Bank Of India : ಮನೆ ನಿರ್ಮಾಣದ ಕನಸು ಕಾಣುತ್ತಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ಮನೆ ಖರೀದಿ ಅಥವಾ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಮನೆ ಖರೀದಿ ಅಥವಾ ನಿರ್ಮಾಣದ ಮೊದಲು ಬ್ಯಾಂಕ್‌ ಸಾಲ (Bank Of India)ಪಡೆಯುವ ಪ್ರತಿಯೊಬ್ಬ ಗ್ರಾಹಕರು ಬ್ಯಾಂಕ್‌ನ ಬಡ್ಡಿದರವನ್ನು ಪರಿಶೀಲಿಸಬೇಕಾಗುತ್ತದೆ. ಇದೀಗ ಬ್ಯಾಂಕ್‌ ಆಫ್‌ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿರುತ್ತದೆ. ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸ್ಟಾರ್‌ ಹೋಮ್‌ ಲೋನ್‌ನ್ನು ವರ್ಷಕ್ಕೆ ಶೇ.8.30 ಪ್ರತಿಶತ ದರದಲ್ಲಿ ಪಡೆಯಬಹುದಾಗಿದೆ.

ಮನೆ ಕಟ್ಟುವ ಅಥವಾ ಮನೆ ಖರೀದಿಗೆ ತಯಾರಿರುವ ಗ್ರಾಹಕರು ಇತರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಚಾಲನೆಯಲ್ಲಿರುವ ತಮ್ಮ ಗೃಹ ಸಾಲಗಳನ್ನು ಬ್ಯಾಂಕ್‌ ಆಫ್‌ ಇಂಡಿಯಾಗೆ ವರ್ಗಾಹಿಸಬಹುದಾಗಿದೆ. ಈ ಬ್ಯಾಂಕ್‌ ಮೂಲಕ ಗೃಹ ಸಾಲಕ್ಕೆ ಸಲ್ಲಿಸುವವರು ಓವರ್‌ಡ್ರಾಫ್ಟ್‌ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೇ ಕಡಿಮೆ ಬಡ್ಡಿದರಗಳು, ಸುಲಭ ಲಿಕ್ವಿಡಿಟಿ ಮತ್ತು ತೆರಿಗೆ ವಿನಾಯಿತಿಯಂತಹ ಪ್ರಯೋಜನಗಳ ಲಾಭವನ್ನು ಕೂಡ ಪಡೆಯಬಹುದಾಗಿದೆ ಎಂದು ಬ್ಯಾಂಕ್‌ ಹೇಳಿದೆ. ಮನೆ ನಿರ್ಮಿಸಲು, ಪ್ಲಾಟ್‌ ಖರೀದಿಸಲು, ಹೊಸ ಅಥವಾ ಹಳೆಯ ಫ್ಲಾಟ್‌ ಖರೀದಿಸಲು, ನವೀಕರಣ ಅಥವಾ ದುರಸ್ತಿಗಾಗಿ ಬ್ಯಾಂಕ್‌ನ ಈ ಆಫರ್‌ಗಳನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ. ಬ್ಯಾಂಕ್‌ ಆಫ್‌ ಇಂಡಿಯಾ ಸ್ಟಾರ್‌ ಹೋಮ್‌ ಲೋನ್‌ ಸಾಲದ ಮರುಪಾವತಿಗಾಗಿ 30 ವರ್ಷಗಳ ಅವಧಿಯನ್ನು ನೀಡುತ್ತಿದೆ.

ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕರಿಗೆ ಲಭ್ಯವಾಗುವ ಪ್ರಯೋಜನಗಳು :
ವಿವಿಧ ಅವಧಿಗಳಲ್ಲಿ EMI ಪಾವತಿಸಲು ಹಲವು ಆಯ್ಕೆಗಳಿರುತ್ತದೆ. ಇದರಿಂದಾಗಿ ಗ್ರಾಹಕರು ಹೆಚ್ಚಿನ ಒತ್ತಡಕ್ಕೆ ಒಳಾಗುವುದಿಲ್ಲ. ಇದಕ್ಕಾಗಿ ಯಾವುದೇ ಪೂರ್ವ ಪಾವತಿ ಅಥವಾ ಭಾಗಶಃ ಪಾವತಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಇದಲ್ಲದೇ ಪಾವತಿಸಿದ ಬಡ್ಡಿ ಮತ್ತು ಕಂತುಗಳ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ನೀಡಲಾಗುತ್ತದೆ. ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಇರುವುದಿಲ್ಲ. ಪ್ರತಿದಿನ ಬಡ್ಡಿಯನ್ನು ಲೆಕ್ಕ ಹಾಕುವುದರಿಂದ ಕಡಿಮೆ ಬಡ್ಡಿಯನ್ನು ಪಾವತಿಸಿದಂತಾಗುತ್ತದೆ. ಅಷ್ಟೇ ಅಲ್ಲದೇ ಬ್ಯಾಂಕ್‌ ಆಫ್‌ ಇಂಡಿಯಾ ಪೀಠೋಪಕರಣಕ್ಕೆ ಸಾಲ ಮತ್ತು ಟಾಪ್‌ ಆಪ್‌ ಸೌಲಭ್ಯವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ : Bank Holiday : ಬ್ಯಾಂಕ್‌ ಕೆಲಸವಿದ್ದರೆ ಇವತ್ತೆ ಮುಗಿಸಿಕೊಳ್ಳಿ, ನಾಳೆಯಿಂದ 4 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : Reliance Industries : ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್‌ ನೇಮಕ

ಇದನ್ನೂ ಓದಿ : Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು ಬಡ್ಡಿದರ ನೀಡುತ್ತದೆ ಗೊತ್ತಾ

ಸಾಲ ದರ ಹೆಚ್ಚಿಸಿದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ :
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಆಯ್ದ ಅವಧಿಯ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿರುತ್ತದೆ. ಒಂದು ವರ್ಷ ಅವಧಿಯ ಎಂಸಿಎಲ್‌ಆರ್‌ನ್ನು ಶೇಕಡಾ 7.80ರಿಂದ ಶೇಕಡಾ 7.90ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಬುಧವಾರ ತಿಳಿಸಿದೆ. ವಾಹನ, ವೈಯಕ್ತಿಕ ಮತ್ತು ಗೃಹ ಸಾಲಗಳ ಮೇಲೆ ಅದೇ ಬಡ್ಡಿಯನ್ನು ವಿಧಿಸಲಾಗುತ್ತದೆ. ಬ್ಯಾಂಕ್‌ ಪ್ರಕಾರ ಪರಿಷ್ಕೃತ MCLR ನವೆಂಬರ್‌ 7, 2022ರಿಂದ ಜಾರಿಗೆ ಬಂದಿರುತ್ತದೆ. ಒಂದು ತಿಂಗಳ ಅವಧಿಯ MCLRನ್ನು0.05 ಪಾಯಿಂಟ್‌ಗಳಿಂದ 7.50ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಇದರ ಹೊರತಾಗಿ, ಒಂದು ದಿನ, ಮೂರು ಮತ್ತು ಆರು ತಿಂಗಳ ಅವಧಿಯ ಸಾಲಗಳ ಬಡ್ಡಿದರಗಳು ಬದಲಾಗಿರುವುದಿಲ್ಲ.

Bank Of India : Here is good news for those who are dreaming of building a house

Comments are closed.