Green Tea:ಮುಖದ ಕಾಂತಿ ಅರಳಿಸುತ್ತೆ ಗ್ರೀನ್‌ ಟಿ

(Green Tea)ಡಯಟ್‌ ಗೆಂದು ಹಲವರು ಪ್ರತಿನಿತ್ಯ ಗ್ರೀನ್‌ ಟಿ ಯನ್ನು ಕುಡಿಯುತ್ತಾರೆ. ಗ್ರೀನ್‌ ಟಿ ಪೌಡರ್‌ ನಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಕುಡಿಯುವ ಗ್ರೀನ್‌ ಟಿ ಯಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಗ್ರೀನ್‌ ಟಿ ಪೌಡರ್‌ ನ ಪೇಸ್‌ ಪ್ಯಾಕ್‌ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಾಂತಿಯನ್ನು ಹೆಚ್ಚಿಸುತ್ತದೆ. ಅಷ್ಟಕ್ಕೂ ಗ್ರೀನ್ ಟೀ ಪೇಸ್‌ ಪ್ಯಾಕ್‌ ಮಾಡುವುದು ಹೇಗೆ ಅನ್ನುವ ಮಾಹಿತಿ ಇಲ್ಲಿದೆ.

(Green Tea)ಬೇಕಾಗುವ ಸಾಮಗ್ರಿಗಳು :
ಗ್ರೀನ್ ಟೀ ಪೌಡರ್
ಮೊಸರು
ಅರಿಶಿಣ
ಬಾದಾಮಿ ಎಣ್ಣೆ

ಮಾಡುವ ವಿಧಾನ:
ಒಂದು ಸಣ್ಣ ಬೌಲ್ ನಲ್ಲಿ ಗ್ರೀನ್ ಟೀ ಪೌಡರ್, ಒಂದು ಚಮಚ ಮೊಸರು, ಒಂದು ಪಿಂಚ್ ಅರಿಶಿಣ,ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಂಡು ಪೇಸ್‌ ಪ್ಯಾಕ್‌ ತಯಾರಿಸಿಕೊಳ್ಳಬೇಕು. ನಂತರ ಆ ಪೇಸ್‌ ಪ್ಯಾಕ್‌ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು. ಆನಂತರ ತಣ್ಣೀರಿನಲ್ಲಿ ಮುಖ ತೊಳೆದರೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು
ಮಸೂರ ದಾಲ್ ಪೌಡರ್
ಕಿತ್ತಳೆ ಸಿಪ್ಪೆಯ ಪುಡಿ
ರಕ್ತ ಚಂದನ ಪೌಡರ್
ಅರಿಶಿಣ

ಮಾಡುವ ವಿಧಾನ:
ಒಂದು ಸಣ್ಣ ಬೌಲ್ ನಲ್ಲಿ ಎರಡು ಚಮಚ ಕಡಲೆ ಹಿಟ್ಟು, ಒಂದು ಚಮಚ ಮಸೂರ ದಾಲ್ ಪೌಡರ್, ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಒಂದು ಚಮಚ ರಕ್ತ ಚಂದನ ಪೌಡರ್, ಒಂದು ಚಮಚ ಅರಿಶಿಣ ಹಾಕಿ ಕಲಸಿಕೊಂಡು ಒಂದು ಸಣ್ಣ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಸ್ನಾನ ಮಾಡುವಾಗ ಇದನ್ನು ಬಳಸಿದರೆ ಚರ್ಮದ ಕಾಂತಿ ಹೆಚ್ಚಿಸುವುದಲ್ಲದೆ ಜೊತೆಗೆ ಚರ್ಮದ ಸಮಸ್ಯೆಯನ್ನು ಗುಣಪಡಿಸುತ್ತದೆ.

ಇದನ್ನೂ ಓದಿ:Bus Accident : ಬಸ್‍ಗಳ ನಡುವೆ ಭೀಕರ ಅಪಘಾತ ; ಮೂವರು ಸಾವು, 17 ಮಂದಿಗೆ ಗಾಯ

ಇದನ್ನೂ ಓದಿ:Juice Good For Health : ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ

ಬೇಕಾಗುವ ಸಾಮಗ್ರಿಗಳು:
ಹೆಸರು ಕಾಳು
ಅಲವೇರಾ

ಮಾಡುವ ವಿಧಾನ:
ಹೆಸರು ಕಾಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿ ಕೊಳ್ಳಬೇಕು. ಪುಡಿಮಾಡಿ ಕೊಂಡ ಹೆಸರು ಕಾಳಿಗೆ ಅಲವೇರಾವನ್ನು ಹಾಕಿ ಕಲಸಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು 2-3 ನಿಮಿಷಗಳ ಕಾಲ ಬಿಡಬೇಕು ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಮುಖದ ಮೇಲಿರುವ ಕಲೆಯನ್ನು ಕಡಿಮೆ ಮಾಡಿ ಕಾಂತಿಯನ್ನು ಹೆಚ್ಚಿಸುತ್ತದೆ.

Green tea brightens the face :how to prepare green tea powder face pack

Comments are closed.