Karun Nair Emotional tweet : “ಡಿಯರ್ ಕ್ರಿಕೆಟ್.., ನನಗೊಂದು ಚಾನ್ಸ್ ಕೊಡು”.. ರಣಜಿ ತಂಡದಿಂದ ಹೊರ ಬಿದ್ದ ಕರುಣ್ ನಾಯರ್ ಭಾವುಕ ಸಂದೇಶ

ಬೆಂಗಳೂರು: Karun Nair Emotional tweet : ಆತ ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಸಿಡಿಸಿರುವ ಕೇವಲ 2ನೇ ಆಟಗಾರ. ರಣಜಿ ಟ್ರೋಫಿಯಲ್ಲೂ (Ranji Trophy 2022-23) ತ್ರಿಶತಕ ಬಾರಿಸಿ ಅಬ್ಬರಿಸಿದ್ದ ಪ್ರತಿಭಾವಂತ. ಈಗ ಆ ಆಟಗಾರನಿಗೆ ಕರ್ನಾಟಕದ ತಂಡದಲ್ಲಿ ಸ್ಥಾನವಿಲ್ಲ. ಇದು ಕರುಣ್ ನಾಯರ್ ಅವರ ನೋವಿನ ಕಥೆ.

2016ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಮೋಘ ಅಜೇಯ 303 ರನ್ ಗಳಿಸಿದ್ದ ಕರುಣ್ ನಾಯರ್ ಇಡೀ ಕ್ರಿಕೆಟ್ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಆದರೆ ದುರದೃಷ್ಟ ನೋಡಿ.. ಭಾರತ ಪರ ಟೆಸ್ಟ್ ತ್ರಿಶತಕ ಬಾರಿಸಿದ ಆಟಗಾರನೀಗಗ ಕರ್ನಾಟಕ ತಂಡಕ್ಕೇ ಬೇಡವಾಗಿದ್ದಾನೆ. ಈ ಬೇಸರವನ್ನು ಕರುಣ್ ನಾಯರ್ ಟ್ವಿಟರ್ ಸಂದೇಶದ ಮೂಲಕ ಹೊರ ಹಾಕಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಶನಿವಾರ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿತ್ತು. ತಂಡದ ಪಟ್ಟಿ ಹೊರ ಬಿದ್ದಾಗ ಕರುಣ್ ನಾಯರ್ ಅವರಿಗೆ ಆಘಾತ ಕಾದಿತ್ತು. 32 ಮಂದಿ ಸಂಭಾವ್ಯರ ಪಟ್ಟಿಯಲ್ಲಿದ್ದ ಕರುಣ್ ಅವರನ್ನು ಅಂತಿಮ 15ರ ಬಳಗದಿಂದ ಕೈಬಿಡಲಾಗಿತ್ತು. ಇದರಿಂದ ತೀವ್ರ ಬೇಸರಕ್ಕೊಳಗಾಗಿರುವ 31 ವರ್ಷದ ಕರುಣ್ ನಾಯರ್ ಟ್ವಿಟರ್’ನಲ್ಲಿ ಭಾವುಕ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. “ಡಿಯರ್ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ನೀಡು” ಎಂದು ಟ್ವಿಟರ್’ನಲ್ಲಿ ಕರುಣ್ ಬರೆದುಕೊಂಡಿದ್ದಾರೆ.

ಕರುಣ್ ನಾಯರ್ ಅವರ ಈ ಭಾವುಕ ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಪ್ರಿಯರು, “ಆದಷ್ಟು ಬೇಗ ಆ ಅವಕಾಶ ನಿಮಗೆ ಸಿಗಲಿ, ನೀವು ಮತ್ತೆ ಕರ್ನಾಟಕ ತಂಡದಲ್ಲಿ ಕಾಣಿಸಿಕೊಳ್ಳುವಂತಾಗಲಿ” ಎಂದು ಟ್ವಿಟರ್’ನಲ್ಲಿ ಹಾರೈಸಿದ್ದಾರೆ.

2016ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಕರುಣ್ ನಾಯರ್’ಗೆ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, 62.33ರ ಸರಾಸರಿಯಲ್ಲಿ ಒಂದು ತ್ರಿಶತಕ ಸಹಿತ 374 ರನ್ ಗಳಿಸಿದ್ದಾರೆ. ಭಾರತ ಪರ 2 ಏಕದಿನ ಪಂದ್ಯಗಳನ್ನೂ ಆಡಿರುವ ಕರುಣ್ 46 ರನ್ ಕಲೆ ಹಾಕಿದ್ದಾರೆ. ಟೆಸ್ಟ್’ನಲ್ಲಿ ತ್ರಿಶತಕ ಬಾರಿಸಿದ ನಂತರ ಕರುಣ್ ಅವರಿಗೆ ಕೇವಲ 4 ಇನ್ನಿಂಗ್ಸ್’ಗಳಲ್ಲಿ ಮಾತ್ರ.

