Last Day To Link PAN With Aadhaar | ಏ.1ರ ಒಳಗೆ ಪಾನ್‌ – ಆಧಾರ್‌ ಲಿಂಕ್‌ ಮಾಡದಿದ್ದರೆ ಪಾನ್‌ ನಿಷ್ಕ್ರಿಯ : UIDAI ಹೊಸ ಆದೇಶ

ನವದೆಹಲಿ : ದೇಶದ ನಾಗರಿಕರಿಗೆ ಕೇಂದ್ರ ಸರಕಾರದಿಂದ ಹೊಸ ಆದೇಶ ಹೊರ ಬಿದ್ದಿದೆ. ನಿಮ್ಮ ಪಾನ್‌ ಕಾರ್ಡ್‌ನ್ನು ನಿಮ್ಮ ಆಧಾರ್‌ಗೆ ಲಿಂಕ್ ಮಾಡದಿದ್ದರೆ, (Last Day To Link PAN With Aadhaar) ಅದು ಏಪ್ರಿಲ್ 1 ರಿಂದ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ. ಪಾನ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಸರಕಾರವು ನಾಗರಿಕರಿಗೆ ಗಡುವನ್ನು ನೀಡಿದೆ. ಇದನ್ನು ಆದಷ್ಟು ಬೇಗ ಮಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತದೆ.

“ಆದಾಯ-ತೆರಿಗೆ ಕಾಯಿದೆ, 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಎಲ್ಲಾ ಪಾನ್ ಕಾರ್ಡ್‌ ಹೊಂದಿರುವವರು ತಮ್ಮ ಪಾನ್ ಕಾರ್ಡ್‌ನ್ನು 31 ಮಾರ್ಚ್ 2023 ರ ಮೊದಲು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಏಪ್ರಿಲ್ 1 ,2023 ರ ಒಳಗೆ ಆಧಾರ್‌ ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ. ಕೊನೆಯ ದಿನಾಂಕ ಶೀಘ್ರದಲ್ಲೇ ಸಮೀಪಿಸುತ್ತಿದೆ. ತಡ ಮಾಡಬೇಡಿ, ಇಂದೇ ಲಿಂಕ್ ಮಾಡಿ!” ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಏಕೆ ?
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದರಿಂದ ನಕಲಿ ಪಾನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಖಾತೆದಾರರ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಸಂಪರ್ಕಗೊಳ್ಳುತ್ತದೆ. ತೆರಿಗೆ ಅನುಸರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಧಾರ್ ಬಯೋಮೆಟ್ರಿಕ್ ಆಧಾರಿತವಾಗಿರುವುದರಿಂದ ಮತ್ತು ಯಾವುದೇ ಇತರ ಗುರುತಿನ ದಾಖಲೆಯ ಆಧಾರದ ಮೇಲೆ ಪಡೆಯಲಾಗದ ಕಾರಣ, ಎರಡನ್ನು ಲಿಂಕ್ ಮಾಡುವುದು ತೆರಿಗೆ ಆಡಳಿತಕ್ಕೆ ಮುಖ್ಯವಾಗಿದೆ.

ಪಾನ್‌ ಕಾರ್ಡ್‌ ಅಗತ್ಯತೆಗಳು :
ಬ್ಯಾಂಕ್ ಖಾತೆಗಳನ್ನು ತೆರೆಯುಲು ಪಾನ್‌ ಅಗತ್ಯವಾಗಿ ಬೇಕು.
ಗ್ರಾಹಕರು ಬ್ಯಾಂಕ್ ಖಾತೆಯಲ್ಲಿ ನಗದು ಠೇವಣಿ ಮಾಡಲು ಬೇಕಾಗುತ್ತದೆ.
ಶೇರ್‌ ಮಾರುಕಟ್ಟೆಯಲ್ಲಿ ಡಿಮ್ಯಾಟ್ ಖಾತೆ ತೆರೆಯುಲು ಬೇಕಾಗುತ್ತದೆ.
ಸ್ಥಿರ ಆಸ್ತಿಗಳ ವಹಿವಾಟು ಮತ್ತು ಭದ್ರತೆಗಳಲ್ಲಿ ವ್ಯವಹರಿಸುವುದು.
PAN ಕಾರ್ಡ್ ದೇಶದ ಎಲ್ಲಾ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿಂದ ಸ್ವೀಕರಿಸಲ್ಪಟ್ಟ ಫೋಟೋ ಗುರುತಿನ ಸಾಧನವಾಗಿದೆ.
ಸೇರಿದಂತೆ ಹಲವಾರು ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಡ್ಡಾಯವಾಗಿದೆ. ಹಾಗಾಗಿ ದೇಶದ ನಾಗರಿಕರು ಕೂಡಲೇ ಆಧಾರ್‌ನೊಂದಿಗೆ ಪಾನ್‌ ಅಗತ್ಯವಾಗಿ ಲಿಂಕ್ ಮಾಡಬೇಕಾಗಿದೆ.

