ಮಂಗಳವಾರ, ಏಪ್ರಿಲ್ 29, 2025
HomebusinessBank Saving Account :ಈ ಬ್ಯಾಂಕ್‌ ಉಳಿತಾಯ ಖಾತೆ ಮೇಲೆ ಗ್ರಾಹಕರಿಗೆ ಶೇ.7.5ರಷ್ಟು ಬಡ್ಡಿ ಹೆಚ್ಚಳ

Bank Saving Account :ಈ ಬ್ಯಾಂಕ್‌ ಉಳಿತಾಯ ಖಾತೆ ಮೇಲೆ ಗ್ರಾಹಕರಿಗೆ ಶೇ.7.5ರಷ್ಟು ಬಡ್ಡಿ ಹೆಚ್ಚಳ

- Advertisement -


ನವದೆಹಲಿ : ದೇಶದ ಜನತೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ತಮ್ಮ ಆದಾಯದಲ್ಲಿ ಸ್ವಲ್ಪ ಪ್ರಮಾಣವನ್ನು ಉಳಿತಾಯ ಮಾಡಲು ಇಚ್ಛಿಸುತ್ತಾರೆ. ಅದರಲ್ಲಿ (Bank Saving Account) ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಮೇಲೆ ಕಡಿಮೆ ಬಡ್ಡಿದರ ಇರುವುದರಿಂದ ಬೇರೆ ಕಡೆ ಹೂಡಿಕೆ ಮಾಡಲು ಇಚ್ಛಿಸುವವರೇ ಹೆಚ್ಚಾಗಿದೆ. ಆದರೆ ಇದೀಗ ಹೆಚ್ಚಿನ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗಾಗಿ ಶೇ.7.5ರಷ್ಟು ಬಡ್ಡಿ ನೀಡಲು ಮುಂದಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವುದಕ್ಕಾಗಿ ಸತತವಾಗಿ ಬಡ್ಡಿದರಗಳನ್ನು ಹೆಚ್ಚಿಸುತ್ತಾ ಬಂದಿದೆ. ಹಾಗಾಗಿ ಇದು ಹೆಚ್ಚಾಗಿ ಬ್ಯಾಂಕಿನ ಉಳಿತಾಯ ಖಾತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೀಗಾಗಿ ತನ್ನ ಗ್ರಾಹಕರಿಗೆ (Saving Account ROI) ಉಳಿತಾಯ ಖಾತೆಯಲ್ಲಿ ಶೇ.7.5 ರಷ್ಟು ಲಾಭವನ್ನು ನೀಡುತ್ತಿರುವ ಅಂತಹ ಕೆಲ ಬ್ಯಾಂಕ್ ಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹಾಗಾದರೆ ಆ ಬ್ಯಾಂಕ್‌ಗಳ ಯಾವುದೆಲ್ಲಾ ಎನ್ನುವುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ : RBI Re-KYC Rules | ಬ್ಯಾಂಕ್‌ ಗ್ರಾಹಕರ ಗಮನಕ್ಕೆ : eKYC ಕುರಿತು RBIನಿಂದ ಮಹತ್ವದ ಘೋಷಣೆ

ಇದನ್ನೂ ಓದಿ : Last Day To Link PAN With Aadhaar | ಏ.1ರ ಒಳಗೆ ಪಾನ್‌ – ಆಧಾರ್‌ ಲಿಂಕ್‌ ಮಾಡದಿದ್ದರೆ ಪಾನ್‌ ನಿಷ್ಕ್ರಿಯ : UIDAI ಹೊಸ ಆದೇಶ

ಇದನ್ನೂ ಓದಿ : Gas cylinder delivery : ಗ್ಯಾಸ್‌ ಸಿಲಿಂಡರ್‌ ಡೆಲಿವರಿ ವೇಳೆ ಹೆಚ್ಚುವರಿ ಹಣ ಕೇಳ್ತಾರಾ ? ಹಾಗಾದ್ರೆ ಹೀಗೆ ಮಾಡಿ

  1. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸೇವಿಂಗ್ಸ್ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 7.5% ವರೆಗೆ ಬಡ್ಡಿಯನ್ನು ನೀಡಲು ನಿರ್ಧಾರ ಮಾಡಿದೆ. ಹಾಗಾಗಿ ಪ್ರಸ್ತುತ ಈ ಬ್ಯಾಂಕ್ ಉಳಿತಾಯ ಖಾತೆಗೆ ಗರಿಷ್ಠ ಬಡ್ಡಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
  2. ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯ ಮೇಲೆ 7% ಬಡ್ಡಿಯನ್ನು ನೀಡುತ್ತಿದೆ. ಅದಕ್ಕಾಗಿ ಈ ಬ್ಯಾಂಕಿನ ಗ್ರಾಹಕರು ಕನಿಷ್ಠ 2,000 ರೂ.ನಿಂದ 5,000 ರೂ. ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಇಡಬೇಕಾಗಿದೆ.
  3. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ ಶೇಕಡಾ 7 ರವರೆಗಿನ ಬಡ್ಡಿದರವನ್ನು ಪಾವತಿಸುತ್ತಿದೆ. ಇದಕ್ಕಾಗಿ ಈ ಬ್ಯಾಂಕಿನ ಗ್ರಾಹಕರು ಕೂಡ 2,500 ರೂ.ನಿಂದ 10,000 ರೂ.ವರೆಗಿನ ಕನಿಷ್ಠ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಲ್ಲಿ ನಿರ್ವಹಿಸುವುದು ಅವಶ್ಯಕವಾಗಿದೆ.
  4. ಡಿಸಿಬಿ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 7% ಬಡ್ಡಿದರ ಪಾವತಿಸುತ್ತಿದೆ. ಹಾಗಾಗಿ ಈ ಬ್ಯಾಂಕ್‌ನಲ್ಲಿ ಗ್ರಾಹಕರು ಕನಿಷ್ಠ 2,500 ರಿಂದ 5,000 ರೂ. ಮಿನಿಮಮ್ ಮೊತ್ತವನ್ನು ಖಾತೆಯಲ್ಲಿ ಹೊಂದಿರುವುದು ಕಡ್ಡಾಯವಾಗಿದೆ.
  5. ಬಂಧನ್ ಬ್ಯಾಂಕ್ ಮತ್ತು RBL ಬ್ಯಾಂಕ್ ತಮ್ಮ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 6.5% ಲಾಭವನ್ನು ಪಾವತಿಸುತ್ತಿದೆ. ಎರಡೂ ಬ್ಯಾಂಕ್‌ಗಳಲ್ಲಿಯೂ ಕೂಡ 2,500 ರಿಂದ 5,000 ರೂ.ವರೆಗೆ ಮೊತ್ತವನ್ನು ತಮ್ಮ ಉಳಿತಾಯ ಖಾತೆಯಲ್ಲಿ ಕಾಯ್ದುರಿಸುವುದು ಅವಶ್ಯಕವಾಗಿದೆ.

Bank Saving Account :7.5% interest increase for customers on this bank savings account

RELATED ARTICLES

Most Popular