2015ರ ರಣಜಿ ಫೈನಲ್’ನಲ್ಲಿ ಕರುಣ್ ನಾಯರ್ ತಮಿಳುನಾಡು ವಿರುದ್ಧ ಅಮೋಘ ತ್ರಿಶತಕ ಬಾರಿಸಿ ಕರ್ನಾಟಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2013-14ನೇ ಸಾಲಿನ ರಣಜಿ ಸಾಲಿನಲ್ಲಿ ಹ್ಯಾಟ್ರಿಕ್ ಶತಕಗಳೊಂದಿಗೆ ಮಿಂಚಿದ್ದರು. ವೃತ್ತಿಜೀವನದಲ್ಲಿ ಒಟ್ಟು 85 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಕರುಣ್ ನಾಯರ್, 48.94ರ ಉತ್ತಮ ಸರಾಸರಿಯಲ್ಲಿ 15 ಶತಕ ಮತ್ತು 27 ಅರ್ಧಶತಗಳ ಸಹಿತ 5,922 ರನ್ ಕಲೆ ಹಾಕಿದ್ದಾರೆ.

ಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ (Ranji Trophy 2022-23) ಮೊದಲೆರೆಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಮಯಾಂಕ್ ಅಗರ್ವಾಲ್’ಗೆ (Mayank Agarwal captain) ನಾಯಕ ಪಟ್ಟ ಕಟ್ಟಲಾಗಿದೆ.

ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಅನುಭವಿ ಬ್ಯಾಟ್ಸ್’ಮನ್ ಕರುಣ್ ನಾಯರ್’ಗೆ (Karun Nair) ರಣಜಿ ತಂಡದಲ್ಲೂ ಅವಕಾಶ ನಿರಾಕರಿಸಲಾಗಿದೆ.

ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಅಭಿಯಾನ ಡಿಸೆಂಬರ್ 13ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ವಿಸಸ್ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಡಿಸೆಂಬರ್ 20ರಂದು ಬೆಂಗಳೂರನಲ್ಲೇ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ 2022-23: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ (Karnataka Ranji Team)
1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ನಿಕಿನ್ ಜೋಸ್, 4.ವಿಶಾಲ್ ಓನಟ್, 5.ಮನೀಶ್ ಪಾಂಡೆ, 6.ಕೆ.ವಿ ಸಿದ್ಧಾರ್ಥ್, 7.ಬಿ.ಆರ್ ಶರತ್ (ವಿಕೆಟ್ ಕೀಪರ್), 8.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 9.ಕೃಷ್ಣಪ್ಪ ಗೌತಮ್, 10.ಶ್ರೇಯಸ್ ಗೋಪಾಲ್, 11.ರೋನಿತ್ ಮೋರೆ, 12.ವಿ.ಕೌಶಿಕ್, 13.ವಿದ್ವತ್ ಕಾವೇರಪ್ಪ, 14.ವೈಶಾಖ್ ವಿಜಯ್ ಕುಮಾರ್, 15.ಶುಭಾಂಗ್ ಹೆಗ್ಡೆ.

ಕೋಚ್: ಪಿ.ವಿ ಶಶಿಕಾಂತ್
ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ
ಫಿಸಿಯೊ: ಜಾಬಾ ಪ್ರಭು
ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್
ಮ್ಯಾನೇಜರ್: ಎ.ರಮೇಶ್ ರಾವ್
ವೀಡಿಯೊ ಅನಾಲಿಸ್ಟ್: ರಾಜ್ ಕಿರೀಟ್ ಕಪಾಡಿಯಾ

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka)
ಡಿಸೆಂಬರ್ 13-16 Vs ಸರ್ವಿಸಸ್ (ಬೆಂಗಳೂರು)
ಡಿಸೆಂಬರ್ 20-23 Vs ಪಾಂಡಿಚೇರಿ (ಬೆಂಗಳೂರು)
ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
ಜನವರಿ 10-13 Vs ರಾಜಸ್ಥಾನ (TBC)
ಜನವರಿ 17-20 Vs ಕೇರಳ (ತಿರುವನಂತಪುರಂ)
ಜನವರಿ 24-27 Vs ಜಾರ್ಖಂಡ್ (ಚಂಢೀಗಢ)

ಇದನ್ನೂ ಓದಿ : Rahul captaincy lucky : ರಾಹುಲ್ ನಾಯಕತ್ವ ಸಹ ಆಟಗಾರರಿಗೆ ಅದೃಷ್ಟ, ಕಿಂಗ್ ಕೊಹ್ಲಿ, ಗಿಲ್, ಇಶಾನ್.. ಏನಿದು ಅದೃಷ್ಟದಾಟ?

ಇದನ್ನೂ ಓದಿ : Sachin Vs Virat : ಅಂದು ಸಚಿನ್, ಇಂದು ಕಿಂಗ್ ಕೊಹ್ಲಿ : ಬಾಂಗ್ಲಾದೇಶ ವಿರುದ್ಧವೇ ನೀಗಿತು ಶತಕದ ಬರ

Karun Nair posts emotional tweet after Karnataka team not selected for Ranji Trophy 2022-23

Comments are closed.