ಯಾರಿಗೆಲ್ಲಾ ಇದ್ದರಿಂದ ವಿನಾಯಿತಿ :
ಹಿಂದಿನ ಅಧಿಸೂಚನೆಯಂತೆ, ಆಧಾರ್ ಹೊಂದಿಲ್ಲದ ಮತ್ತು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದ ನಿವಾಸಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ ಅನಿವಾಸಿಗಳು, ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ಎಂಬತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮತ್ತು ಭಾರತದ ಪ್ರಜೆಗಳಲ್ಲದವರು ವಿನಾಯಿತಿ ಪಡೆದ ವರ್ಗಕ್ಕೆ ಸೇರುತ್ತಾರೆ.

ಪ್ಯಾನ್ ಕಾರ್ಡ್‌ನ್ನು ಆಧಾರ್ ಜೊತೆ ಲಿಂಕ್ ಮಾಡುವ ವಿಧಾನ :
ರೂ.1000 ಶುಲ್ಕವನ್ನು ಪಾವತಿಸಿದ ನಂತರ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ www.incometax.gov.in ನಲ್ಲಿ ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು. UIDAI ಅಥವಾ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ವೆಬ್‌ಸೈಟ್ ಇದನ್ನು ಮಾಡಲು ಸಂಪೂರ್ಣ ಮಾರ್ಗದರ್ಶಿಯನ್ನು ನೀಡುತ್ತದೆ. ಇದನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ : Gas cylinder delivery : ಗ್ಯಾಸ್‌ ಸಿಲಿಂಡರ್‌ ಡೆಲಿವರಿ ವೇಳೆ ಹೆಚ್ಚುವರಿ ಹಣ ಕೇಳ್ತಾರಾ ? ಹಾಗಾದ್ರೆ ಹೀಗೆ ಮಾಡಿ

ಇದನ್ನೂ ಓದಿ : 7th Pay Commission Latest News | ಕೇಂದ್ರ ಸರಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ : 10 ತಿಂಗಳ ಡಿಎ ಬಾಕಿ ಹೆಚ್ಚಳ

ಇದನ್ನೂ ಓದಿ : Nandini Product Price Hike:ಕೆಎಂಎಫ್ ನಿಂದ ಗ್ರಾಹಕರಿಗೆ ಬರೆ : ನಂದಿ‌ನಿ ತುಪ್ಪ, ಐಸ್ ಕ್ರೀಂ, ಪನ್ನೀರು ಬೆಲೆ ಏರಿಕೆ

  • ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ – https://incometaxindiaefiling.gov.in/
  • ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು.
  • ನಿಮ್ಮ ಪಾನ್ ಸಂಖ್ಯೆಯು ನಿಮ್ಮ ‘ಬಳಕೆದಾರ ಐಡಿ’ ಆಗಿರುತ್ತದೆ.
  • ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಬೇಕು.
  • ಈಗ, ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಿಮ್ಮನ್ನು ಕೇಳುತ್ತದೆ.
  • ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ ‘ಪ್ರೊಫೈಲ್ ಸೆಟ್ಟಿಂಗ್‌ಗಳು’ ಗೆ ಹೋಗಿ ಮತ್ತು ‘ಲಿಂಕ್ ಆಧಾರ್’ ಕ್ಲಿಕ್ ಮಾಡಬೇಕು.
  • PAN ವಿವರಗಳ ಪ್ರಕಾರ ಹುಟ್ಟಿದ ದಿನಾಂಕ ಮತ್ತು ಲಿಂಗದಂತಹ ಕೆಲವು ಖಾಲಿ ಜಾಗಗಳನ್ನು ಈಗಾಗಲೇ ಭರ್ತಿ ಮಾಡಲಾಗುತ್ತದೆ.
  • ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಬೇಕು.
  • ವಿವರಗಳು ಹೊಂದಾಣಿಕೆಯಾದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಈಗ ಲಿಂಕ್ ಮಾಡಿ” ಬಟನ್ ಕ್ಲಿಕ್ ಮಾಡಬೇಕು.
  • ನಿಮ್ಮ ಆಧಾರ್ ಅನ್ನು ನಿಮ್ಮ ಪ್ಯಾನ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಪಾಪ್-ಅಪ್ ಸಂದೇಶವು ನಿಮಗೆ ತಿಳಿಸುತ್ತದೆ
  • ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಬಹುದು.

Last Day To Link PAN With Aadhaar | PAN Inactive if PAN – Aadhaar Linked within A.1 : UIDAI New Order

Comments are closed.