೈಲ ಬೆಲೆಯಲ್ಲಿ (Oil Price Hike) ಗಣನೀಯ ಏರಿಕೆಯಾಗುತ್ತಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Russia vs Ukraine War Pak PM Imran Khan Visit Moscow)

Comments are closed.