ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿ ದರ ಹೆಚ್ಚಳ

ನವದೆಹಲಿ : ಬ್ಯಾಂಕ್‌ಗಳು ಗ್ರಾಹಕರನ್ನು ಆಕರ್ಷಿಸಲು ಇತ್ತೀಚೆಗೆ ವಿವಿಧ ರೀತಿಯ ಎಫ್‌ಡಿ (Bank of Baroda FD Rate) ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ಬ್ಯಾಂಕ್ ಆಫ್ ಬರೋಡಾ ತನ್ನ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು 2 ಕೋಟಿ ರೂ.ವರೆಗೆ ಹೆಚ್ಚಿಸಿದೆ. ಸದ್ಯ ಈ ಬದಲಾವಣೆಯ ನಂತರ, ಸಾಮಾನ್ಯ ಜನರಿಗೆ ಎಫ್‌ಡಿ ಬಡ್ಡಿ ದರಗಳು ಶೇಕಡಾ 7.25 ಕ್ಕೆ ಏರಿಕೆಗೊಳ್ಳಬಹುದು. ಸದ್ಯ ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದು, ಗ್ರಾಹಕರು ಹೊಸ ಎಫ್‌ಡಿ ದರಗಳಿಗಾಗಿ ಇಲ್ಲಿ ಪರಿಶೀಲಿಸಬಹುದಾಗಿದೆ.

ಹಿರಿಯ ನಾಗರಿಕರು ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ಥಿರ ಠೇವಣಿಗಳ ಮೇಲೆ ಶೇಕಡಾ 7.75 ವರೆಗೆ ಗಳಿಸಬಹುದು. ಸ್ಥಿರ ಠೇವಣಿಗಳ ಮೇಲಿನ ಪರಿಷ್ಕೃತ ಬಡ್ಡಿದರಗಳು ಮೇ 12, 2023 ರಿಂದ ಜಾರಿಗೆ ಬರುತ್ತವೆ. ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್), ಇತ್ತೀಚೆಗೆ ನಿಗದಿತ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಆಯ್ದ ಟೆನರ್‌ಗಳ ಮೇಲೆ 30 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸುವುದಾಗಿ ಘೋಷಿಸಿತು.

ಈ ದರಗಳು ರೂ 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಅನ್ವಯವಾಗುತ್ತವೆ, ಮೇ 12, 2023 ರಿಂದ ಜಾರಿಗೆ ಬರುತ್ತವೆ. ಬರೋಡಾ ತಿರಂಗಾ ಪ್ಲಸ್ ಠೇವಣಿ ಯೋಜನೆಯಲ್ಲಿ ಬಡ್ಡಿದರಗಳನ್ನು ಸಹ ಹೆಚ್ಚಿಸಲಾಗಿದೆ. 399 ದಿನದ ಬರೋಡಾ ತಿರಂಗಾ ಪ್ಲಸ್ ಠೇವಣಿ ಯೋಜನೆಯು ಈಗ ಶೇ. 7.90 p.a. ವರೆಗೆ ಇದರಲ್ಲಿ ಶೇ. 0.50 p.a. ಹಿರಿಯ ನಾಗರಿಕರಿಗೆ ಮತ್ತು ಶೇ. 0.15ರಷ್ಟು ಕರೆ ಮಾಡಲಾಗದ ಠೇವಣಿಗಳಿಗೆ ಬಡ್ಡಿದರಗಳನ್ನು ನೀಡುತ್ತದೆ. ಇತ್ತೀಚಿನ ಹೆಚ್ಚಳದ ನಂತರ, ಬ್ಯಾಂಕ್ ಆಫ್ ಬರೋಡಾ ಸಾಮಾನ್ಯ ಗ್ರಾಹಕರಿಗೆ ಶೇ. 3 ರಿಂದ ಶೇ. 7.25 ವರೆಗೆ ಮತ್ತು ವೃದ್ಧರಿಗೆ ಶೇ. 3.5 ರಿಂದ ಶೇ. 7.75 ವರೆಗೆ ಬಡ್ಡಿದರವನ್ನು ನೀಡುತ್ತದೆ.

ಇದನ್ನೂ ಓದಿ : ರಾಜ್ಯ ಸರಕಾರಿ ನೌಕರರು, ಪಿಂಚಣಿದಾರರಿಗೆ ಶೇ.4 ರಷ್ಟು ಡಿಎ ಹೆಚ್ಚಿಸಿದ ಸರಕಾರ

ಇದನ್ನೂ ಓದಿ : ಚಿನಿವಾರ ಪೇಟೆಯಲ್ಲಿ ತುಸು ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ ಏರಿಕೆ

ಎಸ್‌ಬಿಐ ಸ್ಥಿರ ಠೇವಣಿ ಅಥವಾ ಎಫ್‌ಡಿ ಬಡ್ಡಿ ದರಗಳ ವಿವರ:
7 ದಿನಗಳಿಂದ 10 ವರ್ಷಗಳ ನಡುವಿನ ಎಸ್‌ಬಿಐ ಎಫ್‌ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ. 3 ರಿಂದ ಶೇ. 7.1 ವರೆಗೆ ನೀಡುತ್ತದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಬಡ್ಡಿ ದರವು 6.8 ಶೇಕಡಾ ರಷ್ಟು ಬಡ್ಡಿದರೆ ನೀಡಿದರೆ, ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಎಸ್‌ಬಿಐನ ಬಡ್ಡಿ ದರವು ಶೇಕಡಾ 7 ಆಗಿದೆ. ಈ ದರಗಳು 15 ಫೆಬ್ರವರಿ 2023 ರಿಂದ ಜಾರಿಗೆ ಬರುತ್ತವೆ.

Bank of Baroda FD Rate : Bank of Baroda FD Interest Rate Increase

Comments are closed.